For Quick Alerts
  ALLOW NOTIFICATIONS  
  For Daily Alerts

  75ನೇ ಸ್ವಾತಂತ್ರ್ಯ ದಿನೋತ್ಸವಕ್ಕೆ ರಿಷಬ್ ಶೆಟ್ಟಿಯ 'ಕಾಂತಾರ' ಸಾಂಗ್ ಗಿಫ್ಟ್!

  |

  ರಿಷಬ್ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಮಲ್ಟಿ ಟಾಸ್ಕ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್. ನಟನೆ ಮಾಡೋಕೂ ಸೈ. ಅದೇ ಡೈರೆಕ್ಷನ್ ಮಾಡೋಕೂ ಜೈ. ನಟನೆ ಜೊತೆಗೆ ನಿರ್ದೇಶನ ಮಾಡು ಅಂದರೆ ಅದಕ್ಕೂ ಸೈ. ಎಲ್ಲಕ್ಕಿಂತ ಹೆಚ್ಚಾಗಿ ರಿಷಬ್ ಶೆಟ್ಟಿ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ ಅನ್ನೋದು ಇಲ್ಲಿ ಬಹಳ ಮುಖ್ಯ.

  ಸದ್ಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಹೊಸ ಸಿನಿಮಾ 'ಕಾಂತಾರ' ಬೇಜಾನ್ ಸದ್ದು ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಇದೇ ಸಿನಿಮಾ ಮೇಲೆ ಸಿಕ್ಕಾಪಟ್ಟೆ ವರ್ಕ್ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಹಾಡನ್ನು ಬಿಡುಗಡೆ ಮಾಡೋಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

  ಅಮೃತ ಮಹೋತ್ಸವದ ಘಳಿಕಗೆಯಲ್ಲಿ 'ಕಾಂತಾರ'

  'ಕಾಂತಾರ' ಹೆಸರು ಕೇಳಿದರೆ ಥ್ರಿಲ್ಲಿಂಗ್ ಅಂತ ಅನಿಸುತ್ತೆ. ಈಗಾಗಲೇ ರಿಲೀಸ್ ಆಗಿರೋ ತುಣುಕುಗಳು ಅದಕ್ಕೆ ಸಾಕ್ಷಿ ಎಂಬಂತಿದೆ. ರಿಷಬ್ ಶೆಟ್ಟಿ ಈ ಬಾರಿ ಮತ್ತೆ ಕರಾವಳಿ ಭಾಗದ ಕಥೆಯನ್ನು ಕೈಗೆತ್ತಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಸದ್ಯ ಸಿನಿಮಾ ಹಾಡೋಂದನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ತುದಿಗಾಲಲ್ಲಿ ನಿಂತಿದೆ.

  ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳನ್ನು ಆಗುತ್ತೆ. ಇಡೀ ದೇಶ ಇದೇ ಸಂಭ್ರಮದಲ್ಲಿದೆ. ಚಿತ್ರರಂಗ ಕೂಡ ಇದೇ ತನ್ನದೇ ರೀತಿಯಲ್ಲಿ ಸಂಭ್ರಮಿಸುವುದಕ್ಕೆ ಸಜ್ಜಾಗಿ ನಿಂತಿದೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ತಂಡ ಕೂಡ ಈ ಅಮೃತ ಮಹೋತ್ಸವದ ದಿನದಂದೇ ಹಾಡನ್ನು ಬಿಡುಗಡೆ ಮಾಡಿ, ಜನರಿಗೆ ಉಡುಗೊರೆ ನೀಡಲು ಮುಂದಾಗಿದೆ.

  ಸಿಂಗಾರ ಸಿರಿಯೆ.. ಹಾಡು ಬಿಡುಗಡೆ

  'ಕೆಜಿಎಫ್ ಚಾಪ್ಟರ್ 2' ಅಂತಹ ದಾಖಲೆ ಬರೆದ ಸಿನಿಮಾವನ್ನು ನಿರ್ಮಿಸಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 'ಕಾಂತಾರ'ಗೆ ಹಣ ಹೂಡಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಸ್ವಾತಂತ್ರ್ಯ ದಿನದಿಂದ ಭರ್ಜರಿ ಪ್ರಚಾರ ಆರಂಭ ಆಗಲಿದೆ. ಇದರ ಮೊದಲ ಭಾಗವಾಗಿಯೇ ಪ್ರಮೋದ್ ಮರವಂತೆ ಬರೆದಿರೋ "ಸಿಂಗಾರ ಸಿರಿಯೆ.." ಎಂಬ ಜಾನಪದ ಸೊಗಡಿನ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ.

  'ಕಾಂತಾರ' ಸಿನಿಮಾದ ಈ ಹಾಡನ್ನು ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರೋದು ಈ ಹಾಡಿನ ಹೈಲೈಟ್. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಈ ಹಾಡಿನಲ್ಲಿ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  Rishab Shetty Starrer Kantara Movie First Song Releasing On Independence Day

  ದಸರಾಗೆ 'ಕಾಂತಾರ' ರಿಲೀಸ್

  'ಕಾಂತಾರ' ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಕ್ರೇಜ್ ಹೆಚ್ಚಿಸಿದೆ. ರಿಷಬ್ ಶೆಟ್ಟಿಯನ್ನು ವಿಭಿನ್ನ ಗೆಟಪ್‌ನಲ್ಲಿ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ. ಹೀಗಾಗಿ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಜೊತೆಗೆ ದಸರಾ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರೋದ್ರಿಂದ 'ಕಾಂತಾರ' ಸ್ಯಾಂಡಲ್‌ವುಡ್‌ನ ಮುಂದಿನ ಬಹುನಿರೀಕ್ಷೆಯ ಸಿನಿಮಾ ಎನ್ನಬಹುದು. ಈ ಸಿನಿಮಾ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

  ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ 'ಕಾಂತಾರ' ಸಿನಿಮಾಗೂ ಮುನ್ನವೇ 'ರಾಘವೇಂದ್ರ ಸ್ಟೋರ್ಸ್' ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಂತೋಷ್ ಆನಂದ್‌ರಾಮ್ ಸಿನಿಮಾ ಪೋಸ್ಟ್ ಪೋನ್ ಆಗಿದ್ದು, ಅದಕ್ಕೂ ಮುನ್ನ 'ಕಾಂತಾರ' ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಿದೆ.

  English summary
  Rishab Shetty Starrer Kantara Movie First Song Releasing On Independence Day, Know More.
  Saturday, August 13, 2022, 23:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X