For Quick Alerts
  ALLOW NOTIFICATIONS  
  For Daily Alerts

  'ನೋ ವೇ ಚಾನ್ಸೇ ಇಲ್ಲ' ಎಂದ ರಿಷಬ್ ಶೆಟ್ಟಿ: 'ಪ್ರಶಾಂತ್ ನೀಲ್ ತರ ಅಲ್ಲ ಬಿಡು ಗುರು' ಎಂದ ನೆಟ್ಟಿಗರು!

  |

  'ಕಾಂತಾರ' ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಲಾಭ ಆಗಿರೋದ್ರಲ್ಲಿ ಡೌಟೇ ಇಲ್ಲ. ಆದರೆ, ಎಲ್ಲಕ್ಕಿಂತ ಹೆಚ್ಚು ಲಾಭ ಮಾಡಿದ್ದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್. 'ಕಾಂತಾರ'ವನ್ನು ಅಲ್ಲು ಅರವಿಂದ್ ಅವರೇ ತೆಲುಗಿನಲ್ಲಿ ರಿಲೀಸ್ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ.

  ರಿಷಬ್ ಶೆಟ್ಟಿ ಸಿನಿಮಾ ತೆಲುಗು ಮಂದಿಗೂ ಇಷ್ಟ ಆಗಿದೆ. ಬಾಕ್ಸಾಫೀಸ್ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಕ್ಸಸ್ ನೋಡಿ ಬೆರಗಾಗಿರೋ ಅಲ್ಲು ಅರ್ಜುನ್ ತಂದೆ ವೇದಿಕೆ ಮೇಲೆ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ.

  ದೀಪಾವಳಿ ಹಬ್ಬಕ್ಕೆ 'ಹೆಡ್ ಬುಷ್' Vs 'ಕಾಂತಾರ': ಬಾಕ್ಸಾಫೀಸ್‌ ಕಥೆಯೇನು?ದೀಪಾವಳಿ ಹಬ್ಬಕ್ಕೆ 'ಹೆಡ್ ಬುಷ್' Vs 'ಕಾಂತಾರ': ಬಾಕ್ಸಾಫೀಸ್‌ ಕಥೆಯೇನು?

  ಅದ್ಯಾವಾಗ ಗೀತಾ ಆರ್ಟ್ಸ್ ಜೊತೆ ರಿಷಬ್ ಶೆಟ್ಟಿ ಸಿನಿಮಾ ಮಾಡುತ್ತಾರೆ. ಅದಕ್ಕೆ ರಿಷಬ್ ಶೆಟ್ಟಿನೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹೊರಬಿತ್ತೋ, ಅಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಮತ್ತೊಬ್ಬ ನಿರ್ದೇಶಕ ಕನ್ನಡ ಚಿತ್ರರಂಗ ಬಿಡೋದು ಕನ್ಫರ್ಮ್ ಅಂತ ಕಮೆಂಟ್ ಮಾಡಿದ್ದರು. ಈ ವಿಚಾರಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

  ಅಲ್ಲು ಅರ್ಜುನ್ ತಂದೆ ಹೇಳಿದ್ದೇನು?

  ಅಲ್ಲು ಅರ್ಜುನ್ ತಂದೆ ಹೇಳಿದ್ದೇನು?

  ರಿಷಬ್ ಶೆಟ್ಟಿ 'ಕಾಂತಾರ' ತೆಲುಗಿನಲ್ಲೂ ಹಿಟ್ ಆಗಿದೆ. ಈ ಕಾರಣಕ್ಕೆ ಇತ್ತೀಚೆಗೆ 'ಕಾಂತಾರ' ಸಿನಿಮಾದ ಸಕ್ಸಸ್ ಮೀಟ್ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿಗೆ ವೇದಿಕೆ ಮೇಲೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಆಫರ್ ಕೊಟ್ಟಿದ್ದನ್ನು ರಿವೀಲ್ ಮಾಡಿದ್ದರು. " ಗೀತಾ ಆರ್ಟ್ಸ್ ಬ್ಯಾನರ್‌ ಜೊತೆ ಸಿನಿಮಾ ಮಾಡುವಂತೆ ರಿಷಬ್ ಶೆಟ್ಟಿಗೆ ಹೇಳಿದ್ದೇನೆ. ಅವರೂ ಕೂಡ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ." ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಿಷಬ್ ಶೆಟ್ಟಿನೂ ಕನ್ನಡ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು.

  'ನೋ ವೇ ಚಾನ್ಸೇ ಇಲ್ಲ'-ರಿಷಬ್ ಶೆಟ್ಟಿ

  'ನೋ ವೇ ಚಾನ್ಸೇ ಇಲ್ಲ'-ರಿಷಬ್ ಶೆಟ್ಟಿ

  ಅಲ್ಲು ಅರವಿಂದ್ ಕೊಟ್ಟ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡಿತ್ತು. ಅಲ್ಲದೆ ತೆಲುಗು ಮೀಡಿಯಾಗಳೂ ಕೂಡ ರಿಷಬ್ ಶೆಟ್ಟಿ ತೆಲುಗು ಸಿನಿಮಾ ಬಗ್ಗೆ ಕಮೆಂಟ್ ಮಾಡಿದ್ದವು. ಆಗ ನೆಟ್ಟಿಗರು ಮತ್ತೊಬ್ಬ ಕನ್ನಡದ ನಿರ್ದೇಶಕ ಕನ್ನಡ ಚಿತ್ರರಂಗವನ್ನು ಬಿಡೋದು ಕನ್ಫರ್ಮ್ ಅಂತ ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗಳಿಗೆ ರಿಷಬ್ ಶೆಟ್ಟಿ ಟ್ವಿಟರ್‌ನಲ್ಲೇ ಶಾರ್ಟ್ ಅಂಡ್ ಸ್ವೀಟ್‌ ಆಗಿ " ನೋ ವೇ ಚಾನ್ಸೇ ಇಲ್ಲ" ಅಂತ ಪ್ರತಿಕ್ರಿಯೆ ನೀಡಿದ್ದಾರೆ.

  ರಿಷಬ್ ಶೆಟ್ಟಿ ಪ್ರತಿಕ್ರಿಯೆಗೆ ದಿಲ್ ಖುಷ್

  ರಿಷಬ್ ಶೆಟ್ಟಿ ಪ್ರತಿಕ್ರಿಯೆಗೆ ದಿಲ್ ಖುಷ್

  ರಿಷಬ್ ಶೆಟ್ಟಿ " ನೋ ವೇ ಚಾನ್ಸೇ ಇಲ್ಲ" ಅಂತಿದ್ದಂತೆ ಕನ್ನಡ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ರಿಷಬ್ ಶೆಟ್ಟಿ ನಿರ್ಧಾರಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ. ಮತ್ತೊಬ್ಬರಂತೂ ಪ್ರಶಾಂತ್ ನೀಲ್‌ರನ್ನು ಎಳೆದು ತಂದಿದ್ದಾರೆ. " ನೀನು ಪ್ರಶಾಂತ್ ನೀಲ್ ತರ ಫಿನಾಯಿಲ್ ಅಲ್ಲ ಬಿಡು ಗುರು. ಫ್ಯೂರ್ ಹಾಲು" ಅಂತ ಕೆಜಿಎಫ್ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಕಾಲೆಳೆದಿದ್ದಾರೆ.

  ತೆಲುಗು ವರ್ಷನ್ ಕಲೆಕ್ಷನ್ ಎಷ್ಟು?

  ತೆಲುಗು ವರ್ಷನ್ ಕಲೆಕ್ಷನ್ ಎಷ್ಟು?

  'ಕಾಂತಾರ' ತೆಲುಗು ಭಾಷೆಯಲ್ಲೂ ರಿಲೀಸ್ ಆಗಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಗಳಿಕೆಯನ್ನೇ ಕಂಡಿದೆ. ಇದೂವರೆಗೂ 'ಕಾಂತಾರ' ಸಿನಿಮಾದ ಕಲೆಕ್ಷನ್ ಸುಮಾರು 16 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಅಲ್ಲು ಅರವಿಂದ್ 2 ಕೋಟಿ ರೂಪಾಯಿಗೆ ತೆಲುಗು ವರ್ಷನ್ ಖರೀದಿ ಮಾಡಿದ್ದು, ಅತೀ ಹೆಚ್ಚು ಲಾಭದಲ್ಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

  ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾ ಹೊಡೆದುರುಳಿಸಿದ 'ಕಾಂತಾರ': ಲಿಸ್ಟ್ ಇಲ್ಲಿದೆ!ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾ ಹೊಡೆದುರುಳಿಸಿದ 'ಕಾಂತಾರ': ಲಿಸ್ಟ್ ಇಲ್ಲಿದೆ!

  English summary
  Rishab Shetty Reaction On Leaving Kannada Industry After Kantara Movie, Know More.
  Wednesday, October 19, 2022, 18:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X