For Quick Alerts
  ALLOW NOTIFICATIONS  
  For Daily Alerts

  3ನೇ ವೀಕೆಂಡ್‌ಗೆ ಮುನ್ನ '777 ಚಾರ್ಲಿ' ಕಲೆಕ್ಷನ್ ಹೇಗಿದೆ? 13ನೇ ದಿನ ಗಳಿಸಿದ್ದೆಷ್ಟು?

  |

  ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಪರ್ಫಾಮೆನ್ಸ್ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಚೆನ್ನಾಗಿದೆ. ಜೂನ್ 10 ರಂದು ರಿಲೀಸ್ ಆಗಿದ್ದ ಈ ಸಿನಿಮಾಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಇನ್ನೂ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಹಿಂದೆ ಬಿದ್ದಿದೆ. ಈ ಸಿನಿಮಾಗೆ ಮೌತ್ ಪಬ್ಲಿಸಿಟಿ ಚೆನ್ನಾಗೇ ಸಿಕ್ಕಿತ್ತು.

  ಶ್ವಾನಪ್ರಿಯರಿಗಂತೂ 'ಚಾರ್ಲಿ' ನಗಿಸಿತ್ತು. ನಗುವಿನ ಹಿಂದೆ ಕಣ್ಣೀರು ಹಾಕಿಸಿತ್ತು. '777 ಚಾರ್ಲಿ' ಸಿನಿಮಾ ನೋಡಿದವರು ಯಾರೂ ನೆಗೆಟಿವ್ ಒಪಿನಿಯನ್ ಕೊಟ್ಟಿಲ್ಲ. ಈ ಕಾರಣಕ್ಕೆ ಸಿನಿಮಾ ಎರಡನೇ ವಾರದಿಂದ ಬಾಕ್ಸಾಫೀಸ್‌ ಗಳಿಕೆಯಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.

  12ನೇ ದಿನ '777 ಚಾರ್ಲಿ' ವಿಶ್ವದಾದ್ಯಂತ ಗಳಿಸಿದ್ದೆಷ್ಟು? 100 ಕೋಟಿ ರೂ.ಗೆ ಇನ್ನೆಷ್ಟು ಬೇಕು?12ನೇ ದಿನ '777 ಚಾರ್ಲಿ' ವಿಶ್ವದಾದ್ಯಂತ ಗಳಿಸಿದ್ದೆಷ್ಟು? 100 ಕೋಟಿ ರೂ.ಗೆ ಇನ್ನೆಷ್ಟು ಬೇಕು?

  ಅಂದುಕೊಂಡಂತೆ '777 ಚಾರ್ಲಿ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತಿದೆಯಾ? ಈ 13 ದಿನಗಳಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿದ್ದಾರಾ? ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ಅನ್ನುವುದನ್ನು ತಿಳಿದುಕೊಳ್ಳಲು ಮುಂದೆ ಓದಿ.

  13ನೇ ದಿನ ರಕ್ಷಿತ್ ಗಳಿಸಿದ್ದೆಷ್ಟು?

  13ನೇ ದಿನ ರಕ್ಷಿತ್ ಗಳಿಸಿದ್ದೆಷ್ಟು?

  ಜೂನ್ 10ರಂದು '777 ಚಾರ್ಲಿ' ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಐದು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಇದೂವರೆಗೂ '777 ಚಾರ್ಲಿ' ಸಿನಿಮಾಗೆ ಕರ್ನಾಟಕದಿಂದಲೇ ಹೆಚ್ಚು ಕಲೆಕ್ಷನ್ ಬಂದಿದ್ದು, 13ನೇ ದಿನ ಕೊಂಚ ಇಳಿಕೆ ಕಂಡಿದೆ. 12ನೇ ದಿನ ಚಾರ್ಲಿ ಕಲೆಕ್ಷನ್ 1.85 ಕೋಟಿ ರೂ ಎಂದು ಹೇಳಲಾಗಿತ್ತು. ಇನ್ನು 13ನೇ ದಿನ ಕೊಂಚ ಇಳಿಕೆ ಕಂಡಿದ್ದರೂ ಸ್ಟಡಿಯಾಗಿದೆ. ನಿನ್ನೆ( ಜೂನ್ 22) ಚಾರ್ಲಿ ಬಾಕ್ಸಾಫೀಸ್ ಕಲೆಕ್ಷನ್ 1.40 ಕೋಟಿ ರೂ. ದಾಟಿದೆ.

  ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?

  13 ದಿನಗಳಲ್ಲಿ ಕಲೆಕ್ಷನ್ ಹೇಗಿದೆ?

  13 ದಿನಗಳಲ್ಲಿ ಕಲೆಕ್ಷನ್ ಹೇಗಿದೆ?

  '777 ಚಾರ್ಲಿ' ಕಳೆದ 13 ದಿನಗಳಲ್ಲಿ ಅಂದುಕೊಂಡಿದ್ದಕ್ಕಿಂತ ಉತ್ತಮ ಕಲೆಕ್ಷನ್ ಮಾಡಿದೆ. ರಕ್ಷಿತ್ ಶೆಟ್ಟಿ ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, '777 ಚಾರ್ಲಿ' ಕಳೆದ 13 ದಿನಗಳಲ್ಲಿ ಸುಮಾರು 71.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

  ಮೊದಲ ವಾರ 38.75 ಕೋಟಿ ರೂ.
  2ನೇ ವಾರ 18.55 ಕೋಟಿ ರೂ.
  3ನೇ ವಾರ 14.20 ಕೋಟಿ ರೂ.

  ಒಟ್ಟು 71.50 ಕೋಟಿ ರೂ.

  ಬೇರೆ ಬೇರೆ ರಾಜ್ಯದಲ್ಲಿ ಚಾರ್ಲಿ ಗಳಿಕೆ ಎಷ್ಟು?

  ಬೇರೆ ಬೇರೆ ರಾಜ್ಯದಲ್ಲಿ ಚಾರ್ಲಿ ಗಳಿಕೆ ಎಷ್ಟು?

  ಕರ್ನಾಟಕದಲ್ಲಿ ಚಾರ್ಲಿ ಕಲೆಕ್ಷನ್ ಸಖತ್ತಾಗಿದೆ. ಇನ್ನು ಉಳಿದಂತೆ ಆಂಧ್ರ,ತೆಲಂಗಾಣದಲ್ಲೂ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಗಳಿಸಿದೆ. ಇನ್ನು ಕೇರಳದಲ್ಲಿ 3 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ತಕ್ಕಮಟ್ಟಿಗೆ ಗಳಿಕೆ ಕಂಡಿದೆ.

  ಕರ್ನಾಟಕ 53.15 ಕೋಟಿ ರೂ. ( Updated)
  ಆಂಧ್ರ/ತೆಲಂಗಾಣ 4.30 ಕೋಟಿ ರೂ.
  ಕೇರಳ 3.00 ಕೋಟಿ ರೂ.
  ತಮಿಳುನಾಡು 2.25 ಕೋಟಿ ರೂ.
  ಉತ್ತರ ಭಾರತ 4.70 ಕೋಟಿ ರೂ.
  ವಿದೇಶ 4.10 ಕೋಟಿ ರೂ.

  ಒಟ್ಟು 71.50 ಕೋಟಿ ರೂ.

  '777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!'777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!

  3ನೇ ವೀಕೆಂಡ್ ಏನಾಗುತ್ತೆ?

  3ನೇ ವೀಕೆಂಡ್ ಏನಾಗುತ್ತೆ?

  '777 ಚಾರ್ಲಿ ಸಿನಿಮಾ ಮೊದಲೆರಡು ವಾರ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಫ್ಯಾಮಿಲಿ ಸಮೇತ ಸಿನಿಮಾ ನೋಡುತ್ತಿರುವುದರಿಂದ ವೀಕೆಂಡ್‌ನಲ್ಲಿ ಚೆನ್ನಾಗಿಯೇ ಗಳಿಕೆಯಾಗುತ್ತಿದೆ. ಕಳೆದೆರಡು ವೀಕೆಂಡ್‌ಗಳಲ್ಲೂ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಈ ಕಾರಣಕ್ಕೆ ಮೂರನೇ ವಾರ ಕೂಡ '777 ಚಾರ್ಲಿ' ಕಲೆಕ್ಷನ್ ಜೋರಾಗಿರುತ್ತೆ ಎಂದು ಅಂದಾಜು ಮಾಡಲಾಗಿದೆ.

  English summary
  Rakshit Shetty Starrer 777 Charlie Worldwide Box office Day 13 Collection Report, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X