»   » ನಿಲ್ಸಿದ್ದಾ, ಹಾಕಿ ಇನ್ನೊಂದಾಕಿ: ಕೆಸ್ರುಗದ್ದೆಯಲ್ಲಿ ರಕ್ಷಿತ್ ಶೆಟ್ಟಿ ಹುಲಿಡ್ಯಾನ್ಸ್

ನಿಲ್ಸಿದ್ದಾ, ಹಾಕಿ ಇನ್ನೊಂದಾಕಿ: ಕೆಸ್ರುಗದ್ದೆಯಲ್ಲಿ ರಕ್ಷಿತ್ ಶೆಟ್ಟಿ ಹುಲಿಡ್ಯಾನ್ಸ್

Posted By:
Subscribe to Filmibeat Kannada

ತುಳುನಾಡಿನ ಜಾನಪದ ನೃತ್ಯ ಹುಲಿವೇಷವನ್ನು ನಾಡಿನೆಲ್ಲಡೆ ಮತ್ತಷ್ಟು ಜನಪ್ರಿಯತೆಗೊಳಿಸಿದ ಕೀರ್ತಿ ರಕ್ಷಿತ್ ಶೆಟ್ಟಿಯವರಿಗೂ ಸಲ್ಲಬೇಕು.

ತಾನೇ ನಿರ್ದೇಶಿಸಿ, ನಟಿಸಿದ್ದ ‘ಉಳಿದವರು ಕಂಡಂತೆ' ಚಿತ್ರದಲ್ಲಿ ಹುಲಿ ಕುಣಿತಕ್ಕೆ ರಕ್ಷಿತ್ ಶೆಟ್ಟಿ ಹಾಕಿರೋ ಸ್ಟೆಪ್ ಅಂತದ್ದು ಮತ್ತು ಚಿತ್ರ ಬಿಡುಗಡೆಯ ನಂತರ ಅದಕ್ಕೆ ಸಿಕ್ಕ ಜನಪ್ರಿಯತೆ ಇದಕ್ಕೆ ಸಾಕ್ಷಿ.

ಈ ಕುಣಿತದ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆಯೆಂದರೆ ತಾನು ಭಾಗವಹಿಸುವ ಕಾರ್ಯಕ್ರಮದಲ್ಲಿ ಬಹು ಜನರ ಒತ್ತಾಯದ ಮೇರೆಗೆ ಸ್ಟೇಜಿನಲ್ಲೂ ರಕ್ಷಿತ್ ಹುಲಿವೇಷ ಕುಣಿದ ಉದಾಹರಣೆಗಳು ಸಾಕಷ್ಟಿವೆ.

ತನ್ನ ತವರೂರು ಉಡುಪಿಯಲ್ಲಿನ ಜನರ ಜೊತೆ ಬೆರೆತು ಮತ್ತೆ ರಕ್ಷಿತ್ ಹುಲಿವೇಷದ ಮ್ಯೂಸಿಕ್ಕಿಗೆ ಬಿಂದಾಸ್ ಸ್ಟೆಪ್ ಹಾಕಿದ್ದಾರೆ, ಅದೂ ಕೆಸರು ಗದ್ದೆಯಲ್ಲಿ. (ರಕ್ಷಿತ್ ಶೆಟ್ಟಿ ಸಂದರ್ಶನ)

ಉಡುಪಿಯ ಅಲೆವೂರಿನಲ್ಲಿ ಗಣೇಶೋತ್ಸವ ಸಮಿತಿ ಹತ್ತನೇ ವರ್ಷದ ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟವನ್ನು ಭಾನುವಾರ (ಜು 12) ಆಯೋಜಿಸಿತ್ತು. ಕಾರ್ಯಕ್ರದಲ್ಲಿ ಸಚಿವ ವಿನಯ್ ಕುಮಾರ್ ಸೊರಕೆ ಜೊತೆ ರಕ್ಷಿತ್ ಶೆಟ್ಟಿ ಕೂಡಾ ಭಾಗವಹಿಸಿದ್ದರು.

Rakshit Shetty participated in rural sports event and performed Tiger Dance.

ಕೆಸರುಗದ್ದೆ ಓಟದ ಜೊತೆ ಕೋಣ ಓಡಿಸುವ ಸ್ಪರ್ಧೆ, ಪಿರಮಿಡ್, ಹಗ್ಗಜಗ್ಗಾಟ ಮುಂತಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಕೋಣಗಳನ್ನು ಓಡಿಸುವ ಮೂಲಕ ರಕ್ಷಿತ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ರಕ್ಷಿತ್ ಶೆಟ್ಟಿಯವರ ಕುಟುಂಬಸ್ಥರ ಗದ್ದೆಯಲ್ಲೇ ನಡೆದ ಈ ಕ್ರೀಡಾಕೂಟದಲ್ಲಿ ಜನರ ಒತ್ತಾಯದ ಮೇರೆಗೆ ಎರಡೆರಡು ಬಾರಿ ಉಳಿದವರು ಕಂಡಂತೆ ಚಿತ್ರದ ಹುಲಿವೇಷದ ಟ್ಯೂನಿಗೆ ರಕ್ಷಿತ್ ಸ್ಟೆಪ್ ಹಾಕಿದ್ರು. ಇವರ ಜೊತೆ ನೆರೆದಿದ್ದವರೂ ಕುಣಿದಿದ್ದೇ ಕುಣಿದಿದ್ದು.

ಫಿಲಂಫೇರ್ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದ ನಂತರ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ ಅವರಿಗೆ ಊರಿನ ಜನತೆಯಿಂದ ಹೃತ್ಪೂರ್ವಕ ಸ್ವಾಗತ ಸಿಕ್ಕಿತು. ಕೂಟದಲ್ಲಿ ಭಾಗವಹಿಸಿದ್ದ ಹೆಚ್ಚಿನ ಜನ ರಕ್ಷಿತ್ ಶೆಟ್ಟಿ ಜೊತೆ ಸೆಲ್ಫೀ ಕ್ಲಿಕ್ಕಿಸುವುದರಲ್ಲಿ ಬ್ಯೂಸಿಯಾಗಿದ್ದರು.

ಉಡುಪಿ ಅಲೆವೂರಿನ ತಂಡವೇ ಉಳಿದವರು ಕಂಡಂತೆ ಹುಲಿವೇಷದ ಟ್ಯೂನ್ ರೆಡಿ ಮಾಡಿದ್ದು ಮತ್ತು ನನಗೆ ಫಿಲಂಫೇರ್ ಪ್ರಶಸ್ತಿ ಬಂದಾಗ ನನಗಿಂತ ಜಾಸ್ತಿ ನನ್ನ ಊರಿನವರು ಸಂತೋಷ ಪಟ್ಟರು ಎಂದು ರಕ್ಷಿತ್ ಇಲ್ಲಿನ ಜನತೆಯ ಬಗ್ಗೆ ಅಭಿಮಾನದ ಮಾತನ್ನಾಡಿದರು.

English summary
Rakshit Shetty participated in rural sports event and performed Tiger Dance, in Alevoor, Udupi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada