For Quick Alerts
  ALLOW NOTIFICATIONS  
  For Daily Alerts

  ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್!

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಅನಾವರಣಕ್ಕೆ ದಿನಗಣನೆ ಶುರುವಾಗಿದೆ. ಇನ್ನು ಎರಡೇ ದಿನಗಳಲ್ಲಿಯೇ 'ಗಂಧದ ಗುಡಿ' ಲೋಕಾರ್ಪಣೆಯಾಗಲಿದೆ. ಕರ್ನಾಟಕ ರತ್ನ ಅಪ್ಪುವಿನ ಕರ್ನಾಟಕ ದರ್ಶನ ಹೇಗಿರುತ್ತೋ ಅಂತ ನೋಡುವುದಕ್ಕೆ ಜನರೂ ತುದಿಗಾಲಲ್ಲಿ ನಿಂತಿದ್ದಾರೆ.

  ಅಕ್ಟೋಬರ್ 28ಕ್ಕೆ 'ಗಂಧದ ಗುಡಿ' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಆದರೆ, ಅದಕ್ಕೂ ಮುನ್ನ ಈ ಸಿನಿಮಾದ ಪ್ರೀಮಿಯರ್ ಶೋವನ್ನು ಅರೇಂಜ್ ಮಾಡಲಾಗಿದೆ. ಪೇಯ್ಡ್ ಪ್ರೀಮಿಯರ್‌ಗೆ ಟಿಕೆಟ್ ಬುಕಿಂಗ್ ಆರಂಭ ಮಾಡುತ್ತಿದ್ದಂತೆ ಬಹುತೇಕ ಎಲ್ಲಾ ಥಿಯೇಟರ್‌ಗಳು ಹೌಸ್‌ಪುಲ್ ಆಗಿವೆ. ಹಾಗಿದ್ದರೆ, ಗಂಧದ ಗುಡಿ ಎಲ್ಲೆಲ್ಲೆ ಎಷ್ಷೆಷ್ಟು ಶೋಗಳಿವೆ? ಎಷ್ಟು ಶೋಗಳು ಹೌಸ್ ಫುಲ್ ಆಗಿವೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಪುನೀತ್ ದರ್ಶನಕ್ಕೆ ದಿನಗಣನೆ

  ಪುನೀತ್ ದರ್ಶನಕ್ಕೆ ದಿನಗಣನೆ

  'ಗಂಧದ ಗುಡಿ' ಸಿನಿಮಾ ಅಲ್ಲ. ಇದೊಂದು ಅನುಭವ ಅಂತ ರಾಘವೇಂದ್ರ ರಾಜ್‌ಕುಮಾರ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಕಂಡ ಕನಸಿನ 'ಗಂಧದ ಗುಡಿ'ಯನ್ನು ತೆರೆಮೇಲೆ ಬರುವುದಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿಯಿದೆ. ಅಷ್ಟರಲ್ಲೇ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪೇಯ್ಡ್ ಪ್ರೀಮಿಯರ್‌ ಎಲ್ಲಾ ಕಡೆಗೂ ಹೌಸ್‌ಫುಲ್ ಆಗಿದೆ. ಬಿಡುಗಡೆಗೆ ಒಂದು ದಿನ ಮುನ್ನವೇ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಟಿಕೆಟ್ ಸೋಲ್ಡ್ ಆಗಿದೆ.

  ಬೆಂಗಳೂರಿನ ಹೇಗಿದೆ ರೆಸ್ಪಾನ್ಸ್?

  ಬೆಂಗಳೂರಿನ ಹೇಗಿದೆ ರೆಸ್ಪಾನ್ಸ್?

  'ಗಂಧದ ಗುಡಿ' ಸ್ಯಾಂಡಲ್‌ವುಡ್‌ಗೆ ಒಂದು ವಿಶಿಷ್ಟ ಸಿನಿಮಾ. ಅಲ್ಲದೆ ಸ್ವತ: ಪುನೀತ್ ರಾಜ್‌ಕುಮಾರ್ ಕರ್ನಾಟಕದ ದರ್ಶನ ಮಾಡಿಸಲು ಹೊರಟಿರೋದು ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಅಂದ್ಹಾಗೆ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಮಾರು 27ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಅರೇಂಜ್ ಮಾಡಲಾಗಿತ್ತು. ಅಕ್ಟೋಬರ್ 27ರಂದು ಸಂಜೆ 7 ಗಂಟೆಯ ಬಳಿಕ ಪ್ರೀಮಿಯರ್ ಶೋ ಅರೇಂಜ್ ಮಾಡಲಾಗಿತ್ತು. ಬಹುತೇಕ ಎಲ್ಲಾ ಪ್ರೀಮಿಯರ್ ಶೋಗಳ ಟಿಕೆಟ್ ಸೋಲ್ಡ್ ಆಗಿದೆ.

  ರಾಜ್ಯ ಪ್ರಮುಖ ನಗರಗಳಲ್ಲಿ ಟಿಕೆಟ್ ಸೋಲ್ಡ್!

  ರಾಜ್ಯ ಪ್ರಮುಖ ನಗರಗಳಲ್ಲಿ ಟಿಕೆಟ್ ಸೋಲ್ಡ್!

  ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರೀಮಿಯರ್ ಶೋಗಳನ್ನು ಅರೇಂಜ್ ಮಾಡಲಾಗಿತ್ತು. ಸದ್ಯ ಮಲ್ಟಿಪ್ಲೆಕ್ಸ್‌ ಅಷ್ಟೇ ಲಿಸ್ಟ್ ಸಿಕ್ಕಿದೆ. ಹಾಗೇ ರಾಜ್ಯದ ಪ್ರಮುಖ ನಗರಗಳಲ್ಲೂ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಅರೇಂಜ್ ಮಾಡಲಾಗಿತ್ತು. ಮಂಗಳೂರಿನಲ್ಲಿ 3 ಶೋಗಳನ್ನು ಇಡಲಾಗಿದೆ. ಇಲ್ಲಿ ಸ್ವಲ್ಪ ನಿಧಾನ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ, ಮೈಸೂರಿನಲ್ಲಿ 4 ಶೋಗಳ ಟಿಕೆಟ್ ಈಗಾಗಲೇ ಸೋಲ್ಡ್ ಆಗಿದೆ. ಶಿವಮೊಗ್ಗ ಹಾಗೂ ಕಲಬುರ್ಗಿಯಲ್ಲೂ ತಲಾ ಒಂದೊಂದು ಶೋ ಇಡಲಾಗಿದ್ದು, ಅವು ಹೌಸ್‌ಫುಲ್ ಆಗಿವೆ.

  ಅಕ್ಟೋಬರ್ 28ಕ್ಕೆ 'ಗಂಧದ ಗುಡಿ' ಸಂಭ್ರಮ

  ಅಕ್ಟೋಬರ್ 28ಕ್ಕೆ 'ಗಂಧದ ಗುಡಿ' ಸಂಭ್ರಮ

  'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ರಿಲೀಸ್ ಆಗುತ್ತಿದೆ. ದೊಡ್ಮನೆ ಕುಟುಂಬದ ಟ್ರೇಡ್ ಮಾರ್ಕ್ ಸಿನಿಮಾ ಗ್ರ್ಯಾಂಡ್ ರಿಲೀಸ್‌ ಅಪ್ಪು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಆಗಿಯೇ ತೆರೆಮೇಲೆ ನೋಡುವುದಕ್ಕೆ ಕಾತುರರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾ ಬಿಡುಗಡೆ ದಿನ ಥಿಯೇಟರ್ ಮುಂದೆ ಸೆಲೆಬ್ರೆಷನ್ ಹೇಗಿರುತ್ತೆ? ಅಪ್ಪು ಅಭಿಮಾನಿಗಳು ಹೇಗೆಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಅನ್ನೋದು ಅಕ್ಟೋಬರ್ 28ಕ್ಕೆ ಕಣ್ತುಂಬಿಕೊಳ್ಳಬೇಕಿದೆ.

  English summary
  Puneeth Rajkumar Starrer Gandhada Gudi Premier Show Tickets Sold Out, Know More.
  Thursday, October 27, 2022, 7:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X