For Quick Alerts
  ALLOW NOTIFICATIONS  
  For Daily Alerts

  ಅನಿಲ್ ಕಪೂರ್ ಜೊತೆ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ

  By Pavithra
  |
  ಬಾಲಿವುಡ್ ಖ್ಯಾತ ನಟನ ಜೊತೆ ರಶ್ಮಿಕಾ ಹೆಜ್ಜೆ | Oneindia Kannada

  ಕರ್ನಾಟಕದ ಕ್ರಶ್, 'ಚಮಕ್' ಚೆಲುವೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲಿಯೂ ಸಖತ್ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದಾರೆ.

  ಕೇವಲ ವೇದಿಕೆ ಹಂಚಿಕೊಂಡಿದ್ದರೆ ಸಾಮಾನ್ಯ ವಿಚಾರ ಆಗುತ್ತಿತ್ತು. ಆದರೆ ಸ್ಟೇಜ್ ಮೇಲೆ ಮೂರೇ ಮೂರು ಪೆಗ್ಗಿಗೆ.. ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹೌದು ಇತ್ತೀಚಿಗಷ್ಟೆ ನಡೆದ ಖಾಸಗಿ ಪತ್ರಿಕೆಯ ಪ್ರಶಸ್ತಿ ಸಮಾರಂಭದಲ್ಲಿ ನಟ ಅನಿಲ್ ಕಪೂರ್ ಜೊತೆಯಲ್ಲಿ ರಶ್ಮಿಕಾ ಡ್ಯಾನ್ಸ್ ಮಾಡಿದ್ದಾರೆ.

  ಅನಿಲ್ ಕಪೂರ್ ಮತ್ತು ರಶ್ಮಿಕಾ ನೃತ್ಯ ಮಾಡಿರುವ ವಿಡಿಯೋ ಸದ್ಯ ಇನ್‌ಸ್ಟಾಗ್ರಾಂ ನಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ರಶ್ಮಿಕಾ ಕೂಡ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  "ಅಪ್ಪ ತುಂಬಾ ನಾಚಿಕೆ ಆದಂತ ಸಂದರ್ಭ ಅದು. ನಾವು ಎಷ್ಟು ಸಿನಿಮಾ ಮಾಡಿದ್ದೇನೆ, ಯಾವ ಇಂಡಸ್ಟ್ರಿಗೆ ಸೇರಿದ್ದೇವೆ, ಎನ್ನುವುದು ಯಾವತ್ತಿಗೂ ಲೆಕ್ಕಕ್ಕೆ ಬರುವುದಿಲ್ಲ. ಒಟ್ಟಿಗೆ ಸೇರಿದಾಗ ಸದಾ ಸಂತಸದಿಂದ ಕೂಡಿರುತ್ತದೆ. ಇಲ್ಲಿಯ ವರೆಗೂ ನಾನು ಭೇಟಿ ಮಾಡಿದ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಖುಷಿಯಿಂದ ನಡೆದುಕೊಂಡಿದ್ದಾರೆ. ಇದು ನನಗೆ ಸಿಕ್ಕಿರುವ ಅದೃಷ್ಟ ಮತ್ತು ಆಶೀರ್ವಾದ ಹೀಗೆ ಇರಲು ಬಯಸುತ್ತೇನೆ." ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ.

  ರಶ್ಮಿಕಾ ಹಾಡಿನ ಮೇಲೆ ಧನಂಜಯ್ ಗೆ ಲವ್ ಆಗಿದೆ

  English summary
  Kannada actress Rashmika Mandanna danced with Bollywood actor Anil Kapoor. Dancing video is viral on the social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X