For Quick Alerts
  ALLOW NOTIFICATIONS  
  For Daily Alerts

  ರಾಜಸ್ಥಾನದ ಸುಂದರ ಬೀದಿಯಿಂದ 'ಪ್ರೀತಿ' ರವಾನಿಸಿದ ರಕ್ಷಿತ್ ಶೆಟ್ಟಿ

  |

  ಕರ್ನಾಟಕದಿಂದ ಶುರುವಾದ ನಾಯಿ ಜತೆಗಿನ ರಕ್ಷಿತ್ ಶೆಟ್ಟಿ ಪ್ರಯಾಣ ಈಗ ಉತ್ತರ ಭಾರತ ತಲುಪಿದೆ. ರಾಜಸ್ಥಾನದ ಚೆಂದದ ವ್ಯಾಪಾರಿ ಬೀದಿಗಳಲ್ಲಿ ಅಡ್ಡಾಡಿದ ಅವರು ಸಿಖ್ಖರ ರಾಜ್ಯ ಪಂಜಾಬ್‌ನತ್ತ ಹೊರಟಿದ್ದಾರೆ.

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಹೀಗೆ ತಿರುಗಾಟ ನಡೆಸುತ್ತಿರುವುದು 'ಚಾರ್ಲಿ'ಗಾಗಿ. '777 ಚಾರ್ಲಿ' ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಉತ್ತರ ಭಾರತಕ್ಕೆ ತಲುಪಿದೆ. ಇದು ಸಂಪೂರ್ಣ ಪಯಣದ ಕಥೆಯುಳ್ಳ ಚಿತ್ರ. ಹೀಗಾಗಿ ಸಿನಿ ಅಭಿಮಾನಿಗಳು ಒಂದಲ್ಲ, ಎರಡಲ್ಲಾ, ಒಟ್ಟು ಏಳು ರಾಜ್ಯಗಳನ್ನು ಈ ಚಿತ್ರ ತೋರಿಸಲಿದೆ.

  'ಕಿರಿಕ್ ಪಾರ್ಟಿ-2'ಗೆ ರಕ್ಷಿತ್ ತಯಾರಿ: ಈ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು?'ಕಿರಿಕ್ ಪಾರ್ಟಿ-2'ಗೆ ರಕ್ಷಿತ್ ತಯಾರಿ: ಈ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು?

  ಏಳು ರಾಜ್ಯಗಳನ್ನು ಸುತ್ತಬೇಕಿರುವುದರಿಂದ ಈ ಚಿತ್ರದ ಚಿತ್ರೀಕರಣಕ್ಕೆ ತಗುಲುವ ಸಮಯವೂ ಹೆಚ್ಚು. ಈಗಾಗಲೇ 104 ದಿನಗಳ ಚಿತ್ರೀಕರಣ ಮುಗಿದಿದೆ. ಇನ್ನೂ ಸುಮಾರು 30 ದಿನಗಳ ಚಿತ್ರೀಕರಣ ಬಾಕಿ ಇದೆ.

  ರಾಜಸ್ಥಾನದಿಂದ ಪಂಜಾಬ್‌ನತ್ತ ಪಯಣ

  ರಾಜಸ್ಥಾನದಿಂದ ಪಂಜಾಬ್‌ನತ್ತ ಪಯಣ

  '777 ಚಾರ್ಲಿ'ಯ ಚಿತ್ರೀಕರಣ ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದಿದೆ. ಅಲ್ಲಿನ ಸುಂದರವಾದ ವ್ಯಾಪಾರಿ ಬೀದಿಗಳನ್ನು ಕಂಡು ರಕ್ಷಿತ್ ಮಾರುಹೋಗಿದ್ದಾರೆ. ಇಲ್ಲಿ ಚಿತ್ರೀಕರಣ ಮುಗಿಸಿ ಪಂಜಾಬ್‌ನತ್ತ ಚಿತ್ರತಂಡ ತೆರಳುತ್ತಿರುವುದಾಗಿ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

  ಮನುಷ್ಯ-ನಾಯಿ ಬಾಂಧವ್ಯದ ಕಥೆ

  ಮನುಷ್ಯ-ನಾಯಿ ಬಾಂಧವ್ಯದ ಕಥೆ

  '777 ಚಾರ್ಲಿ'ಯಲ್ಲಿ ನಾಯಿ ಜತೆಗೆ ರಕ್ಷಿತ್ ಬೈಕ್ ಸವಾರಿ ಮಾಡಲಿದ್ದಾರೆ. ನಾಯಿ ಮತ್ತು ಮನುಷ್ಯನ ಭಾವನಾತ್ಮಕ ಬಾಂಧವ್ಯದ ಕಥೆ ಇದರಲ್ಲಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ 'ಧರ್ಮ' ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಿಗೂ ಬಹಳ ಮುಖ್ಯವಾದ ಪಾತ್ರ ಇದರಲ್ಲಿದೆ. ನಾಯಿ ಜತೆಗಿನ ಚೆಂದದ ಫೋಟೊಗಳನ್ನು ರಕ್ಷಿತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು

  ಶಿಮ್ಲಾ, ಕಾಶ್ಮೀರದಲ್ಲಿ ಚಿತ್ರೀಕರಣ

  ಶಿಮ್ಲಾ, ಕಾಶ್ಮೀರದಲ್ಲಿ ಚಿತ್ರೀಕರಣ

  ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸಿದ್ದ ತಂಡ ಗೋವಾ, ಗುಜರಾತ್, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲಿ ಉಳಿದ ದೃಶ್ಯಗಳನ್ನು ಸೆರೆಹಿಡಿಯುತ್ತಿದೆ. ಸುದೀರ್ಘಾವಧಿ ಚಿತ್ರೀಕರಣದ ಬಳಿಕ ಆಗಸ್ಟ್ ವೇಳೆಗೆ ಸಿನಿಮಾ ಸಿದ್ಧವಾಗುವ ನಿರೀಕ್ಷೆಯಿದೆ. ನಂತರ ಒಂದೆರಡು ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

  ನಾಯಕಿ ಸಂಗೀತಾ ಶೃಂಗೇರಿ

  ನಾಯಕಿ ಸಂಗೀತಾ ಶೃಂಗೇರಿ

  ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ಈ ಜರ್ನಿಯಲ್ಲಿ ಅವರೂ ಇರಲಿದ್ದಾರೆ. ಚಿತ್ರೀಕರಣದ ನಡುವೆ ಒಂದು ಬ್ರೇಕ್ ತೆಗೆದುಕೊಂಡಿದ್ದ ತಂಡ, ಆ ಸಮಯದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ನಡೆಸಿತ್ತು. ಎರಡನೆಯ ಹಂತದ ಚಿತ್ರೀಕರಣಕ್ಕಾಗಿ ಉತ್ತರ ಭಾರತಕ್ಕೆ ತೆರಳಲಾಗಿದೆ.

  ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?

  ಪ್ಯಾನ್ ಇಂಡಿಯಾ ಸಿನಿಮಾ

  ಪ್ಯಾನ್ ಇಂಡಿಯಾ ಸಿನಿಮಾ

  ಇದು ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಎಂಟು ಹಾಡುಗಳು ಚಿತ್ರದಲ್ಲಿವೆ. ನಾಲ್ಕು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದೆ. ನಟ ರಾಜ್. ಬಿ. ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ 'ಚಾರ್ಲಿ' ಈ ಚಿತ್ರದಲ್ಲಿರುವ ನಾಯಿಯ ಹೆಸರು. ಬೇರೆ ಜಾಗದಿಂದ ತಪ್ಪಿಸಿಕೊಂಡು ನಾಯಕನ ಜತೆಗೂಡುವ ಚಾರ್ಲಿಯ ತುಂಟಾಟಗಳು, ನಾಯಕನ ಬದುಕನ್ನು ಹೇಗೆ ಬದಲಿಸುತ್ತದೆ ಎಂಬ ಕಥೆಯನ್ನು ಈ ಸಿನಿಮಾ ಹೇಳುತ್ತದೆ.

  English summary
  Actor Rakshit Shetty has shared a photo of merchant street of Bikaner, Rajasthan after '777 Charlie' movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X