»   » ಮಾರ್ಚ್ 10 ರಿಂದ 'ವೀರ ರಣಚಂಡಿ' ಆಗಿ ರಾಗಿಣಿ ನಿಮ್ಮ ಮುಂದೆ

ಮಾರ್ಚ್ 10 ರಿಂದ 'ವೀರ ರಣಚಂಡಿ' ಆಗಿ ರಾಗಿಣಿ ನಿಮ್ಮ ಮುಂದೆ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ 'ಶಿವಂ' ನಂತರ 'ಪರಪಂಚ' ಚಿತ್ರದಲ್ಲಿ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು ಬಿಟ್ರೆ, ಇತ್ತೀಚೆಗೆ ಯಾವುದೇ ಸಿನಿಮಾದಲ್ಲೂ ಲೀಡ್ ರೋಲ್ ನಲ್ಲಿ ನಟಿಸಿದ್ದು ಕಡಿಮೆ ಅಲ್ವಾ ಅನ್ನೋ ಫೀಲ್ ಬಹಳಷ್ಟು ಜನರಿಗಿತ್ತು. ಈಗ ಆ ಫೀಲ್ ಹೋಗಿಸಲೆಂದೆ 'ಮಾಸ್ ಕ್ವೀನ್' ನಾಳೆಯಿಂದ ನಿಮ್ಮ ಮುಂದೆ 'ವೀರ ರಣಚಂಡಿ' ಆಗಿ ಬರುತ್ತಿದ್ದಾರೆ.[ತುಪ್ಪದ ಬೆಡಗಿ ರಾಗಿಣಿ..ಗುದ್ದಿದ್ರೆ ಗೂಳಿ..! ಹುಷಾರ್]

'ರಾಗಿಣಿ ಐಪಿಎಸ್' ನಂತರ ಮತ್ತೆ ಆಕ್ಷನ್ ಕ್ವೀನ್ ಆಗಿ ಬಣ್ಣ ಹಚ್ಚಿರುವ ರಾಗಿಣಿ ದ್ವಿವೇದಿ ಅಭಿನಯದ 'ವೀರ ರಣಚಂಡಿ' ಚಿತ್ರ ನಾಳೆ(ಮಾರ್ಚ್ 10) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ರಾಗಿಣಿ 'ಲೇಡಿ ಡಾನ್' ಆಗಿ ಕೈಲಿ ಗನ್ ಸಹ ಹಿಡಿದು ಮಿಂಚಿದ್ದಾರೆ. 'ಹೆಸರು ನಂದಿನಿ... ಗುದ್ದಿದ್ರೇ ಗೂಳಿ' ಎಂಬ ಅಡಿಬರಹ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

Ragini Dwivedi Starrer 'Veera Ranachandi' movie releasing on march 10

ಈ ಹಿಂದೆ 'ರಾಗಿಣಿ ಐಪಿಎಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಆನಂದ್ ಪಿ ರಾಜು ಅವರೇ 'ವೀರ ರಣಚಂಡಿ' ಚಿತ್ರ ನಿರ್ದೇಶನ ಮಾಡಿದ್ದು, ವಿ. ಕುಪ್ಪುಸ್ವಾಮಿ ನಿರ್ಮಾಣಮಾಡಿದ್ದಾರೆ. ಎಸ್ ಪಿ ವೆಂಕಟೇಶ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.['ಸಪೂರ ಕಟಿ'ಯನು ಕಣ್ತೆರೆದು ನೋಡಿರಿ ಮಿಣಿ ಮಿಣಿ]

'ವೀರ ರಣಚಂಡಿ' ಚಿತ್ರದಲ್ಲಿ ಹಯಾಬುಜಾ ಬೈಕ್ ಏರಿ ಸಖತ್ ಸ್ಟಂಟ್ ಮಾಡಿರುವ ಗ್ಲ್ಯಾಮರ್ ಗೊಂಬೆ ರಾಗಿಣಿ ದ್ವಿವೇದಿ ನಾಯಕನ ರೇಂಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭರಾಜ್, ರಮೇಶ್ ಭಟ್, ಪದ್ಮಜಾ ರಾವ್, ಶರತ್ ಲೋಹಿತಾಶ್ವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಗಿಣಿ ಅವರ ಎರಡನೇ ಸಾಹಸಭರಿತ ಚಿತ್ರವಿದು.

English summary
Hot Actress Ragini Dwivedi Starrer 'Veera Ranachandi' movie releasing tomorrow (march 10).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada