»   » ಕಷ್ಟದಲ್ಲಿ ಬಂದ ಉಪೇಂದ್ರ ಪ್ರತಿಭೆಗಳನ್ನು ಚಿವುಟುತ್ತಿದ್ದಾರೆ!

ಕಷ್ಟದಲ್ಲಿ ಬಂದ ಉಪೇಂದ್ರ ಪ್ರತಿಭೆಗಳನ್ನು ಚಿವುಟುತ್ತಿದ್ದಾರೆ!

Posted By:
Subscribe to Filmibeat Kannada

ಚಿತ್ರೋದ್ಯಮದ ಹಿನ್ನಲೆ ಇಲ್ಲದವರು ಗಾಂಧಿನಗರದಲ್ಲಿ ಭದ್ರ ಬುನಾದಿ ಹಾಕಿರುವ ಉದಾಹರಣೆ ಎಲ್ಲೋ ಅಪರೂಪ. ಈ ಅಪರೂಪದ ಉದಾಹರಣೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಒಬ್ಬರು.

ಉಪೇಂದ್ರ ಅಭಿನಯದ ಹೊಸ ಚಿತ್ರ ಸೆಟ್ಟೇರುತ್ತಿದೆ ಎನ್ನುವ ಸುದ್ದಿಗಿಂತ, ಉಪ್ಪಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಅಂದರೆ ಅದು ಕನ್ನಡ ಚಿತ್ರೋದ್ಯಮದಲ್ಲಿ ಬಹುದೊಡ್ಡ ಸುದ್ದಿ.

ಅದಕ್ಕೆ ಕಾರಣ ತನ್ನ ನಿರ್ದೇಶನದ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ನಿರೂಪಣೆ ಮಾಡುವ ಅವರ ಶೈಲಿ. ಅವರ ನಿರ್ದೇಶನದ ಓಂ ನಂತರ ಬಂದ ಉಪೇಂದ್ರ, ಸೂಪರ್ ಮುಂತಾದ ಚಿತ್ರಗಳನ್ನು ಉಪ್ಪಿ ತೆರೆಗೆ ತಂದ ರೀತಿಯಿಂದಾಗಿ ಅವರ ನಿರ್ದೇಶನದ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಷ್ಟು.

ಸೂಪರ್ ಚಿತ್ರದ ನಂತರ ಉಪೇಂದ್ರ ತನ್ನ ಹೋಂ ಬ್ಯಾನರಿನ ಮೂಲಕ ಹೊಸ ಚಿತ್ರ 'ಉಪ್ಪಿ 2' ನಿರ್ದೇಶಿಸಿ, ನಿರ್ಮಿಸಲು ಹೊರಟಿದ್ದಾರೆ.

ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿರುವುದು ಒಂದೆಡೆಯಾಗಿದ್ದರೆ, ಚಿತ್ರದ ಕಥೆ ಕೃತಿಚೌರ್ಯದ ಆರೋಪಕ್ಕೆ ಗುರಿಯಾಗಿದೆ. ಏನಿದು ಗುರುತರ ಆರೋಪ?

ಉಪ್ಪಿ2 ಚಿತ್ರದ ಕಥೆ ನನ್ನದು

ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಉಪ್ಪಿ2 ಚಿತ್ರದ ಕಥೆಯನ್ನು ಉಪೇಂದ್ರ ಕದ್ದಿದ್ದಾರೆ ಎಂದು ನಾಗೇಂದ್ರ ಎನ್ನುವ ಬರಹಗಾರರು ಗಂಭೀರ ಆರೋಪ ಮಾಡಿದ್ದಾರೆ. (ಚಿತ್ರದಲ್ಲಿ ಬರಹಗಾರ ನಾಗೇಂದ್ರ)

ಯಲಹಂಕದ ರಾಜನಕುಂಟೆ

ಗಾಡ್ ಫಾದರ್ ಚಿತ್ರದ ಶೂಟಿಂಗ್ ವೇಳೆ ರಾಜನಕುಂಟೆಯಲ್ಲಿ ನಾನು ಉಪೇಂದ್ರ ಅವರನ್ನು ಭೇಟಿ ಮಾಡಲು ಬಹಳಷ್ಟು ಬಾರಿ ಪ್ರಯತ್ನಿಸಿದ್ದೆ. ಮೂರ್ನಾಲ್ಕು ಬಾರಿ ಚೀಟಿ ಕೊಟ್ಟು ಅವರ ಜೊತೆ ಮಾತುಕತೆ ನಡೆಸಲು ಬಯಸಿದ್ದೆ ಎಂದು ನಾಗೇಂದ್ರ ಮಾಧ್ಯಮದ ಮುಂದೆ ಅವಲತ್ತು ತೋಡಿಕೊಂಡಿದ್ದಾರೆ.

ನಾಲ್ಕು ದಿನಗಳ ನಂತರ ಭೇಟಿಯಾದೆ

ನಾಲ್ಕು ದಿನಗಳ ಸತತ ಪ್ರಯತ್ನದಿಂದ ಅವರ ಭೇಟಿ ಸಾಧ್ಯವಾಯಿತು. ಉಪೇಂದ್ರ ಚಿತ್ರದ ಮುಂದುವರಿದ ಭಾಗವನ್ನು ಮಾಡಬಹುದು ಎಂದು ಅವರಿಗೆ ಹೇಳಿದ್ದೆ. ಹೌದಾ ಎಂದು ಕಥೆಯನ್ನು ನನ್ನಲ್ಲಿ ಸವಿವರವಾಗಿ ಉಪ್ಪಿ ಕೇಳಿಕೊಂಡರು.

ಅವರ ಮನೆಗೆ ಭೇಟಿ ನೀಡಿದ್ದೆ

ಇದಾದ ನಂತರ ಅವರಿಂದ ಏನೂ ಸುದ್ದಿಯೇ ಇರಲಿಲ್ಲ. ಅವರ ಮನೆಗೆ ಹೋಗಿ ಉಪೇಂದ್ರ ಅವರನ್ನು ಭೇಟಿಯಾದೆ. ಉಪೇಂದ್ರ ಚಿತ್ರದ ಮುಂದುವರಿದ ಭಾಗವನ್ನು ನಾನೇ ಸಿನಿಮಾ ಮಾಡುತ್ತೇನೆ ಎಂದಿದ್ದರು - ನಾಗೇಂದ್ರ.

ಫೋನ್ ಮಾಡುತ್ತೇನೆ ಎಂದು ಉಪ್ಪಿಯ ಸುದ್ದಿಯೇ ಇಲ್ಲ

ನಿಮ್ಮ ನಂಬರ್ ಕೊಡಿ ಚಿತ್ರೀಕರಣದ ವೇಳೆ ಕರೆಯುವುದಾಗಿ ಹೇಳಿದ್ದ ಉಪ್ಪಿ, ನನ್ನನ್ನು ಕರೆಯದೇ ಸಿನಿಮಾ ಮಾಡಿ ಮುಗಿಸುವ ಹಂತದಲ್ಲಿದ್ದಾರೆ ಎಂದು ನಾಗೇಂದ್ರ ಉಪ್ಪಿ ವಿರುದ್ದ ಆರೋಪ ಹೊರಿಸಿದ್ದಾರೆ.

ಕಷ್ಟದಲ್ಲಿ ಬಂದ ಉಪ್ಪಿ

ಕಷ್ಟದಿಂದ ಮೇಲೆ ಬಂದ ಉಪೇಂದ್ರ ಅವರಿಂದ ಇಂತಹ ನಡೆಯನ್ನು ನಿರೀಕ್ಷಿಸಿರಲಿಲ್ಲ, ನಮ್ಮಂತಹ ಪ್ರತಿಭೆಗಳನ್ನು ಉಪೇಂದ್ರ ಚಿವುಟುತಿದ್ದಾರೆ ಎಂದು ನಾಗೇಂದ್ರ, ಉಪೇಂದ್ರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

English summary
Real Star Upendra steals Uppi2 story from me, Writer Nagendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada