For Quick Alerts
  ALLOW NOTIFICATIONS  
  For Daily Alerts

  ಜೂನ್ 22 ಕ್ಕೆ 'ಅಂಜನಿಪುತ್ರ' ಶೂಟಿಂಗ್‌ಗೆ ಪುನೀತ್ ಹಾಜರು

  By Suneel
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ತಾಯಿಯ ಅಗಲಿಕೆಯಿಂದ ನೊಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಅಂದರೇ ಜೂನ್ 22 ರಿಂದ ತಮ್ಮ ಅಭಿನಯದ 'ಅಂಜನಿಪುತ್ರ' ಶೂಟಿಂಗ್‌ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.['ಅಂಜನಿಪುತ್ರ'ನ ಜೊತೆ ಅಂದದ ಅರಗಿಣಿ 'ಹರಿಪ್ರಿಯಾ'ಗೆ ಏನು ಕೆಲಸ?]

  ಪುನೀತ್ ರವರು ತಮ್ಮ ಚಿತ್ರೀಕರಣ ಸೇರಿದಂತೆ ಎಲ್ಲಾ ರೀತಿಯ ಕಮಿಟ್‌ಮೆಂಟ್ ಗಳನ್ನು ಪಾರ್ವತಮ್ಮ ರಾಜ್ ಕುಮಾರ್ ಅವರ ಅನಾರೋಗ್ಯ ಕಾರಣದಿಂದ ರದ್ದುಗೊಳಿಸಿ ಮುಂದೂಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಮೇ 31 ರಂದು ನಿಧನರಾದರು.

  ಇದೀಗ ಪುನೀತ್ ರವರು ತಾಯಿಯ ಅಗಲಿಕೆಯಿಂದ ಚೇತರಿಸಿಕೊಳ್ಳುತ್ತಿದ್ದು, ಈಗಾಗಲೇ ಶೇಕಡ 50 ರಷ್ಟು ಚಿತ್ರೀಕರಣ ಮುಗಿದಿರುವ 'ಅಂಜನಿಪುತ್ರ' ಚಿತ್ರದ ಉಳಿದ ಭಾಗದ ಶೂಟಿಂಗ್‌ಗಾಗಿ ಜೂನ್ 22 ರಿಂದ ಚಿತ್ರೀಕರಣಕ್ಕೆ ಹಿಂದಿರುಗಲಿದ್ದಾರೆ ಎಂದು ತಿಳಿದಿದೆ.

  ನಿರ್ದೇಶಕ ಎ ಹರ್ಷ ಸಹ ಇಷ್ಟು ದಿನ ಇತರೆ ಚಿತ್ರಗಳ ಡ್ಯಾನ್ಸ್ ಕೊರಿಯೋಗ್ರಫಿ ಮಾಡುವಲ್ಲಿ ಬಿಸಿಯಾಗಿದ್ದರು. ಅಲ್ಲದೇ ಈಗ 'ಭರ್ಜರಿ' ಚಿತ್ರದ ಹಾಡುಗಳ ಶೂಟಿಂಗ್‌ಗಾಗಿ ಸ್ಲೋವೇನಿಯಾಗೆ ತೆರಳಿರುವ ಎ ಹರ್ಷ ರವರು ಸಹ ಜೂನ್ 22 ರ ಒಳಗಾಗಿ ಹಿಂದಿರುಗಲಿದ್ದಾರೆ. ಅಲ್ಲಿಂದ ಬಂದ ತಕ್ಷಣ ಚಿತ್ರದ ಶೂಟಿಂಗ್ ಶುರುಮಾಡಲಿದ್ದಾರೆ.[ಪವರ್ ಸ್ಟಾರ್ ಹೊಸ ಚಿತ್ರಕ್ಕೆ 'ಕಿರಿಕ್' ಸಾನ್ವಿ ನಾಯಕಿ!]

  'ಅಂಜನಿಪುತ್ರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಹರಿಪ್ರಿಯ ಚಿತ್ರದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪುನೀತ್ ಗೆ ತಾಯಿಯಾಗಿ ರಮ್ಯಾ ಕೃಷ್ಣ ರವರು ನಟಿಸುತ್ತಿದ್ದಾರೆ. ಚಿತ್ರವನ್ನು ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್.ಕುಮಾರ್ ಮತ್ತು ಜಯಶ್ರೀ ದೇವಿ ರವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

  English summary
  Kannada Actor Puneeth Rajkumar will come back to 'Anjaniputra' shooting on June 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X