For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ರಮ್ಯಾ

  |

  ಚಿರಂಜೀವಿ ಸರ್ಜಾ ಹಠಾತ್ ನಿಧನಕ್ಕೆ ನಟಿ, ರಾಜಕಾರಣಿ ರಮ್ಯಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅದ್ಭುತ ಸಹನಟನಾಗಿ ಚಿರಂಜೀವಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಯಾವಾಗಲೂ ಉತ್ಸಾಹದಿಂದ ಇರುತ್ತಿದ್ದ ಅವರು ಪಾಸಿಟಿವ್ ಆಟಿಟ್ಯೂಡ್ ಹೊಂದಿದ್ದರು ಎಂದು ರಮ್ಯಾ ಹೇಳಿದ್ದಾರೆ.

  Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | FILMIBEAT KANNADA

  ಚಿರಂಜೀವಿ ಅವರೊಂದಿಗೆ ಕೆಲಸ ಮಾಡಿದ್ದು ಹಿತಕರ ಹಾಗೂ ಸ್ಮರಣೀಯ ಅನುಭವ. ಈ ನೋವಿನ ಸಂದರ್ಭದಲ್ಲಿ ಅವರ ಪ್ರೀತಿ ಪಾತ್ರರನ್ನು ಸಂತೈಸುವ ಮಾತುಗಳನ್ನು ಹೇಳಲು ಪದಗಳು ತುಂಬಾ ಕಠಿಣವೆನಿಸುತ್ತದೆ.

  ಅವರ ಅಗಲುವಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಅವರಿಗೆ ಸಿಗಲಿದೆ ಎಂದು ಭರವಸೆ ಹೊಂದಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಮ್ಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ಚಿರಂಜೀವಿ ಸರ್ಜಾ ಹಾಗೂ ರಮ್ಯಾ ಇಬ್ಬರೂ ಕೆ. ಮಾದೇಶ್ ನಿರ್ದೇಶನದ 2011ರ ಚಿತ್ರ 'ದಂಡಂ ದಶಗುಣಂನಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಚಿರಂಜೀವಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Actress Ramya Divya Spandana has shared her condolences for Chiranjeevi Sarja's death. They both worked together in Dandam Dashagunam movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X