For Quick Alerts
  ALLOW NOTIFICATIONS  
  For Daily Alerts

  ರಜನಿ ಜೊತೆ ರಿಷಬ್ 1 ಗಂಟೆ ಸಂಭಾಷಣೆ: 'ಕಾಂತಾರ' ಬಿಟ್ಟು 'ಬೆಲ್‌ ಬಾಟಂ' ಕಥೆ ಬಂದಿದ್ಯಾಕೆ?

  |

  'ಕಾಂತಾರ' ರಿಲೀಸ್ ಆಗಿ 50 ದಿನಗಳು ಸಮೀಪಿಸುತ್ತಿದೆ. ಆದರೂ, ಬಾಕ್ಸಾಪೀಸ್‌ನಲ್ಲಿ 'ಕಾಂತಾರ' ಜಗ್ಗುತ್ತಿಲ್ಲ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಇದು ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಸರ್ಪ್ರೈಸ್.

  'ಕಾಂತಾರ' ಅಚಾನಕ್ ಆಗಿದ್ದ ಸಿನಿಮಾವಲ್ಲ. ಈ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಮೆಚ್ಚಿಕೊಂಡಾಡಿದ್ದಾರೆ. ಕೊನೆಯ 15 ನಿಮಿಷದ ಕ್ಲೈಮ್ಯಾಕ್ಸ್ ಸೀನ್ ನೋಡಿ ಮಂತ್ರಮುಗ್ಧರಾಗಿದ್ದಾರೆ. ಸ್ವತ: ಸೂಪರ್‌ ಸ್ಟಾರ್ ರಜನಿಕಾಂತ್ 'ಕಾಂತಾರ' ನೋಡಿ ಥ್ರಿಲ್ ಆಗಿದ್ದಾರೆ.

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  ಕೆಲವು ದಿನಗಳ ಹಿಂದಷ್ಟೇ 'ಕಾಂತಾರ' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಆ ಬಳಿಕ ರಿಷಬ್ ಶೆಟ್ಟಿ ಚೆನ್ನೈನಲ್ಲಿರುವ ರಜನಿಕಾಂತ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಸುಮಾರು ಗಂಟೆಗಳ ಕಾಲ ಇಬ್ಬರ ನಡುವೆ ಸಂಭಾವಣೆ ನಡೆದಿದೆ. ಈ ವೇಳೆ ರಜನಿಕಾಂತ್ ಏನೇನು ಮಾತಾಡಿದ್ರು? ಈ ವೇಳೆ ರಿಷಬ್ ಶೆಟ್ಟಿ 'ಬೆಲ್ ಬಾಟಂ' ಕಥೆ ಹೇಳಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ರಜನಿ-ರಿಷಬ್ ಶೆಟ್ಟಿ ಒಂದು ಗಂಟೆ ಸಂಭಾಷಣೆ!

  ರಜನಿ-ರಿಷಬ್ ಶೆಟ್ಟಿ ಒಂದು ಗಂಟೆ ಸಂಭಾಷಣೆ!

  ಸೂಪರ್‌ಸ್ಟಾರ್ ರಜನಿಕಾಂತ್ ಹಾಗೆಲ್ಲಾ ಎಲ್ಲಾ ಸಿನಿಮಾಗಳನ್ನು ಹೊಗಳುವುದಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೂ ಇಲ್ಲ. ಆದರೆ, ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾವನ್ನು ಹಾಡಿ ಹೊಗಳಿ ಟ್ವೀಟ್ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಚೆನ್ನೈನ ರಜನಿಕಾಂತ್ ನಿವಾಸದಲ್ಲಿ ಅವರನ್ನು ರಿಷಬ್ ಶೆಟ್ಟಿ ಭೇಟಿಯಾಗಿದ್ದರು. ಈ ವೇಳೆ ಸುಮಾರು ಒಂದು ಗಂಟೆಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆ ವೇಳೆ ಏನೇನು ಮಾತುಕತೆ ನಡೀತು ಅನ್ನೋದನ್ನು ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

  ರಜನಿ ಜೊತೆ ನಡೆದ ಮಾತುಕತೆ ಏನು?

  ರಜನಿ ಜೊತೆ ನಡೆದ ಮಾತುಕತೆ ಏನು?

  ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ರಿಷಬ್ ಶೆಟ್ಟಿ ನಡುವೆ ಏನೇನು ಮಾತುಕತೆ ನಡೆದಿತ್ತು? ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೇ ವಿಚಾರವಾಗಿ ರಿಷಬ್ ಶೆಟ್ಟಿ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಒಂದು ಗಂಟೆಗಳಲ್ಲಿ ನಡೆದ ಮಾತುಕತೆಯೇನು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ರಜನಿಕಾಂತ್ ಅವರನ್ನು ಅವರ ಮನೆಗೆ ಹೋಗಿ ಭೇಟಿ ಮಾಡಿದೆ. ಒಂದು ಗಂಟೆಗಳ ಕಾಲ ನಮ್ಮಿಬ್ಬರ ನಡುವೆ ಮಾತುಕತೆ ನಡೆದಿತ್ತು. ಅದು ನನಗೆ ತುಂಬಾ ಅದ್ಭುತ ಘಳಿಗೆ ಎನಿಸಿತ್ತು. ಸಿನಿಮಾದ ಪ್ರತಿಯೊಂದು ಸೀನ್ ಬಗ್ಗೆನೂ ಮಾತಾಡಿದ್ದರು. ಹೇಗೆ ಸೀನ್‌ಗಳನ್ನು ಮಾಡಿದೆ ಅನ್ನೋದನ್ನು ಕೇಳಿದ್ರು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಆಧ್ಯಾತ್ಮ ಜರ್ನಿ ಬಗ್ಗೆನೂ ಹೇಳುತ್ತಿದ್ದರು." ಎಂದು ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

  ರಜನಿಗೆ 'ಬೆಲ್‌ಬಾಟಂ' ಕಥೆ ಹೇಳಿದ್ದೇಕೆ?

  ರಜನಿಗೆ 'ಬೆಲ್‌ಬಾಟಂ' ಕಥೆ ಹೇಳಿದ್ದೇಕೆ?

  ರಜನಿ ಹಾಗೂ ರಿಷಬ್ ಶೆಟ್ಟಿ ನಡುವೆ 'ಕಾಂತಾರ' ಸಿನಿಮಾದ ಮಾತುಕತೆ ನಡೆಯುತ್ತಿತ್ತು. ಈ ವೇಳೆ ರಿಷಬ್ ಶೆಟ್ಟಿ 'ಬೆಲ್‌ ಬಾಟಂ' ಸಿನಿಮಾದ ವಿಷಯ ತೆಗೆದಿದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. " ನಾನು ಚಿಕ್ಕವನಿಂದಲೂ ಅವರ ಅತೀ ದೊಡ್ಡ ಅಭಿಮಾನಿ. ನಾನು ಲೀಡ್ ರೋಲ್‌ನಲ್ಲಿ ನಟಿಸಿದ ಮೊದಲ ಸಿನಿಮಾ ಬೆಲ್‌ ಬಾಟಂ. ಅದರಲ್ಲಿ ನಾನು ಅವರನ್ನು ಅನುಕರಣೆ ಮಾಡಲು ಟ್ರೈ ಮಾಡಿದ್ದೆ. ಆ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ರಜನಿಕಾಂತ್ ಸ್ಟೈಲ್‌ನಲ್ಲಿ ಬೀಡಿಯನ್ನು ಬಾಯಿಗೆ ಇಟ್ಟಿಕೊಂಡಿದ್ದೆ. ಅದನ್ನೂ ಸರ್‌ಗೆ ಹೇಳಿದ್ದೆ. ಅವರು ತಮ್ಮ ಟಿಪಿಕಲ್ ಸ್ಟೈಲ್‌ನಲ್ಲಿ ನಗಾಡಿದ್ದರು." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

  'ಕಾಂತಾರ' ಮುಂದೆ ಬಾಲಿವುಡ್ ಸಿನಿಮಾ ಏನಿಲ್ಲ!

  'ಕಾಂತಾರ' ಮುಂದೆ ಬಾಲಿವುಡ್ ಸಿನಿಮಾ ಏನಿಲ್ಲ!

  'ಕಾಂತಾರ' ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮಾಡ್ತಿರೋದಕ್ಕೆ ಸಿನಿಮಾ ಮಂದಿ ಶಾಕ್ ಆಗಿದ್ದಾರೆ. ನಿನ್ನೆ (ನವೆಂಬರ್ 07) ಭಾರತ ಹಾಗೂ ಜಿಂಬಾಬ್ವೆ ನಡುವಿನ ಕ್ರಿಕೆಟ್ ಮ್ಯಾಚ್ ಇದ್ದರೂ, 'ಕಾಂತಾರ' ಕಲೆಕ್ಷನ್‌ಗೆ ಏನೂ ಎಫೆಕ್ಟ್ ಆಗಿಲ್ಲ. ಇದೇ ದಿನ 4.50 ಕೋಟಿ ರೂಪಾಯಿ ಕಲೆ ಹಾಕಿದೆ. ಸದ್ಯ 62 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿರೋ ಈ ಸಿನಿಮಾ ಬಾಕ್ಸಾಫೀಸ್ 100 ಕೋಟಿ ರೂಪಾಯಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

  ರಿಷಬ್ - ರಜನಿಕಾಂತ್ ಭೇಟಿಯಾದಾಗ 'ಕಾಂತಾರ' ಬಗ್ಗೆ ಚರ್ಚಿಸಿದ್ದು ಕನ್ನಡದಲ್ಲಾ, ತಮಿಳಿನಲ್ಲಾ?ರಿಷಬ್ - ರಜನಿಕಾಂತ್ ಭೇಟಿಯಾದಾಗ 'ಕಾಂತಾರ' ಬಗ್ಗೆ ಚರ್ಚಿಸಿದ್ದು ಕನ್ನಡದಲ್ಲಾ, ತಮಿಳಿನಲ್ಲಾ?

  English summary
  Rishab Shetty Told Rajinikanth That He Copied His Style In Bell Bottom Movie In Chennai, Know More.
  Monday, November 7, 2022, 17:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X