For Quick Alerts
  ALLOW NOTIFICATIONS  
  For Daily Alerts

  'ಇಂದು ಅಪ್ಪುನೇ ಕಥಾನಾಯಕ.. ಆದರೆ ನಮ್ಮೊಂದಿಗಿಲ್ಲ': ಅಪ್ಪು ಬಗ್ಗೆ ರಜನಿ ಆಡಿದ ಮಾತುಗಳಿವು!

  |

  ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕನ್ನಡ ರಾಜ್ಯೋತ್ಸವದಂದೇ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

  ಮಳೆಯ ನಡುವೆಯೂ ಪುನೀತ್ ರಾಜ್‌ಕುಮಾರ್ ಬಾಲ್ಯದ ಬಗ್ಗೆ, ಸಮಾಜ ಸೇವೆಯ ಬಗ್ಗೆ, ಸಾಧನೆಯ ಬಗ್ಗೆ ರಜನಿಕಾಂತ್ ಅಭಿಮಾನಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾಲ್ಕು ವರ್ಷದ ಪುನೀತ್ ರಾಜ್‌ಕುಮಾರ್‌ರಿಂದ ಹಿಡಿದು 'ಅಪ್ಪು' ಸಿನಿಮಾ ವೀಕ್ಷಣೆ, ಉದಾರ ಮನಸ್ಸಿನ ಬಗ್ಗೆ ಸೂಪರ್‌ಸ್ಟಾರ್ ಮನಬಿಚ್ಚಿ ಮಾತಾಡಿದ್ದಾರೆ. ಆ ಮಾತಿನ ತುಣುಕುಗಳು ಇಲ್ಲಿದೆ.

  'ಅಪ್ಪು ' ಶರಣಂ ಅಯ್ಯಪ್ಪ' ಅಂದ ಶಬ್ದ ಕಿವಿಗೆ ಬಿತ್ತು'

  'ಅಪ್ಪು ' ಶರಣಂ ಅಯ್ಯಪ್ಪ' ಅಂದ ಶಬ್ದ ಕಿವಿಗೆ ಬಿತ್ತು'

  "ನಾನು ಪುನೀತ್ ರಾಜ್‌ಕುಮಾರ್ ಅವರನ್ನು 1979ರಲ್ಲಿ ಚೆನೈ-ಮದ್ರಾಸ್‌ನಲ್ಲಿ ನೋಡಿದೆ ನಾನು. ಹೇಗೆ ನೋಡಿದೆ ಅಂದರೆ, ಅಲ್ಲಿ ನಂಬಿಯರ್ ಸರ್ ಅಂತ ಇದ್ದಾರೆ. ಅವರು ಪ್ರತಿ ವರ್ಷ 45 ಕಿಲೋ ಮೀಟರ್ ನಡೆದು ಶಬರಿಮಲೆಗೆ ಹೋಗುತ್ತಾರೆ. ಅಲ್ಲಿ 250 ಸ್ವಾಮಿಗಳು ಹೋಗುತ್ತಾರೆ. ಅದರಲ್ಲಿ ವರನಟ ಡಾ.ರಾಜ್‌ಕುಮಾರ್ ಸರ್ ಕೂಡ ಬರುತ್ತಿದ್ದರು. ಶಬರಿಮಲೆಗೆ ಹೋದಾಗ ಅಲ್ಲಿ ತುಪ್ಪ ಹಾಕುತ್ತಾರೆ. ಅಲ್ಲಿ ಸ್ವಾಮಿಯೇ ಎನ್ನುತ್ತಾರೆ. ಆಗ ಎಲ್ಲರೂ ಶರಣಂ ಅಯ್ಯಪ್ಪ ಅಂತ ಹೇಳಬೇಕು. ವೀರಮಣಿ ಗಾಯಕರೊಬ್ಬರು ಹಾಗೆ ಹೇಳುತ್ತಿದ್ದರು. ಆದರೆ,1979ನಲ್ಲಿ ನಾವೆಲ್ಲರೂ ಕೂತಿದ್ದೇವೆ. ಒಂದು ಚಿಕ್ಕ ಮಗು ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಶಬ್ಧ ಕೇಳಿ ಬಂತು. ಒಂದು ಮಣಿ ಝೇಂಕಾರದ ಹಾಗೆ ಒಂದು ಸದ್ದು. ಎಲ್ಲರಿಗೂ ಕೇಳಿ ರೋಮಾಂಚನವಾಗುತ್ತೆ. ಇದು ಯಾರ ಮಗುವಿನ ಸದ್ದು ಎಂದು ಹೋಗಿ ನೋಡಿದರೆ, ರಾಜ್‌ಕುಮಾರ್ ಅವರ ಮಡಿಲಿನಲ್ಲಿ ಕಪ್ಪು ಮಗು, ಚಂದ್ರನಂತಹ ಕಳೆ, ನಕ್ಷತ್ರದಂತಹ ಕಣ್ಣುಗಳು ಹೊಳೆಯುತ್ತಾ, ನಗುನಗುತ್ತಾ ಕೂತು ಕೊಂಡಿದೆ. ಕೃಷ್ಣನ ಹಾಗೆ ಯಾರು ಕೂಗಿದರೂ ಅವರೊಟ್ಟಿಗೆ ಹೋಗುತ್ತೆ. ಎಲ್ಲರಿಗೂ ಅಷ್ಟೊಂದು ಇಷ್ಟ. ಆ ಮಗುನಾ ಅಣ್ಣಾವ್ರು ಹೆಗಲ ಮೇಲೆ ಕೂರಿಸಿಕೊಂಡು 48 ಕಿಮೀ ನಡೆದುಕೊಂಡೇ ಹೋಗುತ್ತಿದ್ದರು. ಆಗ ನೋಡಿದ ಮಗು ಬೆಳೆದು ಬೆಳೆದು ಬಂದಿದ್ದಾರೆ."

  'ಅಪ್ಪು' 100 ದಿನ ಓಡುತ್ತೆ ಎಂದಿದ್ದೆ

  'ಅಪ್ಪು' 100 ದಿನ ಓಡುತ್ತೆ ಎಂದಿದ್ದೆ

  "ಅಪ್ಪು ಪಿಕ್ಚರ್ ಬಂದಾಗ ಅಣ್ಣಾವ್ರ ಮನೆಗೆ ಹೋಗಿದ್ದೆ. ಆಗ ಅಣ್ಣಾವ್ರು ಹೇಳಿದ್ರು, ಅಪ್ಪು ಪಿಕ್ಚರ್ ಬಂದಿದೆ. ತುಂಬಾ ಚೆನ್ನಾಗಿ ಹೋಗ್ತಿದೆ. ನೋಡ್ತೀರಾ ರಜನಿಕಾಂತ್ ಅವರೇ ಅಂತ ಕೇಳಿದ್ರು. ಕಂಡಿತಾ ನೋಡುತ್ತೇನೆ ಅಣ್ಣಾವ್ರೇ ಅಂತ ಹೇಳಿದ್ದೆ. ಆ ಡ್ಯಾನ್ಸ್, ಆ ಫೈಟ್ ನೋಡಿ ರೋಮಾಂಚನವಾಗಿ, ಈ ಪಿಕ್ಚರ್ 100 ದಿನ ಕಂಡಿತಾ ಓಡುತ್ತೆ ಅಂತ ಹೇಳಿದ್ದೆ. 100 ಡೇಸ್ ಆದರೆ, ನೀವೇ ಬಂದು ನಿಮ್ಮ ಕೈಯಿಂದ ಶೀಲ್ಡ್ ಕೊಡಬೇಕು ಅಂತ ಅಣ್ಣಾವ್ರು ಹೇಳಿದ್ರು. ಅಣ್ಣಾವ್ರ ಮಾತಿಗೆ ಮರು ಮಾತೇ ಇಲ್ಲ. ಪಿಕ್ಚರ್ 100 ದಿನ ಆಯ್ತು. ಅಂಬೇಡ್ಕರ್ ಭವನದಲ್ಲಿ ಅಪ್ಪುಗೆ ನನ್ನ ಕೈಯಿಂದ ಶೀಲ್ಡ್ ಕೊಟ್ಟೆ."

  'ಅಂದು, ಇಂದು ಅಪ್ಪುನೇ ಕಥಾನಾಯಕ'

  'ಅಂದು, ಇಂದು ಅಪ್ಪುನೇ ಕಥಾನಾಯಕ'

  "ಅಪ್ಪು 100 ದಿನದ ಸಮಾರಂಭದಲ್ಲಿ ಅಪ್ಪುನೇ ಕಥಾನಾಯಕ. ಈ ಸಮಾರಂಭದಲ್ಲೂ ಅಪ್ಪನೇ ಕಥಾನಾಯಕ. ಆದರೆ ಅಪ್ಪು ನಮ್ಮೊಂದಿಗೆ ಇಲ್ಲ. ಅದನ್ನು ಎಷ್ಟು ನೆನೆಸಿಕೊಂಡರೂ ಕೂಡ ಜೀರ್ಣ ಮಾಡಿಕೊಳ್ಳಲು ಸಾಧ್ಯನೇ ಇಲ್ಲ. ಅಪ್ಪು ಮರೆಯಾದಾಗ, ನನಗೆ ಚಿಕ್ಕ ಅಪರೇಷನ್ ಆಗಿ ನಾನು ಆಸ್ಪತ್ರೆಯಲ್ಲಿಇದ್ದೆ. ನನಗೆ ಆ ವಿಷಯ ಹೇಳಬಾರದು ಅಂತ ಯಾರೂ ನನಗೆ ಹೇಳಲಿಲ್ಲ. ಮೂರು ದಿನ ಆದಮೇಲೆ ನನಗೆ ಆ ವಿಷಯ ಗೊತ್ತಾಯ್ತು. ನನಗೆ ನಂಬಲಿಕ್ಕೆ ಆಗಲಿಲ್ಲ. ಹೇಗೆ ಸಾಧ್ಯ? ಚಿಕ್ಕ ವಯಸ್ಸು, 46 ವಯಸ್ಸು ಅಂತ ಆಗಲೇ ನನಗೆ ಗೊತ್ತಾಯ್ತು. ನಾನು ಆರೋಗ್ಯವಾಗಿದ್ದರೂ ಕೂಡ ಅಪ್ಪು ಮುಖವನ್ನು ನೋಡಲು ನನಗೆ ಆಗುತ್ತಿರಲಿಲ್ಲ. ಆ ನಾಲ್ಕು ವರ್ಷದ ಮಗುನೇ ನನ್ನ ಬ್ರೈನ್‌ನಲ್ಲಿದೆ. ಅದನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ."

  ಅಪ್ಪು ನೋಡಲು ಲಕ್ಷಾಂತರ ಜನ ಯಾಕೆ ಬಂದ್ರು?

  ಅಪ್ಪು ನೋಡಲು ಲಕ್ಷಾಂತರ ಜನ ಯಾಕೆ ಬಂದ್ರು?

  "ಟಿವಿ ಚಾನೆಲ್‌ಗಳಲ್ಲಿ ನೋಡಿದೆ. ಏನು ಜನ. ಲಕ್ಷಾಂತರ ಜನ. ಯಾಕೆ ಬಂದ್ರು ಅಷ್ಟು ಜನ? ಅಪ್ಪು ಒಬ್ಬ ನಟ. ನಟಸಾರ್ವಭೌಮನ ಮಗ ಅಂತ ಬಂದ್ರಾ ಅಷ್ಟು ಜನ? ಇಲ್ಲಾ, ಅವನ ಮನುಷತ್ವಕ್ಕೆ, ಸೃಜನವಾದ ಅವನ ಹೃದಯಕ್ಕೆ ಅವನ ಧಾರಾಳವಾದ ಧಾನ ಮಾಡುವ ಗುಣಕ್ಕೆ, ಕೋಟಿ ಕೋಟಿ ಹಣ ಬಲ ಕೈಯಿಂದ ಕೊಟ್ಟಿದ್ದು ಎಡ ಕೈಗೆ ಗೊತ್ತಿಲ್ಲದೆ ದಾನ ಮಾಡಿದ್ದಾನೆ. ಎಷ್ಟು ದೊಡ್ಡ ಆತ್ಮ ಅದು. ಅಪ್ಪು ಸಾಧಾರಾಣ ಮಗು ಅಲ್ಲ. ಒಬ್ಬ ನಟ ನಟನೆಯಿಂದ ಜನರ ಪ್ರೀತಿ ಸಂಪಾದನೆ ಮಾಡಲು ಸಾಧ್ಯವಿಲ್ಲ. ನಿಜ ಜೀವನದಲ್ಲಿ ಅವನು ಹೇಗೆ ಬಾಳುತ್ತಾನೆ. ಜನಕ್ಕೆ ಅವನು ಏನು ಕೊಡುತ್ತಾನೆ. ಪಿಕ್ಚರ್‌ನಲ್ಲಿ ಏನೇನು ಆದರ್ಶವನ್ನು ಹೇಳುತ್ತಾನೆ. ಅದರಿಂದಲೇ ಜನರ ಮನಸ್ಸನ್ನು ಉಳಿಸಿಕೊಳ್ಳಬಹುದು. ಅದು ನಮ್ಮ ಅಪ್ಪು ಮಾಡಿದ ಕೆಲಸ." ಎಂದು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

  English summary
  Rajinikanth Speech About Puneeth Rajkumar In Karnataka Ratna Award Function, Know More.
  Tuesday, November 1, 2022, 18:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X