»   » ರಜನಿ 'ಕೋಚಡಯಾನ್' ಲಕಲಕ ಪೋಸ್ಟರ್ ರಿಲೀಸ್

ರಜನಿ 'ಕೋಚಡಯಾನ್' ಲಕಲಕ ಪೋಸ್ಟರ್ ರಿಲೀಸ್

By: ಶಂಕರ್, ಚೆನ್ನೈ
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ 'ಕೋಚಡಯಾನ್' ಚಿತ್ರದ ಕಥೆ ಏನಾಯ್ತು ಎಂದು ಅವರ ಅಭಿಮಾನಿಗಳು ಕಾದುಕಾದು ಕಂಗಾಲಾಗಿದ್ದರು. ಈಗ ಅವರ ಗಲಿಬಿಲಿಗೆ ಫುಲ್ ಸ್ಟಾಪ್ ಹಾಕುವ ಪ್ರಯತ್ನವನ್ನು ಅವರ ಪುತ್ರಿ ಸೌಂದರ್ಯಾ ಅವರು ಮಾಡಿದ್ದಾರೆ.

ಕೋಚಡಯಾನ್ ಚಿತ್ರದ ಲೇಟೆಸ್ಟ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ರಜನಿ ಅಭಿಮಾನಿ ಬಳಗದ ತೀವ್ರ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ. ಇಲ್ಲದಿದ್ದರೆ ರಜನಿ ಅಭಿಮಾನಿಗಳು ಲಕಲಕ ಎಂದು ಸೀದಾ ಅವರ ಮನೆಗೆ ನುಗ್ಗಿತ್ತಿದ್ದರೇನೋ. ಅವರು ಎಷ್ಟು ದಿನ ಎಂದು ತಾಳ್ಮೆವಹಿಸಲು ಸಾಧ್ಯ ಹೇಳಿ.


ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರಜನಿ ಅವರ ಪುತ್ರಿ ಸೌಂದರ್ಯಾ ಅಶ್ವಿನ್. ಕೋಚಡಯಾನ್ ಚಿತ್ರದ ಲೇಟೆಸ್ಟ್ ಸ್ಟಿಲ್ ನ್ನು ಅವರು ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಚಿತ್ರ ನಿಮ್ಮ ಮುಂದೆ ತರುವುದಾಗಿ ಪ್ರಾಮಿಸ್ ಮಾಡಿದ್ದಾರೆ.

ಸರಿಸುಮಾರು ರು.125 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರವಿದು. ಕೆ.ಎಸ್.ರವಿಕುಮಾರ್ ಅವರ ಕಥೆ ಚಿತ್ರಕ್ಕಿದ್ದು ಪಾತ್ರವರ್ಗದಲ್ಲಿ ಶರತ್ ಕುಮಾರ್, ದೀಪಿಕಾ ಪಡುಕೋಣೆ, ಶೋಭನಾ, ನಾಸಿರ್ ಮುಂತಾದವರಿದ್ದಾರೆ.

ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ಚಿತ್ರದಲ್ಲಿ ರಜನಿ ಎಂಟನೇ ಶತಮಾನದ ಪಾಂಡ್ಯರ ರಾಜನಾಗಿ ಕಾಣಿಸಲಿದ್ದಾರೆ. 'ಕೋಚಡಯಾನ್' ಫಸ್ಟ್ ಲುಕ್‌ನನ್ನು ಟ್ವಿಟ್ಟರ್‌ನಲ್ಲಿ ಸೌಂದರ್ಯ ತೇಲಿಬಿಟ್ಟಿದ್ದಾರೆ. (ಏಜೆನ್ಸೀಸ್)

English summary
Soundarya Ashwin, the director of Kochadaiyaan and the daughter of Rajinikanth, had announced last week that a new still would be released in the coming days. As promised, she posted the photo on her Twitter. She wrote, "A still from Kochadaiyaan :)," and posted the latest still of the film on Sunday (April 21).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada