»   » ಟ್ವಿಟ್ಟರ್ ಲೋಕಕ್ಕೆ ದಿಢೀರ್ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ.!

ಟ್ವಿಟ್ಟರ್ ಲೋಕಕ್ಕೆ ದಿಢೀರ್ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ.!

Posted By:
Subscribe to Filmibeat Kannada

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರವರ ಟ್ವೀಟ್ ಕಾಟ ಇನ್ನು ಮುಂದೆ ಇರುವುದಿಲ್ಲ. ಯಾಕಂದ್ರೆ, ವರ್ಮಾ ಸಾಹೇಬ್ರು ತಮ್ಮ ಟ್ವಿಟ್ಟರ್ ಅಕೌಂಟ್ ನ ಡಿಲೀಟ್ ಮಾಡಿದ್ದಾರೆ. ಟ್ವಿಟ್ಟರ್ ಲೋಕಕ್ಕೆ ಗುಡ್ ಬೈ ಹೇಳಿ, ಅಲ್ಲಿಂದ ಹೊರ ನಡೆದಿದ್ದಾರೆ ರಾಮ್ ಗೋಪಾಲ್ ವರ್ಮಾ.

ತಮ್ಮ ವಿವಾದಾತ್ಮಕ ಟ್ವೀಟ್ ಗಳಿಂದಲೇ ರಾಮ್ ಗೋಪಾಲ್ ವರ್ಮ ಹೆಚ್ಚು ಸುದ್ದಿಯಲ್ಲಿದ್ದರು. ಎಂಥ ಕಾಂಟ್ರವರ್ಸಿ ಆದರೂ, ತಲೆ ಕೆಡಿಸಿಕೊಳ್ಳದೇ ಆರಾಮಾಗಿ ಇರುತ್ತಿದ್ದ ವರ್ಮಾ, ಈಗ ದಿಢೀರ್ ಅಂತ ತಮ್ಮ ಟ್ವಿಟ್ಟರ್ ಅಕೌಂಟ್ ನ ಡಿಲೀಟ್ ಮಾಡಿರುವುದು, ಎಲ್ಲರಿಗೂ ಆಶ್ಚರ್ಯ ತರಿಸಿದೆ.[ಮುಂಬೈ ಕತ್ತಲೆ ಪ್ರಪಂಚವನ್ನ ಬೆತ್ತಲಾಗಿ ತೋರಿಸಿದ ವರ್ಮ]

'Ram Gopal Varma' quits Twitter

ಟ್ವಿಟ್ಟರ್ ನಿಂದ ಹೊರಬರುತ್ತಿರುವ ಬಗ್ಗೆ ಸ್ವತಃ ವರ್ಮಾ ಟ್ವೀಟ್ ಮಾಡಿ, ತಮ್ಮ ಫಾಲೋವರ್ಸ್ ಗೆ ತಿಳಿಸಿದ್ದಾರೆ.[ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ]

ಮೇ 27, 2009 ರಂದು ಟ್ವಿಟ್ಟರ್ ಖಾತೆ ತೆರೆದಿದ್ದ ವರ್ಮ ಸರಿಯಾಗಿ ಎಂಟು ವರ್ಷಗಳ ಬಳಿಕ, ಅದೇ ದಿನ ಅಂದರೆ ಮೇ 27 2017ಗೆ ಟ್ವಿಟ್ಟರ್ ನಿಂದ ಹೊರಗೆ ಬಂದಿದ್ದಾರೆ.[ಟೈಗರ್ ಶ್ರಾಫ್ 'ನಪುಂಸಕ': ಜಾಕಿ ಶ್ರಾಫ್ ಮಗನಿಗೆ ವರ್ಮ ಕಮೆಂಟ್]

ಸದ್ಯ ಟ್ವಿಟ್ಟರ್ ನಿಂದ ಹೊರಗೆ ಬಂದಿರುವ ವರ್ಮಾ, ಇನ್ನು ಮುಂದೆ ಇನ್ಸ್ಟಾ ಗ್ರಾಮ್ ಬಳಸುವುದಾಗಿ ಹೇಳಿದ್ದಾರೆ. ಇಷ್ಟು ದಿನ ಟ್ವಿಟ್ಟರ್ ನ ಮೂಲಕ ಕಾಂಟ್ರವರ್ಸಿ ಸೃಷ್ಟಿಸುತ್ತಿದ್ದ ರಾಮ್ ಗೋಪಾಲ್ ವರ್ಮಾ ಇನ್ನು ಮುಂದೆ ಇನ್ಸ್ಟಾ ಗ್ರಾಮ್ ಮೂಲಕ ಅದೇನು ಮಾಡುತ್ತಾರೋ ಕಾದು ನೋಡಬೇಕು.

English summary
Director 'Ram Gopal Varma' quits Twitter
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada