»   » ಸೋಷಿಯಲ್ ಮೀಡಿಯಾದಲ್ಲಿ ಯಾರೂ ರಮ್ಯಾ ಮೇಡಂ ವಿರುದ್ಧ ಬೆರಳೆತ್ತುವ ಹಾಗಿಲ್ಲ.!

ಸೋಷಿಯಲ್ ಮೀಡಿಯಾದಲ್ಲಿ ಯಾರೂ ರಮ್ಯಾ ಮೇಡಂ ವಿರುದ್ಧ ಬೆರಳೆತ್ತುವ ಹಾಗಿಲ್ಲ.!

Posted By:
Subscribe to Filmibeat Kannada

ನಟಿ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ ಗಳು ನಡೆಯುತ್ತಲೇ ಇರುತ್ತೆ. ಇನ್ನು ಮುಂದೆಯೂ ಹೀಗೆ ಮುಂದುವರಿಯುವುದು ಕಷ್ಟ ಆಗ್ಬಹುದೇನೋ...

ಸದ್ಯ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನವನ್ನು ರಮ್ಯಾ ಅಲಂಕರಿಸಿದ್ದಾರೆ. ಈ ನಡುವೆಯೇ ರಮ್ಯಾಗೆ ಅದೇ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಸಹ ರಮ್ಯಾ ವಿರುದ್ಧ ಸಿಡಿದೆದ್ದ ಬಗ್ಗೆ ಕೂಡ ನಿಮಗೆ ಗೊತ್ತಿರಬಹುದು.[ನಟಿ ರಮ್ಯಾ ವಿರುದ್ಧ ಸಿಡಿದೆದ್ದ 'ಗೋಲ್ಡನ್ ಸ್ಟಾರ್' ಪತ್ನಿ ಶಿಲ್ಪಾ ಗಣೇಶ್.!]

ರಮ್ಯಾ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಯಾರೇ ನೆಗೆಟಿವ್ ಆಗಿ ಮಾತನಾಡಿದರೂ, ಅವರ ಫ್ಯಾನ್ಸ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸುದ್ದಿ ವಾಹಿನಿಯಾದರೂ ಸಹ ರಮ್ಯಾ ಅಭಿಮಾನಿಗಳು ತಿರುಗಿ ಬೀಳುತ್ತಿದ್ದಾರೆ. ಮುಂದೆ ಓದಿ...

ರಮ್ಯಾ ಅಭಿಮಾನಿಗಳ ಆಕ್ರೋಶ

ರಮ್ಯಾ ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಯಾರಾದರೂ ರಮ್ಯಾ ಬಗ್ಗೆ ಹೆಚ್ಚು ನೆಗೆಟಿವ್ ಆಗಿ ಕಾಮೆಂಟ್ ಮಾಡಿದರೆ, ಅವರ ವಿರುದ್ದ ತೊಡೆ ತಟ್ಟಿ ನಿಲ್ಲುತ್ತಿದ್ದಾರೆ.

ಟ್ರೋಲ್ ನಿಂದ ಜೀವನ ಮಾಡಿ

''ನಮ್ಮ ಹುಡುಗಿ ರಮ್ಯಾ ಬಗ್ಗೆ ಟ್ರೋಲ್ ಮಾಡಿಕೊಂಡು ಜೀವನ ಮಾಡಬೇಕೆಂದರೆ ಮಾಡಿಕೊಳ್ಳಿ. ಆದರೆ ಯಾರೂ ಅವರಿಗೆ ಏನೂ ಮಾಡುವುದಕ್ಕೆ ಆಗಲ್ಲ'' ಅಂತ ರಮ್ಯಾ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.[ರಮ್ಯಾ ಬಗ್ಗೆ ಹಬ್ಬಿದ ಪುಕಾರು ಒಂದು.. ತಾಯಿ ರಂಜಿತಾ ಹೇಳುವುದೇ ಮತ್ತೊಂದು.!]

ಸುದ್ದಿ ವಾಹಿನಿಗೆ ಉತ್ತರ

ನಟಿ ರಮ್ಯಾ ತಮ್ಮ ವೃತ್ತಿ ತೆರಿಗೆಯನ್ನು ಕಟ್ಟಿಲ್ಲ ಎಂದು ಸುದ್ದಿ ವಾಹಿನಿಯೊಂದು ವರದಿ ಪ್ರಸಾರ ಮಾಡಿತ್ತು. ಈ ವಿಷಯವಾಗಿ ರಮ್ಯಾ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ಉತ್ತರ ಕೊಟ್ಟಿದ್ದಾರೆ.

ಪಬ್ಲಿಸಿಟಿ ಮಾಡುತ್ತಿದ್ದಾರೆ

ರಮ್ಯಾ ಅವರ ಹೆಸರನ್ನು ಅನೇಕರು ತಮ್ಮ ಪಬ್ಲಿಸಿಟಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ರಮ್ಯಾ ಅಭಿಮಾನಿಗಳ ವಾದವಾಗಿದೆ.[ನಟಿ ರಮ್ಯಾ ಬಗ್ಗೆ ಗಾಳಿಯಲ್ಲಿ ತೇಲಿಬಂದು ಕಿವಿಗೆ ಬಿದ್ದ ಸುದ್ದಿ ಇದು.]

ರಮ್ಯಾ ವಿಷಯಕ್ಕೆ ಬಂದರೆ ಬಿಡಲ್ಲ

''ರಮ್ಯಾ ಅವರ ವಿಷಯಕ್ಕೆ ಯಾರೇ ಬಂದರೂ ಬಿಡುವುದಿಲ್ಲ. ಅವರಿಗೆ ವಾಪಸ್ ಕೊಡುತ್ತೇವೆ'' ಅಂತ ರಮ್ಯಾ ಅಭಿಮಾನಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಹೆಚ್ಚಿದ ಅಭಿಮಾನಿಗಳು

ರಮ್ಯಾ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೆಚ್ಚಾಗುತ್ತಿದ್ದಾರೆ. 'ರಮ್ಯಾ ಫ್ಯಾನ್ಸ್ ಕ್ಲಬ್', 'ರಮ್ಯಾ ವಾರಿಯರ್ಸ್', 'ರಮ್ಯಾ ಆರ್ಮಿ' ಎಂಬ ಹೆಸರಿನ ಅನೇಕ ಫ್ಯಾನ್ಸ್ ಫೇಜ್ ಗಳು ಈಗ ಚಾಲ್ತಿಯಲ್ಲಿವೆ.

English summary
Kannada Actress, EX MP, Congress Party Social Media Chief Ramya Fans have taken their twitter account to express their displeasure againt trolls.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada