For Quick Alerts
  ALLOW NOTIFICATIONS  
  For Daily Alerts

  'ದರ್ಶನ್ ಕರೆದು ಎಚ್ಚರಿಕೆ ನೀಡಿ' : ಫಿಲ್ಮ್ ಚೇಂಬರ್‌ ದೂರು ನೀಡಲು ಮುಂದಾದ ರಾಜವಂಶದ ಫ್ಯಾನ್ಸ್!

  |

  ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾದ ಹಾಡು ಬಿಡುಗಡೆ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆಯಲಾಗಿತ್ತು. ಈ ಘಟನೆ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

  ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಮಧ್ಯೆ ಇನ್ನು ಯುದ್ಧ ನಡೆಯುತ್ತಲೇ ಇದೆ. ಇತ್ತೀಚೆಗೆ ಹುಬ್ಬಳ್ಳಿಗೆ ಹೋಗಿದ್ದ ದರ್ಶನ್ ಪರೋಕ್ಷವಾಗಿ ಚಪ್ಪಲಿ ಎಸೆದ ಪ್ರಕರಣಕ್ಕೆ ತಿರುಗೇಟು ನೀಡಿದ್ದರು.

  ಕಿಡಿಗೇಡಿಗಳ ವಿರುದ್ಧ ದರ್ಶನ್ ಅಭಿಮಾನಿಗಳ ದೂರು: ಕೊಲೆ ಯತ್ನ ಆರೋಪ!ಕಿಡಿಗೇಡಿಗಳ ವಿರುದ್ಧ ದರ್ಶನ್ ಅಭಿಮಾನಿಗಳ ದೂರು: ಕೊಲೆ ಯತ್ನ ಆರೋಪ!

  ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಇನ್ನೂ ಸೈಲೆಂಟ್ ಆಯ್ತು ಅನ್ನುವಾಗಲೇ ರಾಜವಂಶದ ಅಭಿಮಾನಿಗಳು ದೂರು ನೀಡಲು ತೀರ್ಮಾನಿಸಿದ್ದಾರೆ. ಫಿಲ್ಮ್ ಚೇಂಬರ್‌ಗೆ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ದೂರನ್ನು ದಾಖಲಿಸಲು ಬೃಹತ್ ಸಂಖ್ಯೆಯಲ್ಲಿ ನಾಳೆ (ಡಿಸೆಂಬರ್ 29) ಸೇರುತ್ತಿದ್ದಾರೆ.

  ರಾಜವಂಶದ ಫ್ಯಾನ್ಸ್‌ನಿಂದ ಫಿಲ್ಮ್ ಚೇಂಬರ್‌ಗೆ ದೂರು!

  ರಾಜವಂಶದ ಫ್ಯಾನ್ಸ್‌ನಿಂದ ಫಿಲ್ಮ್ ಚೇಂಬರ್‌ಗೆ ದೂರು!

  ಕಳೆದ ಎರಡು ವಾರಗಳಿಂದ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ದೊಡ್ಡದಾಗುತ್ತಲೇ ಇದೆ. ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್‌ ಅಭಿಮಾನಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಸೋಶಿಯಲ್ ಮೀಡಿಯಾ ಹಾಗೂ ಕಾರ್ಯಕ್ರಮಗಳಲ್ಲಿ ರಾಜ್‌ಕುಮಾರ್ ಕುಟುಂಬದ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಖಂಡಿಸಿ ಫಿಲ್ಮ್ ಚೇಂಬರ್‌ಗೆ ದೂರ ನೀಡಲು ರಾಜವಂಶದ ಅಭಿಮಾನಿಗಳು ತೀರ್ಮಾನಿಸಿದ್ದಾರೆ.

  ಯಾರ ವಿರುದ್ಧ ದೂರು?

  ಯಾರ ವಿರುದ್ಧ ದೂರು?

  ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಅನ್ನೋದು ದರ್ಶನ್ ಫ್ಯಾನ್ಸ್ ಆರೋಪ. ಆದರೆ, ಇದನ್ನು ಅಪ್ಪು ಅಭಿಮಾನಿಗಳು ನಿರಾಕರಿಸುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ನಮ್ಮ ಮೇಲೆ ಗೂಬೆ ಕೂರಿಸಬೇಡಿ ಅನ್ನೋದು ಪುನೀತ್ ಫ್ಯಾನ್ಸ್ ವಾದ. ಹೀಗಿದ್ದರೂ, ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ರಾಜ್‌ಕುಮಾರ್ ಕುಟುಂಬದ ವಿರುದ್ಧ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಿದ್ದಾರೆ. ರಾಜವಂಶದ ಇತಿಹಾಸವನ್ನು ಅರಿತು ಮಾತಾಡಬೇಕು. " ಎಂದು ರಾಜವಂಶದ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳು ನಾಳೆ(ಡಿಸೆಂಬರ್ 28) ಫಿಲ್ಮ್ ಚೇಂಬರ್‌ಗೆ ದೂರು ನೀಡುತ್ತಿವೆ.

  'ದರ್ಶನ್ ಕರೆದು ಎಚ್ಚರಿಗೆ ನೀಡಿ'

  'ದರ್ಶನ್ ಕರೆದು ಎಚ್ಚರಿಗೆ ನೀಡಿ'

  "ದರ್ಶನ್ ಕೂಡ ಕಾರ್ಯಕ್ರಮಗಳಲ್ಲಿ ತಮ್ಮ ಅಭಿಮಾನಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಫಿಲ್ಮ್ ಚೇಂಬರ್‌ಗೆ ಕರೆದು ಎಚ್ಚರಿಕೆ ನೀಡಬೇಕು" ಎಂದು ಇದೇ ಸಂದರ್ಭದಲ್ಲಿ ಫಿಲ್ಮ್ ಚೇಂಬರ್‌ ತಿಳಿಸಲು ತೀರ್ಮಾನಿಸಿದ್ದಾರೆ. ಈ ವೇಳೆ ರಾಜ್ಯ ಮೂಲೆ ಮೂಲೆಯಲ್ಲಿರುವ ರಾಜವಂಶದ ಸಾವಿರಾರು ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೆ ಕನ್ನಡ ಪರ ಸಂಘಟನೆಗಳು ಕೂಡ ರಾಜವಂಶದ ಅಭಿಮಾನಿಗಳಿಗೆ ಜೊತೆಯಾಗುತ್ತಿದ್ದಾರೆ.

  ಚಪ್ಪಲಿ ಎಸೆದ ಮೂವರ ಬಂಧನ

  ಚಪ್ಪಲಿ ಎಸೆದ ಮೂವರ ಬಂಧನ

  ಹೊಸಪೇಟೆ ಪೊಲೀಸರು ದರ್ಶನ್ ಮೇಲೆ ಚಪ್ಪಲಿ ಎಸೆದ ಮೂವರನ್ನು ಹೀಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಉಳಿದವರ ಶೋಧ ಕಾರ್ಯಕ ನಡೆಯುತ್ತಿದೆ. ಇನ್ನೇನು ಈ ಪ್ರಕರಣಕ್ಕೆ ಅಂತ್ಯ ಬಿತ್ತು ಅನ್ನುವಾಗಲೇ ಫಿಲ್ಮ್ ಚೇಂಬರ್ ಮೆಟ್ಟಿರೇಲು ರಾಜವಂಶದ ಅಭಿಮಾನಿಗಳು ತೀರ್ಮಾನಿಸಿದ್ದಾರೆ. ಫಿಲ್ಮ್ ಚೇಂಬರ್ ಇವರ ದೂರನ್ನು ಸ್ವೀಕರಿಸಿ, ಈ ಪ್ರಕರಣಕ್ಕೆ ಸುಖಾಂತ್ಯ ಹಾಡುತ್ತಾರಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

  English summary
  Rajkumar Family Fans Giving Complaint Against Darshan In Film Chamber, Know More
  Wednesday, December 28, 2022, 14:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X