For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಕ್ರಾಂತಿ' ಎದುರು ತೊಡೆತಟ್ಟಿ ನಿಂತ 'RCB': ಯಾಕೀ ಸಾಹಸ? ಗೆಲುವು ಯಾರಿಗೆ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ' ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಹೆಚ್ಚು ಕಡಿಮೆ 22 ತಿಂಗಳುಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

  ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ 'ಕ್ರಾಂತಿ' ಎದುರು ಕನ್ನಡದ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಪರಭಾಷೆಯ ಸಿನಿಮಾಗಳ ವಿರುದ್ಧ 'ಕ್ರಾಂತಿ' ಏಕೈಕ ಹೋರಾಟ ಮಾಡೋದು ಫಿಕ್ಸ್ ಆಗಿತ್ತು.

  ದರ್ಶನ್ 'ಕ್ರಾಂತಿ' ಬಾಕ್ಸಾಫೀಸ್‌ನಲ್ಲಿ ಗುಡುಗು ಮೂಡಿಸೋದು ಪಕ್ಕಾ ಅನ್ನುವಾಗಲೇ 'ಆರ್‌ಸಿಬಿ' ತೊಡೆತಟ್ಟಿ ನಿಂತಿದೆ. ಅಷ್ಟಕ್ಕೂ ಆರ್‌ಸಿಬಿ ಏನು? 'ಆರ್‌ಸಿ ಬಾಯ್ಸ್' ಯಾರು? 'ಕ್ರಾಂತಿ' ಎದುರು ನಿಲ್ಲಲು ಹೊರಟಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಮುಂದಿದೆ.

  ಯಾರೀ 'ಆರ್‌ಸಿ ಬಾಯ್ಸ್'?

  ಯಾರೀ 'ಆರ್‌ಸಿ ಬಾಯ್ಸ್'?

  ಅಸಲಿಗೆ 'ಆರ್‌ಸಿಬಿ' ಅನ್ನೋದು ಕನ್ನಡ ಸಿನಿಮಾ ಹೆಸರು. ಈ ಸಿನಿಮಾವನ್ನು 'ಆರ್‌ ಸಿ ಬಾಯ್ಸ್' ಅಂತಲೂ ಸಿನಿಮಾ ತಂಡ ಕರೆಯುತ್ತಿದೆ. ಹಿರಿಯ ನಟ ತಬಲ ನಾಣಿ, ಕುರಿ ಪ್ರತಾಪ್ ಹಾಗೂ ಕಾಮಿಡಿ ಕಿಲಾಡಿಗಳು ನಯನಾ ಪ್ರಮುಖ ಪಾತ್ರದಲ್ಲಿ ನಟಿಸಿರೋ ಸಿನಿಮಾವಿದು. ಪಕ್ಕಾ ಕಾಮಿಡಿ ಕಮ್ ಎಮೋಷನಲ್ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಟ್ರೈಲರ್ ಹಾಸ್ಯ ಪ್ರಿಯರಿಗೆ ಕಚಗುಳಿಯನ್ನು ನೀಡುತ್ತಿದೆ.

  'ಕ್ರಾಂತಿ' ಆರ್ ಸಿ ಬಾಯ್ಸ್ ಟಕ್ಕರ್

  'ಕ್ರಾಂತಿ' ಆರ್ ಸಿ ಬಾಯ್ಸ್ ಟಕ್ಕರ್

  ದರ್ಶನ್ ಸಿನಿಮಾ 'ಕ್ರಾಂತಿ' ಎದುರು ಥಿಯೇಟರ್‌ಗಳಲ್ಲಿ ಹೋರಾಟಕ್ಕೆ ಇಳಿದ ಏಕೈಕ ಸಿನಿಮಾ 'ಆರ್‌ ಸಿ ಬಾಯ್ಸ್'. ಗಣರಾಜ್ಯೋತ್ಸವಕ್ಕೆ ಕನ್ನಡದಿಂದ ರಿಲೀಸ್‌ ಆಗುತ್ತಿರುವ ಏಕೈಕ ಸಿನಿಮಾ 'ಕ್ರಾಂತಿ' ಅಂದ್ಕೊಂಡ್ರೆ ತಪ್ಪು. ದರ್ಶನ್ ಸಿನಿಮಾ ಜೊತೆ 'ಕ್ರಾಂತಿ' ಮಾಡೋಕೆ 'ಆರ್ ಸಿ ಬಾಯ್ಸ್' ಕೂಡ ಹೊರಟಿದ್ದಾರೆ. ಈ ಸಿನಿಮಾ 'ಕ್ರಾಂತಿ' ಅಬ್ಬರದಲ್ಲಿ ಕಳೆದೇ ಹೋಗುತ್ತಾ? ಇಲ್ಲಾ ಗಟ್ಟಿಯಾಗಿ ನಿಲ್ಲುತ್ತಾರಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

  'ಆರ್‌ ಸಿ ಬಾಯ್ಸ್' 125ನೇ ಸಿನಿಮಾ

  'ಆರ್‌ ಸಿ ಬಾಯ್ಸ್' 125ನೇ ಸಿನಿಮಾ

  ಅಂದ್ಹಾಗೆ, 'ಆರ್‌ ಸಿ ಬಾಯ್ಸ್' ಪಕ್ಕಾ ಕಾಮಿಡಿ ಸಿನಿಮಾ ಆಗಿರೋದ್ರಿಂದ ಹಾಸ್ಯ ಪ್ರಿಯರಿಗೆ ಇಷ್ಟ ಆಗಬಹುದು. ವಿಶೇಷ ಅಂದ್ರೆ, ಇದು ತಬಲ ನಾಣಿ ಅಭಿನಯದ 125ನೇ ಸಿನಿಮಾ. ಇವರೊಂದಿಗೆ ಕಾಮಿಡಿ ಲೋಕದ ಕಲಾವಿದರು ಕುರಿ ಪ್ರತಾಪ್ ಹಾಗೂ ನಯನಾ ಕೂಡ ನಟಿಸಿದ್ದಾರೆ. ಆದರೂ, ದೊಡ್ಡ ಸಿನಿಮಾ ಮುಂದೆ ಕಂಟೆಂಟ್ ಚೆನ್ನಾಗಿದ್ದರೆ, ದರ್ಶನ್ ಎದುರು ಆರ್‌ ಸಿ ಬಾಯ್ಸ್ ಗೆದ್ದು ಬೀಗುವ ಎಲ್ಲಾ ಸಾಧ್ಯತೆಗಳಿವೆ.

  ಫಸ್ಟ್ ಡೇ ಶೋನಲ್ಲೂ 'ಕ್ರಾಂತಿ'

  ಫಸ್ಟ್ ಡೇ ಶೋನಲ್ಲೂ 'ಕ್ರಾಂತಿ'

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಕ್ರೇಜ್ ಈಗಾಗಲೇ ಶುರುವಾಗಿದೆ. ಅಡ್ವಾನ್ಸ್ ಬುಕಿಂಗ್ ಕ್ರೇಜ್ ನೋಡುತ್ತಿದ್ದರೆ, ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಫಸ್ಟ್ ಡೇ ಕರ್ನಾಟಕದಲ್ಲಿ ದಾಖಲೆ ಬರೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಇದುವರೆಗೂ ಮೊದಲ 'ಕ್ರಾಂತಿ'ಗೆ 837 ಶೋ ಸಿಕ್ಕಿದೆ. ಈ ಮಧ್ಯೆ 'ಆರ್‌ ಸಿ ಬಾಯ್ಸ್' ಎಲ್ಲೆಲ್ಲಿ ಪ್ರದರ್ಶನ ಕಾಣುತ್ತೋ? ಎಷ್ಟು ಚಿತ್ರಮಂದಿರಗಳು ಸಿಕ್ಕಿದೆ? ಸಿನಿಮಾ ಗೆಲ್ಲುತ್ತಾ? ಅನ್ನೋದು ಪ್ರಶ್ನೆಗೆ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ.

  English summary
  RCB Aka RC Brothers Kannada Film That Will Be Releasing Opposite Darshan Starrer Kranti, Know More.
  Tuesday, January 24, 2023, 13:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X