For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಕುಮಾರಸ್ವಾಮಿಗೆ ಮುನ್ನಿ ಬದ್ನಾಮ್ ಆಗುವ ಆಸೆ

  |

  ಕೋಡಿ ರಾಮಕೃಷ್ಣ ರಮ್ಯಾರನ್ನ ನಾಯಕಿಯನ್ನಾಗಿ ಮಾಡಿಕೊಂಡು ಚಿತ್ರವೊಂದನ್ನು ನಿರ್ದೇಶಿಸುವ ತಯಾರಿಯಲ್ಲಿರುವಾಗಲೇ, ಅದಕ್ಕೂ ಮುನ್ನ ರಾಧಿಕಾ ಕುಮಾರಸ್ವಾಮಿಗೆ ನಿರ್ದೇಶನ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ. ರಾಧಿಕಾ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದಾಗಲೇ ಆಕೆ ಮತ್ತೆ ನಟನೆಗಿಳಿವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು.

  ಆದರೆ ಸದ್ಯಕ್ಕೆ ನಿರ್ಮಾಣಕಷ್ಟೇ ನನ್ನ ಆದ್ಯತೆ ಎಂದು ಸ್ಪಷ್ಟಪಡಿಸಿದ್ದ ರಾಧಿಕಾ ಲಕ್ಕಿ ಚಿತ್ರದ ನಂತರ ಮನೆ ಸೇರಿದ್ದರು. ಅವರ ಹೆಸರಿನಲ್ಲಿ ಇನ್ನು ಎರಡು ಪ್ರಾಜೆಕ್ಟ್ ಗಳು ಸೆಟ್ಟೇರುವ ಬಗ್ಗೆ ಗಾಳಿಸುದ್ದಿಗಳು ಹರಿದಾಡಿವೆಯಾದರೂ ಯಾವುದೂ ನಿಜವಾಗಲಿಲ್ಲ. ಈಗ ಕೋಡಿ ರಾಮಕೃಷ್ಣ ನಿರ್ದೇಶಿಸುವ ಚಿತ್ರಕ್ಕೆ ರಾಧಿಕಾ ಮತ್ತೆ ಬಣ್ಣ ಹಚ್ಚಲಿದ್ದಾರೆ.

  ರಾಧಿಕಾ ಈಗೊಂದು ಏಳು ವರ್ಷದ ಹಿಂದೆ ನಟಿಸಿದ್ದ ತೆಲುಗು ಚಿತ್ರ 'ದೇವತಲು' ದಿಡೀರನೆ ನಿಂತು ಹೋಗಿತ್ತು. ಮಾಜಿ ಕುಮಾರಸ್ವಾಮಿಯವರನ್ನು ಕೈಹಿಡಿದ ರಾಧಿಕಾ ಆಮೇಲೆ ಬಹಿರಂಗವಾಗಿ ಕಾಣಿಸಿಕೊಳ್ಳಿರಲಿಲ್ಲ. ಕೋಡಿ ರಾಮಕೃಷ್ಣ ಅವರ ಸಿನಿಮಾ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ವರ್ಷದ ಹಿಂದೆ ಮತ್ತೆ ಅದೇ ಚಿತ್ರದ ಚಿತ್ರೀಕರಣಕ್ಕಾಗಿ ರಾಧಿಕಾ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಒಂದಷ್ಟು ದಿನ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದರು.

  ಮತ್ತೆ ಅದೇನಾಯ್ತೋ ಆ ಸಿನಿಮಾದ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಬಂದಿರುವ ವರ್ತಮಾನ ಏನೆಂದರೆ ರಾಧಿಕಾ ಮತ್ತೊಮ್ಮೆ ಆ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಏಳು ವರ್ಷದ ಹಿಂದೆ ಆ ಚಿತ್ರಕ್ಕೆ ಶೂಟಿಂಗ್ ಆಗಿತ್ತೋ ಅದಲ್ಲವನ್ನು ಕಿತ್ತೊಗೆದು ಕೋಡಿ ರಾಮಕೃಷ್ಣ ಮತ್ತೊಮ್ಮೆ ದೇವತಲು ಚಿತ್ರವನ್ನು ಪುನರಾರಂಭಿಸಲಿದ್ದಾರೆ.

  ಒಂದು ವೇಳೆ ಇದು ನಿಜವಾದರೆ ರಾಧಿಕಾ ಮದುವೆಯಾದ ಮೇಲೆ ಇದೇ ಮೊದಲ ಬಾರಿ ಚಿತ್ರವೊಂದಕ್ಕೆ ಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡಂತಾಗುತ್ತದೆ.

  ದಬಾಂಗ್ ಚಿತ್ರದ 'ಮುನ್ನಿ ಬದ್ನಾಮ್ ಹುಯಿ' ಯಂಥ ಹಾಡಿಗೆ ನರ್ತಿಸಬೇಕೆಂದು ಬಯಕೆ ವ್ಯಕ್ತಪಡಿಸಿದ ರಾಧಿಕಾ, ಮೈ ಪ್ರದರ್ಶನಕ್ಕೆ ನಿರ್ಬಂಧ ಹಾಕಿ ಅಂಥ ಹಾಡುಗಳಿಗೆ ಕೊರಿಯೋಗ್ರಫಿ ಮಾಡುವುದಾದರೆ ಅಂಥಾ ಹಾಡಿಗೆ ನರ್ತಿಸಲು ಈಗಲೂ ಸಿದ್ದ ಎಂದು ಹೇಳಿ ಬೆಚ್ಚಿ ಬೀಳಿಸಿದ್ದಾರೆ.

  English summary
  After a gap of seven years Kannada actress Radhika HD Kumaraswamy acting again Kodlu Ramakrishnas Telugu movie " Devatalu". She wants to dance like Munni Badnam Huyi in Bollywood movie Dabang.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X