»   » ಮುತ್ತಪ್ಪ 'ರೈ' ಟೀಸರ್ ಬಿಡುಗಡೆ, ಲಯಕ್ಕೆ ಮರಳಿದ ವರ್ಮಾ!

ಮುತ್ತಪ್ಪ 'ರೈ' ಟೀಸರ್ ಬಿಡುಗಡೆ, ಲಯಕ್ಕೆ ಮರಳಿದ ವರ್ಮಾ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮೇ 1 ರಂದು ಮುತ್ತಪ್ಪ ರೈ ರವರ ಹುಟ್ಟುಹಬ್ಬದ ಸಂಭ್ರಮಾಚರಣೆ. ಬಿಡದಿಯ ಅವರ ನಿವಾಸದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಅಭಿಮಾನಿಗಳ ಸಮ್ಮುಖದಲ್ಲಿ ಮುತ್ತಪ್ಪ ರೈ ಜೀವನ ಚರಿತ್ರೆ ಆಧಾರಿಸಿದ 'ರೈ' ಚಿತ್ರದ ಮೊದಲ ಪೋಸ್ಟರ್, ಟೀಸರ್ ಅನಾವರಣ ಕಂಡಿದೆ. ಮುತ್ತಪ್ಪ ರೈ ಅವರ ಚಿತ್ರದ ನಾಯಕ ವಿವೇಕ್ ಒಬೇರಾಯ್, ನಟ ಯಶ್ ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಕರ್ನಾಟಕದ ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅವರು ಬಹುಭಾಷಾ 'ರೈ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಲಿದೆ. [ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ]

Ram Gopal Varma's Rai First Look underworld don Muththappa Rai

ಮುತ್ತಪ್ಪ ರೈ ರವರನ್ನ 'ದಿ ಗ್ರೇಟೆಸ್ಟ್ ಗ್ಯಾಂಗ್ ಸ್ಟರ್ ಎವರ್' ಅಂತ ಕರೆದಿರುವ ರಾಮ್ ಗೋಪಾಲ್ ವರ್ಮಾ, 'ಮೇ 1 ರಂದು 'ರೈ' ಚಿತ್ರಕ್ಕೆ ಚಾಲನೆ ನೀಡುತ್ತೇನೆ' ಅಂತ ಟ್ವೀಟ್ ಮಾಡಿದ್ದರು.ವರ್ಮಾ ಟ್ವೀಟ್ ಮಾಡಿರುವ ಪ್ರಕಾರ, 'ರೈ' ಚಿತ್ರದ ಚಿತ್ರೀಕರಣ ಮಂಗಳೂರು, ಬೆಂಗಳೂರು, ಮುಂಬೈ, ದುಬೈ ಹಾಗೂ ಲಂಡನ್ ನಲ್ಲಿ ನಡೆಯಲಿದೆ.

'ಬೆಂಗಳೂರಿನ ಅಂಡರ್ ವರ್ಲ್ಡ್(ಬಿ ಕಂಪನಿ) ಮುಂದೆ ನಾನು ತೆಗೆದ 'ಡಿ' ಕಂಪನಿ ಸಿನಿಮಾ ಯಾವುದಕ್ಕೂ ಸಮವಾಗಿಲ್ಲ. ಬೆಂಗಳೂರಿನ ಕರಾಳ ಜಗತ್ತಿನ ಜಾಲ ದುಬೈ, ಮುಂಬೈ ಸೇರಿದಂತೆ ಅನೇಕ ಕಡೆ ಚಾಚಿಕೊಂಡಿದೆ

55ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಭೂಗತ ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಕರಾಳ ಚಿತ್ರವಾಗಿದೆ. ಮಾರಿಯೋ ಫ್ಯೂಜೋ ಬರೆದ ಕಾದಂಬರಿ ಇಂಗ್ಲೀಷ್ ನಲ್ಲಿ ಗಾಡ್ ಫಾದರ್ ಚಿತ್ರವಾಗಿ ಜನಪ್ರಿಯತೆ ಗಳಿಸಿರುವುದು ನಿಮಗೆ ತಿಳಿದಿದೆ.

ಗಾಡ್ ಫಾದರ್ ಎಂದು ಕಾಲ್ಪನಿಕ ಪಾತ್ರ ಎಂದೇ ನಾನು ಭಾವಿಸಿದ್ದೆ. ಅದರೆ, ಮುತ್ತಪ್ಪ ರೈ ಅವರನ್ನು ಭೇಟಿ ಮಾಡಿದ ಮೇಲೆ ಅವರೇ ನಿಜವಾದ ಗಾಡ್ ಫಾದರ್, ಬರೀ ಗಾಡ್ ಫಾದರ್ ಅಲ್ಲ ಗಾಡ್ ಫಾದರ್ ಗಳ 'ಅಪ್ಪ' ಎಂದಿದ್ದಾರೆ ಎಂದು ವರ್ಮಾ ಹೊಗಳಿದ್ದಾರೆ.

ಅಂದ ಹಾಗೆ, ಮೊದಲಿಗೆ ಅಪ್ಪ ಎಂದು ಹೆಸರಿಡಲಾಗಿದ್ದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ರವರ ಹುಟ್ಟುಹಬ್ಬದಂದು 'ಅಪ್ಪ' ಬದಲು 'ರೈ' ಶೀರ್ಷಿಕೆಯನ್ನ ರಾಮ್ ಗೋಪಾಲ್ ವರ್ಮಾ ಅನೌನ್ಸ್ ಮಾಡಿದ್ದರು. ನಂತರ ಸುದೀಪ್ ಬದಲಿಗೆ ಬೆಂಗಳೂರಿನ ಅಳಿಯ ವಿವೇಕ್ ಒಬೇರಾಯ್ ಅವರನ್ನು ಕರೆ ತರಲಾಗಿದೆ.

-
-
-
-
-
ಮುತ್ತಪ್ಪ 'ರೈ' ಟೀಸರ್ ಬಿಡುಗಡೆ, ಲಯಕ್ಕೆ ಮರಳಿದ ವರ್ಮಾ!

ಮುತ್ತಪ್ಪ 'ರೈ' ಟೀಸರ್ ಬಿಡುಗಡೆ, ಲಯಕ್ಕೆ ಮರಳಿದ ವರ್ಮಾ!

-
-
-
-
-
-
English summary
Ram Gopal Varma, who is known for his hard-hitting films on Mumbai underbelly like "Satya" and "Company", announced he will be launched the first look of "Rai" on Sunday. Rai is based on the based on the life of Underworld Don Muththappa Rai... The Greatest Gangster Ever,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada