For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ ಮತ್ತೊಂದು ದಾಖಲೆ ಬರೆದ 'ಕಾಂತಾರ': ಇದೂವರೆಗೂ ಸೇಲ್ ಆದ ಟಿಕೆಟ್ ಎಷ್ಟು?

  |

  ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಹಾವ ಇನ್ನೂ ಕಮ್ಮಿಯಾಗಿಲ್ಲ. ಕನ್ನಡ, ಹಿಂದಿ, ತೆಲುಗು ಸೇರಿದಂತೆ ಬಿಡುಗಡೆಯಾದ ಭಾಷೆಗಳಲ್ಲೆಲ್ಲಾ ಸಿನಿಮಾ ಕಲೆಕ್ಷನ್ ಜೋರಾಗಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಮುನ್ನುಗ್ಗುತ್ತಿದೆ.

  'ಕಾಂತಾರ' ಬಾಲಿವುಡ್‌ ಮಂದಿಗೆ ಹಿಡಿಸಬಹುದು ಅನ್ನೋ ನಿರೀಕ್ಷೆ ಇರಲಿಲ್ಲ. ಆರಂಭದಲ್ಲಿ ಬಾಕ್ಸಾಫೀಸ್‌ ಜೋಷ್ ಇಲ್ಲದೆ ಇದ್ದರೂ, ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ.

  Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!

  ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 50 ದಿನಗಳನ್ನು ಪೂರೈಸಲಿದೆ. ದಿನಕ್ಕೊಂದು ದಾಖಲೆಗಳನ್ನು ಬರೆಯುತ್ತಾ ಮುನ್ನುಗುತ್ತಿರುವ 'ಕಾಂತಾರ' ಕರ್ನಾಟಕದಲ್ಲಿ ಹೊಸದೊಂದು ದಾಖಲೆಯನ್ನು ಬರೆದಿದೆ. ಆ ದಾಖಲೆ ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಕಾಂತಾರ' ವಿಶಿಷ್ಟ ದಾಖಲೆ

  'ಕಾಂತಾರ' ವಿಶಿಷ್ಟ ದಾಖಲೆ

  'ಕಾಂತಾರ' ಕನ್ನಡದ ಕಥೆ. ಈ ಸಿನಿಮಾ ರಿಲೀಸ್ ಆದ ದಿನದಿಂದಲ್ಲೇ ದಾಖಲೆಗಳನ್ನು ಬರೋಕೆ ಶುರು ಮಾಡಿದೆ. ಸೆಪ್ಟೆಂಬರ್ 30ರಂದು ಈ ಸಿನಿಮಾ ಕರ್ನಾಟಕದಲ್ಲಿ ಗ್ರ್ಯಾಂಡ್ ರಿಲೀಸ್ ಆಗಿತ್ತು. ಅಲ್ಲಿಂದ ಒಂದೊಂದೇ ದಾಖಲೆಗಳನ್ನು ಅಳಿಸಿ ಹಾಕುತ್ತಾ ಮುನ್ನುತ್ತಿದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾವೊಂದು ಇಂತಹ ದಾಖಲೆ ಮಾಡಿಲ್ಲ ಅಂತ ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಾರೆ. ಅದರಂತೆ 50 ದಿನ ಸಮೀಪಿಸುತ್ತಿರುವಾಗಲೇ ಮತ್ತೊಂದು ವಿಶಿಷ್ಟವಾದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  'ಕಾಂತಾರ' ಎಷ್ಟು ಟಿಕೆಟ್ ಸೇಲ್?

  'ಕಾಂತಾರ' ಎಷ್ಟು ಟಿಕೆಟ್ ಸೇಲ್?

  ರಿಷಬ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದನ್ನು ನೋಡಿ ಭಾರತೀಯ ಚಿತ್ರರಂಗವೇ ಕಂಗಾಲಾಗಿದೆ. ಐದೂ ಭಾಷೆಗಳಲ್ಲಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ 'ಕಾಂತಾರ' ವಿಶಿಷ್ಟ ದಾಖಲೆಯನ್ನು ಬರೆದಿದೆ. ಸಿನಿಮಾ ಬಿಡುಗಡೆಯಾಗಿ ಸುಮಾರು 40 ದಿನಗಳಾಗಿವೆ ಈ ಸಂದರ್ಭದಲ್ಲಿ ಇಲ್ಲಿವರೆಗೂ 1 ಕೋಟಿ ಟಿಕೆಟ್ ಕೇವಲ ಕರ್ನಾಟಕದಲ್ಲಿ ಸೇಲ್ ಆಗಿದೆ. ಇದು ಅಧಿಕೃತವಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನೀಡಿದೆ.

  ಬಾಕ್ಸಾಫೀಸ್‌ನಲ್ಲಿ ಕಾಂತಾರ ಕಲೆಕ್ಷನ್ ಎಷ್ಟು?

  ಬಾಕ್ಸಾಫೀಸ್‌ನಲ್ಲಿ ಕಾಂತಾರ ಕಲೆಕ್ಷನ್ ಎಷ್ಟು?

  'ಕಾಂತಾರ' ಕರ್ನಾಟಕದಲ್ಲಿ ರಿಲೀಸ್ ಆದ ಬಳಿಕ ಬೇರೆ ಭಾಷೆಗಳಲ್ಲೂ ರಿಲೀಸ್ ಆಗಿತ್ತು. ಈಗ ಕರ್ನಾಟಕದಲ್ಲಿ 50 ದಿನಗಳನ್ನು ಪೂರೈಸುವ ಸನಿಹದಲ್ಲಿದೆ. ಅದೇ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ 50 ದಿನಗಳನ್ನು ಪೂರೈಸುವುದಕ್ಕೆ ಇನ್ನೂ ಸಮಯವಿದೆ. ಅಷ್ಟರಲ್ಲೇ 15 ಕೋಟಿ ರೂ. ಸಿನಿಮಾವೊಂದು ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಸದ್ಯ ಈ ಸಿನಿಮಾ ವಿಶ್ವದಾದ್ಯಂತ ಸುಮಾರು 350 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ.

  ಹೊಂಬಾಳೆ ನಿರ್ಮಿಸಿದ 7 ಸಿನಿಮಾಗಳ ಕಲೆಕ್ಷನ್ ₹2000 ಕೋಟಿ: ಯಾವ್ಯಾವ ಸಿನಿಮಾ ಗಳಿಕೆ ಎಷ್ಟೆಷ್ಟು?ಹೊಂಬಾಳೆ ನಿರ್ಮಿಸಿದ 7 ಸಿನಿಮಾಗಳ ಕಲೆಕ್ಷನ್ ₹2000 ಕೋಟಿ: ಯಾವ್ಯಾವ ಸಿನಿಮಾ ಗಳಿಕೆ ಎಷ್ಟೆಷ್ಟು?

  'ಕಾಂತಾರ' 400 ಕೋಟಿ ರೂ. ಟಾರ್ಗೆಟ್

  'ಕಾಂತಾರ' 400 ಕೋಟಿ ರೂ. ಟಾರ್ಗೆಟ್

  'ಕಾಂತಾರ' ವಿಶ್ವದಾದ್ಯಂತ ಸುಮಾರು 350 ಕೋಟಿ ಕಲೆಕ್ಷನ್ ಮಾಡಿದೆ. ಹಿಂದಿ ಬೆಲ್ಟ್‌ನಲ್ಲಿ ಇನ್ನೂ ಸಿನಿಮಾ ನೋಡುತ್ತಿದ್ದಾರೆ. ಅಲ್ಲಿ ಪ್ರತಿ ದಿನ ಕಮ್ಮಿ ಅಂದ್ರೂ 2 ಕೋಟಿ ರೂ. ಕಲೆಕ್ಷನ್ ಆಗುತ್ತಿದೆ. ಹಾಗೇ ಕರ್ನಾಟಕದಲ್ಲೂ ಕಲೆಕ್ಷನ್ ಭೇಟೆ ಇನ್ನೂ ಮುಂದುವರೆದಿದೆ. ಹೀಗಾಗಿ ಮುಂದಿನ ಟಾರ್ಗೆಟ್ 400 ಕೋಟಿ ರೂ. ಅನ್ನೋ ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕಾಚಾರ. ಆದರೆ, ಹೊಂಬಾಳೆ ಫಿಲ್ಮ್ಸ್ ಮಾತ್ರ ಕಲೆಕ್ಷನ್ ಬಗ್ಗೆ ಎಲ್ಲೂ ಮಾಹಿತಿಯನ್ನು ಹಂಚಿಕೊಂಡಿಲ್ಲ.

  English summary
  Rishab Shetty Starrer Hombale Films Kantara 1 Crore Ticket Sold In Karnataka, Know More,
  Wednesday, November 9, 2022, 23:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X