For Quick Alerts
  ALLOW NOTIFICATIONS  
  For Daily Alerts

  ಅಪ್ಪು ಕೊನೆ ಸಿನಿಮಾ 'ಗಂಧದ ಗುಡಿ' ಎರಡನೇ ದಿನದ ಕಲೆಕ್ಷನ್ ಎಷ್ಟು?

  |

  'ಗಂಧದ ಗುಡಿ' ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಕೊನೆ ಸಿನಿಮಾ. ಕಾಕತಾಳೀಯವೋ ಏನೋ ಕೊನೆ ಸಿನಿಮಾದಲ್ಲೂ ಸಂದೇಶವನ್ನು ಇಟ್ಟು ಹೊರಟು ಹೋಗಿದ್ದಾರೆ. ಅದೇ ಅಪ್ಪು ಕಂಡ ಕನಸು ಈಗ ತೆರೆಮೇಲೆ ಮೂಡುತ್ತಿದೆ.

  ಅಪ್ಪು ತೆರೆಮೇಲೆ ಪವರ್‌ಸ್ಟಾರ್ ಆಗಿ ಕಂಡಿದ್ದೇ ಹೆಚ್ಚು. ಆದರೆ, 'ಗಂಧದ ಗುಡಿ' ಇದೂವರೆಗೂ ನಟಿಸಿದ ಸಿನಿಮಾಗಳ ಪೈಕಿ ವಿಭಿನ್ನ ಸಿನಿಮಾ. ಪುನೀತ್ ರಾಜ್‌ಕುಮಾರ್ ಆಗಿಯೇ ತೆರೆಮೇಲೆ ಕಾಣಿಸಿಕೊಳ್ಳುವ ಅಪ್ಪು ಈ ಸಿನಿಮಾದಲ್ಲಿ ನಗಿಸುತ್ತಾರೆ. ಅಳಿಸುತ್ತಾರೆ. ಅಚ್ಚರಿ ಮೂಡುವಂತೆ ಮಾಡುತ್ತಾರೆ.

  ಪುನೀತ್ ಅಭಿನಯದ 'ಗಂಧದಗುಡಿ': 'ನೀರಿನಂತೆ ಸರಳವಾದ ಜೀವ'ಪುನೀತ್ ಅಭಿನಯದ 'ಗಂಧದಗುಡಿ': 'ನೀರಿನಂತೆ ಸರಳವಾದ ಜೀವ'

  ಪವರ್‌ಸ್ಟಾರ್ ಅಭಿಮಾನಿಗಳಿಗೆ, ಕನ್ನಡಿಗರಿಗೆ ಈ ಸಿನಿಮಾ ನಿಜಕ್ಕೂ ಸ್ಪೆಷಲ್. ಯಾಕಂದ್ರೆ, ಇನ್ನು ಎಷ್ಟೇ ವರ್ಷಗಳಾದರೂ, ಕರ್ನಾಟಕ ಪ್ರಕೃತಿ ಸೌಂದರ್ಯ ಹೀಗಿತ್ತು ಅನ್ನೋದಕ್ಕೆ ಇದೊಂದು ದಾಖಲೆ. ಅದರಲ್ಲಿ ಸ್ವತ: ಪುನೀತ್ ರಾಜ್‌ಕುಮಾರ್ ಇದ್ದಾರೆ ಅನ್ನೋದು ಮತ್ತೊಂದು ದಾಖಲೆ. ಅದಕ್ಕೆ ಕನ್ನಡಿಗರು ಕೂಡ ಉತ್ಸಾಹದಿಂದಲೇ ಸಿನಿಮಾ ನೋಡುತ್ತಿದ್ದಾರೆ. ಮೊದಲ ದಿನ ಕಲೆಕ್ಷನ್ ಭರ್ಜರಿಯಾಗಿ ಇದ್ದಂತೆ ಎರಡನೇ ದಿನವೂ ಅದ್ಭುತವಾಗಿದೆ.

   'ಗಂಧದ ಗುಡಿ' ಬುಕಿಂಗ್ ಹೇಗಿದೆ?

  'ಗಂಧದ ಗುಡಿ' ಬುಕಿಂಗ್ ಹೇಗಿದೆ?

  'ಗಂಧದ ಗುಡಿ' ಬಿಡುಗಡೆಯಾಗಿ ಇಂದಿಗೆ (ಅಕ್ಟೋಬರ್ 30) ಮೂರನೇ ದಿನ. ಕಳೆದ ಎರಡು ದಿನಗಳಂತೆ ಮೂರನೇ ದಿನವೂ ಥಿಯೇಟರ್‌ನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಬುಕ್ ಮೈ ಶೋ ಪ್ರಕಾರ, ಟಿಕೆಟ್‌ಗಳನ್ನು ಫಾಸ್ಟ್ ಆಗಿ ಖರೀದಿ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ ಹೊತ್ತಿಗೆ 'ಗಂಧದ ಗುಡಿ' ಸಿನಿಮಾ ರಿಲೀಸ್ ಆದ ಕಡೆಗಳಲ್ಲೆಲ್ಲಾ ಸುಮಾರು ಶೇ.80ರಷ್ಟು ಬುಕಿಂಗ್ ಆಗಿದೆ. ಹೀಗಾಗಿ ಮೂರನೇ ದಿನವೂ ಸಿನಿಮಾ ಗಳಿಕೆ ಜೋರಾಗಿರುತ್ತೆ ಅನ್ನೋದನ್ನು ನಿರೀಕ್ಷೆ ಮಾಡಲಾಗುತ್ತಿದೆ. ಹಾಗೇ ಎರಡನೇ ದಿನ ಕಲೆಕ್ಷನ್ ಕೂಡ ಪಾಸಿಟಿವ್ ಆಗಿದ್ದು, ಟ್ರೇಡ್ ಅನಲಿಸ್ಟ್ ಲೆಕ್ಕ ಕೊಟ್ಟಿದ್ದಾರೆ.

  ಸದಾಶಿವನಗರದ ಮನೆಯ ತೋಟದಲ್ಲಿ ಟೆಂಟ್ ಹಾಕಿ ಮಲಗಿದ್ದ ಪುನೀತ್: ಕಾರಣ ಈಗ ರಿವೀಲ್!ಸದಾಶಿವನಗರದ ಮನೆಯ ತೋಟದಲ್ಲಿ ಟೆಂಟ್ ಹಾಕಿ ಮಲಗಿದ್ದ ಪುನೀತ್: ಕಾರಣ ಈಗ ರಿವೀಲ್!

   2ನೇ ದಿನ ಗಂಧದ ಗುಡಿಯ ಬಾಕ್ಸಾಫೀಸ್ ಗಳಿಕೆ ಎಷ್ಟು?

  2ನೇ ದಿನ ಗಂಧದ ಗುಡಿಯ ಬಾಕ್ಸಾಫೀಸ್ ಗಳಿಕೆ ಎಷ್ಟು?

  ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ'ಗೆ ಪ್ರೇಕ್ಷಕರು ಹಿಂದೆಂದೂ ನೀಡದಷ್ಟು ರೆಸ್ಪಾನ್ಸ್ ಕೊಟ್ಟಿದ್ದಾರೆ. ಕುಟುಂಬ ಸಮೇತ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಅದರಂತೆ ನಿನ್ನೆ (ಅಕ್ಟೋಬರ್ 29) ಕೂಡ ಪ್ರೇಕ್ಷಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಸಿನಿಮಾ ನೋಡಿದ್ದಾರೆ. 'ಗಂಧದ ಗುಡಿ' 2ನೇ ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ರಾಜ್ಯಾದ್ಯಂತ ಸುಮಾರು 4.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಅಂತ ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ.

   ಕಳೆದು ದಿನಗಳ ಕಲೆಕ್ಷನ್ ಎಷ್ಟು?

  ಕಳೆದು ದಿನಗಳ ಕಲೆಕ್ಷನ್ ಎಷ್ಟು?

  'ಗಂಧದ ಗುಡಿ'ಯ ದೃಶ್ಯ ವೈಭವ ಕನ್ನಡಿಗರ ಪಾಲಿಗೆ ಸಿಕ್ಕಿರೋ ಅದೃಷ್ಟ. ಇದೊಂದು ಸಿನಿಮಾ ಅಲ್ಲ. ಇದೊಂದು ಅನುಭವ ಅಂತ ಅಣ್ಣಾವ್ರ ಕುಟುಂಬವೇ ಹೇಳುತ್ತಾ ಬಂದಿದೆ. ಹೀಗಾಗಿ ತೆರೆಮೇಲೆ ಡ್ಯಾನ್ಸ್, ಆಕ್ಷನ್ ಏನೂ ಇಲ್ಲದೆ ಕರ್ನಾಟಕದ ದರ್ಶನ ಮಾಡಿಸುತ್ತಾ? ತಮ್ಮ ಅನುಭವವನ್ನು ಲೋಕಕ್ಕೆ ಸಾರಿದ ಅಪ್ಪು ಕೊನೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಮೊದಲ ದಿನ ಹೆಚ್ಚು ಕಡಿಮೆ 5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅದೇ ಎರಡನೇ ದಿನ 4.50 ಕೋಟಿ ರೂ. ಒಟ್ಟು 9.50 ಕೋಟಿ ರೂ. ವರೆಗೂ ಕಲೆಕ್ಷನ್ ಆಗಿದೆ ಅನ್ನೋದು ಟ್ರೇಡ್‌ ಎಕ್ಸ್‌ಪರ್ಟ್ಸ್ ಕೊಡುವ ಲೆಕ್ಕಾಚಾರ.

   'ಗಂಧದ ಗುಡಿ' ಪ್ರಿಡಿಕ್ಷನ್ ಏನು?

  'ಗಂಧದ ಗುಡಿ' ಪ್ರಿಡಿಕ್ಷನ್ ಏನು?

  'ಗಂಧದ ಗುಡಿ' ರೆಗ್ಯೂಲರ್ ಸಿನಿಮಾ ಅಲ್ಲ. ಹೀಗಾಗಿ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಹಾಕುವುದು ಅಸಾಧ್ಯ. ಪುನೀತ್ ರಾಜ್‌ಕುಮಾರ್ ಮೇಲೆ ಪ್ರೀತಿ, ಅವರು ಕೊಟ್ಟಿರುವ ಸಂದೇಶ, ಕರ್ನಾಟಕ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಅನ್ನುವ ಜನರು ಮತ್ತೆ ಮತ್ತೆ ಸಿನಿಮಾ ನೋಡುತ್ತಾರೆ. ಹೀಗಾಗಿ ಮುಂದಿನ ಒಂದು ವಾರಗಳ ಕಾಲ 'ಗಂಧದ ಗುಡಿ'ಗೆ ರೆಸ್ಪಾನ್ಸ್‌ ಹೇಗಿರುತ್ತೆ? ಅನ್ನೋದು ಬಾಕ್ಸಾಫೀಸ್ ಭವಿಷ್ಯವನ್ನು ನಿರ್ಧರಿಸಲಿದೆ.

  English summary
  Puneeth Rajkumar Starrer Gandhada Gudi Box Office Collection Day 2 Report, Know More.
  Sunday, October 30, 2022, 13:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X