»   » ನಟಿ ರಮ್ಯಾ ವಿರುದ್ಧ ಸಿಡಿದೆದ್ದ 'ಗೋಲ್ಡನ್ ಸ್ಟಾರ್' ಪತ್ನಿ ಶಿಲ್ಪಾ ಗಣೇಶ್.!

ನಟಿ ರಮ್ಯಾ ವಿರುದ್ಧ ಸಿಡಿದೆದ್ದ 'ಗೋಲ್ಡನ್ ಸ್ಟಾರ್' ಪತ್ನಿ ಶಿಲ್ಪಾ ಗಣೇಶ್.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ವಿರುದ್ಧ ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಬೆಂಕಿ ಉಂಡೆಗಳನ್ನ ಉಗುಳಿದ್ದಾರೆ.

ಬಿಜೆಪಿ ಸರ್ಕಾರ ಮಹಿಳೆಯರಿಗೆ ಭದ್ರತೆ ನೀಡುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 22.2% ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದೆ ರಮ್ಯಾ ಹರಿಹಾಯ್ದಿದ್ದರು.[ಮೂರು ವರ್ಷದಲ್ಲಿ ದೇಶವನ್ನು ಹಳ್ಳ ಹಿಡಿಸಿದ ಮೋದಿ -ಕಾಂಗ್ರೆಸ್]

ಇದೀಗ ಅದೇ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕ ಮುನಿರತ್ನ ಬೆಂಬಲಿಗರು ಮಹಿಳಾ ಜೆಡಿಎಸ್ ಕಾರ್ಪೊರೇಟರ್ ಸೀರೆಯನ್ನ ಎಳೆದು ದಾಂಧಲೆ ನಡೆಸಿದ ಪ್ರಕರಣವನ್ನ ಮುಂದಿಟ್ಟುಕೊಂಡು ರಮ್ಯಾಗೆ ಶಿಲ್ಪಾ ಗಣೇಶ್ ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ಓದಿ...

ಫೇಸ್ ಬುಕ್ ನಲ್ಲಿ ರಮ್ಯಾಗೆ ಬಿಸಿ ಮುಟ್ಟಿಸಿದ ಶಿಲ್ಪಾ ಗಣೇಶ್

ಹೇಳಿ ಕೇಳಿ, ರಮ್ಯಾ ಮೇಡಂ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಹೀಗಾಗಿ ಫೇಸ್ ಬುಕ್ ನಲ್ಲಿ ರಮ್ಯಾ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ವಾಗ್ದಾಳಿ ನಡೆಸಿದ್ದಾರೆ.[ನಟಿ ಮೇಲಿನ ದೌರ್ಜನ್ಯದ ವಿರುದ್ಧ ಶಿಲ್ಪಾ ಗಣೇಶ್ ಕೆಂಡಾಮಂಡಲ]

ಫೇಸ್ ಬುಕ್ ನಲ್ಲಿ ಶಿಲ್ಪಾ ಗಣೇಶ್ ಹೇಳಿರುವುದೇನು.?

''ಮೇಡಂ ರಮ್ಯಾ.! ಸೋನಿಯಾ ಹಾಗೂ ರಾಹುಲ್ ಗಾಗಿ ನೀವು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದೀರಾ. ಅದನ್ನೇ ಮುಂದುವರಿಸಿ... ಆದ್ರೆ ದಯವಿಟ್ಟು ರಾಹುಲ್ ಗಾಂಧಿ ತರಹ ಮಾತನಾಡಬೇಡಿ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ['ಡೊನೇಷನ್ ಗೇಟ್' ಹಗರಣ: ಸ್ಯಾಂಡಲ್ ವುಡ್ ತಾರೆಯರ ವಾಗ್ದಾಳಿ]

ರಮ್ಯಾಗೆ ತಿರುಗೇಟು ನೀಡಿದ ಶಿಲ್ಪಾ

''ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಕಾಂಗ್ರೆಸ್ ಕೈಗೊಂಡ ಕ್ರಮಗಳು ಸೂಕ್ತ ಎಂದು ನೀವು ಹೇಳಿದ್ರಿ. ಆದ್ರೆ, ಅದೇ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ನಿಷ್ಕ್ರಿಯಗೊಂಡಿದ್ದ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿತು ಎಂಬುದನ್ನು ನಾವು ನಿಮಗೆ ನೆನಪಿಸಬೇಕಿದೆ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ಮುನಿರತ್ನ ಮತ್ತು ದುಶ್ಯಾಸನ ಪಡೆ

''ನಿಮ್ಮ ಪಕ್ಷದ ಸದಸ್ಯ... ರಾಜರಾಜೇಶ್ವರಿ ನಗರದ ಶಾಸಕ... ಮುನಿರತ್ನ ಬೆಂಬಲಿಗರು ಪಬ್ಲಿಕ್ ನಲ್ಲಿ ಮಹಿಳಾ ಜೆಡಿಎಸ್ ಕಾರ್ಪೊರೇಟರ್ ಸೀರೆಯನ್ನ ಎಳೆದು ದಾಂಧಲೆ ನಡೆಸಿದಾಗ ನೀವು ಎಲ್ಲಿದ್ರಿ.?'' ಎಂದು ನಟಿ ರಮ್ಯಾಗೆ ಶಿಲ್ಪಾ ಗಣೇಶ್ ಪ್ರಶ್ನಿಸಿದ್ದಾರೆ.

ಜೀವ ಬೆದರಿಕೆ ಹಾಕಿದ್ರಾ ಮುನಿರತ್ನ.?

''ಈ ಘಟನೆ ನಡೆದಾಗ, ಅದೇ ಜಾಗದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕೂಡ ಇದ್ದರು ಎಂಬುದು ನಿಮಗೆ ಗೊತ್ತೇ.? ಶಾಸಕ ಮುನಿರತ್ನ ವಿರುದ್ಧ ಆ ಮಹಿಳಾ ಜೆಡಿಎಸ್ ಕಾರ್ಪೊರೇಟರ್ ದನಿ ಎತ್ತುತ್ತಿದ್ದಂತೆಯೇ, ಮುನಿರತ್ನ ಜೀವ ಬೆದರಿಕೆ ಹಾಕಿದ್ರಂತೆ ಎಂಬುದು ನಿಜವೇ.?'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ಇದೆಲ್ಲ ನಿಮ್ಮ ಗಮನಕ್ಕೆ ಬಂದಿದ್ಯಾ.?

''ಈ ಹಿಂದೆ ಕೂಡ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಪೊರೇಟರ್ ಮೇಲೆ ಮುನಿರತ್ನ ಹಲ್ಲೆ ನಡೆಸಿದ್ದರು. ಈ ಬಗ್ಗೆ ಆಶಾ ಸುರೇಶ್ ಎಂಬುವರು ದೂರು ಕೂಡ ನೀಡಿದ್ದರು ಅನ್ನೋದು ನಿಮಗೆ ಗೊತ್ತೇ.? - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ಮೇಟಿ ಪ್ರಕರಣ ಏನಾಯ್ತು.?

''ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಮೇಟಿ ವಿರುದ್ಧ ನಿಮ್ಮ ಪಕ್ಷ ಕೈಗೊಂಡ ಕ್ರಮವೇನು.? ನಿಮ್ಮ ಪಕ್ಷದ ಅಧ್ಯಕ್ಷರು ಹೆಣ್ಣು. ಇಂತಹ ಸಚಿವರ ಬಗ್ಗೆ ಅವರಿಗೆ ಏನೂ ಅನಿಸುವುದಿಲ್ಲವೇ.?'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ನಿಮ್ಮ ಪಕ್ಷದ ಬಗ್ಗೆ ಮಾತನಾಡಿ

''ದೇಶದ ಬಗ್ಗೆ ಮಾತನಾಡುವ ಬದಲು, ಮೊದಲು ನಿಮ್ಮ ಪಕ್ಷದ ಬಗ್ಗೆ ನೀವು ಮಾತನಾಡಿ. ನಿಮ್ಮ ಪಕ್ಷದಲ್ಲಿ ಇರುವ ಮಹಿಳೆಯರಿಗೆ ಮೊದಲು ಭದ್ರತೆ ನೀಡಿ. ಆಮೇಲೆ, ಇನ್ನೊಬ್ಬರ ವಿರುದ್ಧ ವಾಗ್ದಾಳಿ ನಡೆಸಿ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ಇಡೀ ದೇಶಕ್ಕೆ ಗೊತ್ತಿದೆ

''ಕೇಂದ್ರ ಸಚಿವರ ಪತ್ನಿ ಸುನಂದಾ ಪುಷ್ಕರ್ ರವರಿಗೆ ನಿಮ್ಮ ಸರ್ಕಾರದಲ್ಲಿಯೇ ಭದ್ರತೆ ಇರಲಿಲ್ಲ. ಹೀಗಾಗಿ, ಮಹಿಳಾ ಭದ್ರತೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ಅಷ್ಟೊಂದು ದುಡ್ಡು ಎಲ್ಲಿ ಹೋಯ್ತು.?

''ರೈತರಿಗೆ ಬಿಜೆಪಿ ಸರ್ಕಾರ ಹಣವನ್ನ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ರಿ. ಆದ್ರೆ, ಹಣಕಾಸು ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ 28,750 ಕೋಟಿ ರೂಪಾಯಿ ಸಂದಾಯ ಆಗಿದೆ. ಆ ದುಡ್ಡು ಎಲ್ಲಿ ಹೋಯ್ತು ಮೇಡಂ.?'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ನಿಮ್ಮ 'ಫೇಕ್' ಇಂಗ್ಲೀಷ್ ಅರ್ಥ ಆಗಲ್ಲ

''ಮೇಡಂ, ನೀವು ತುಂಬಾ ಚೆನ್ನಾಗಿ ಇಂಗ್ಲೀಷ್ ಮಾತನಾಡುತ್ತೀರಾ. ಆದ್ರೆ, ನಿಮ್ಮ ಫೇಕ್ ಅಮೇರಿಕನ್ ಆಕ್ಸೆಂಟ್ ಕರ್ನಾಟಕ ಜನತೆಗೆ ಅರ್ಥ ಆಗಲ್ಲ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

ರಮ್ಯಾ ಹೇಳಿದ್ದೇನು.?

''ಯುಪಿಎ ಎರಡನೇ ಅವಧಿಯಲ್ಲಿ ನಿರ್ಭಯ ಘಟನೆ ನಡೆದಾಗ ಆ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ಮೀರಿ ನಡೆದುಕೊಂಡರು. ಅವತ್ತಿನ ಸರಕಾರ ನಿರ್ಭಯ ಫಂಡ್, ತ್ವರಿತ ನ್ಯಾಯಾಲಯಗಳನ್ನು ಹಾಗೂ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಿತು. ಆದರೆ ಇವತ್ತಿನ ಸರಕಾರ ನಿರ್ಭಯ ಫಂಡ್ ವಿನಿಯೋಗಿಸಿಲ್ಲ. ಕೇವಲ 660 ಕೇಂದ್ರಗಳಲ್ಲಿ ಕೇವಲ 20 ಕೇಂದ್ರಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಅಪರಾಧ ವಿಭಾಗದ ದಾಖಲೆಗಳ ಪ್ರಕಾರ ಶೇಕಡಾ 22.2 ರಷ್ಟು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಗುರ್ಗಾಂವ್ ನಂಥ ಪ್ರದೇಶದಲ್ಲಿ ಅತ್ಯಾಚಾರ ನಡೆದಾಗ ಮುಖ್ಯಮಂತ್ರಿ ಸಂತ್ರಸ್ತೆಯ ಮನೆಗೂ ಭೇಟಿ ನೀಡಿಲ್ಲ. ಬಿಜೆಪಿ ನಾಯಕರ ಹೇಳಿಕೆಗಳೂ ಸೆಕ್ಸಿಸ್ಟ್ ಆಗಿವೆ'' ಎಂದು ಬಿಜೆಪಿ ಸರ್ಕಾರದ ವಿರುದ್ಧ ರಮ್ಯಾ ಕಿಡಿಕಾರಿದ್ದರು.

English summary
Shilpa Ganesh, Wife of Golden Star Ganesh and State Vice President Mahila Morcha - BJP Karnataka lashed out against Congress Politician, EX MP, Kannada Actress Ramya.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X