For Quick Alerts
  ALLOW NOTIFICATIONS  
  For Daily Alerts

  'ಇಡೀ ಕರ್ನಾಟಕಕ್ಕೆ ಕರ್ನಾಟಕದ ಮಗ ಅನ್ನೋ ಫೀಲಿಂಗ್.. ಅಪ್ಪುಗೆ ಮಾತ್ರ ಸಿಗೋದು'-ಯಶ್

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ನಡುವಿನ ಬಾಂಧವ್ಯ ನಿನ್ನೆ ಮೊನ್ನೆಯದಲ್ಲ. ಅಪ್ಪುಗೆ ಯಶ್ ಮೇಲೆ ಅಪಾರವಾದ ಪ್ರೀತಿ ಇತ್ತು. ಯಶ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದಾಗಲೂ ಪುನೀತ್ ಬೆಂಬಲಕ್ಕೆ ನಿಂತಿದ್ದರು. ಯಶ್ ನಡೆಯನ್ನು ಪ್ರೇರಣೆ ನೀಡಿದ್ದರು.

  ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಯಶ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಸ್ನೇಹ ಗಟ್ಟಿಯಾಗಿತ್ತು. ಅಪ್ಪು ಅಗಲುವ ಕೆಲವೇ ದಿನಗಳ ಹಿಂದಷ್ಟೇ ಯಶ್, ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಮೂವರೂ ಒಟ್ಟಿಗೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಅದೇ ಕೊನೆ. ಇಂದು (ಅಕ್ಟೋಬರ್ 21) 'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ನಲ್ಲೂ ಯಶ್ ಅಪ್ಪು ಬಗ್ಗೆ ಅದೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

  ವೇದಿಕೆ ಮೇಲೆ ಅಂದು ಡ್ಯಾನ್ಸ್ ಮಾಡಿದ್ವಿ

  ವೇದಿಕೆ ಮೇಲೆ ಅಂದು ಡ್ಯಾನ್ಸ್ ಮಾಡಿದ್ವಿ

  "ಒಂದು ವರ್ಷದ ಕೆಳಗೆ. ಹತ್‌ಹತ್ರ ಇದೇ ದಿನ ಇರಬಹುದು. ನಾನು ಅಪ್ಪು ಸರ್ ಶಿವಣ್ಣ. ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದೆವು. ಅದಿನ್ನೂ ನನ್ನ ತಲೆಯಲ್ಲಿ ಕಟ್ಟುತ್ತಿದ್ದಂತೆ ಇದೆ. ಎಷ್ಟೋ ದಿನ ಆಗಿತ್ತು ನಾನು ಅವರು ಮಾತಾಡಿ, ಅವತ್ತು ಸಿಕ್ಕಿದ್ವಿ. ತುಂಬಾ ಮಾತಾಡಿದ್ವಿ. ಅವತ್ತು ಅವರು ಮಾತಾಡುತ್ತಿದ್ದ ವಿಷಯಗಳು. ಅವತ್ತು ಅವರಲ್ಲಿದ್ದ ಹುಮ್ಮಸ್ಸು ಉತ್ಸಾಹ. ಅವರನ್ನು ನೋಡಿದಾಗಲೆಲ್ಲಾ ಒಂದು ಹುಮ್ಮಸ್ಸು ಬರುತ್ತೆ.

  ಬ್ಯಾಕ್ ಫ್ಲಿಪ್‌ ಹೊಡ್ಕೊಂಡು ಅಪ್ಪು ಎಂಟ್ರಿ

  ಬ್ಯಾಕ್ ಫ್ಲಿಪ್‌ ಹೊಡ್ಕೊಂಡು ಅಪ್ಪು ಎಂಟ್ರಿ

  "2002ರಲ್ಲಿ ಬ್ಯಾಕ್ ಫ್ಲಿಪ್‌ ಹೊಡ್ಕೊಂಡು ಎಂಟ್ರಾಗಿ, ಅವರಿವರನ್ನು ಗೆದ್ದ ಮಾತ್ರಕ್ಕೆ ನೀನು ಅಜೇಯನಲ್ಲ. ತಾಕತ್ತಿದ್ದರೆ ನನ್ನ ಮೇಲೆ ಗೆಲ್ಲಲೇ ಅಂತ ಎಂಟ್ರಾದವರು ಅವರು. ಅವರು ಮಾಡುತ್ತಿದ್ದ ಫೈಟು. ಅವರು ಮಾಡುತ್ತಿದ್ದ ಡ್ಯಾನ್ಸ್. ಅದನ್ನು ನೋಡಿ ಪ್ರೇರಣೆ ಹೊಂದಿ, ಈತರ ಮಾಡಬೇಕು ಅಂತ ಎಷ್ಟೋ ಜನ ಈ ಫೀಲ್ಡ್‌ಗೆ ಬಂದಿದ್ದಾರೆ."

  ಏನು ಮಾತಾಡಬೇಕು ಅಂತ ಗೊತ್ತಾಗಿಲ್ಲ

  ಏನು ಮಾತಾಡಬೇಕು ಅಂತ ಗೊತ್ತಾಗಿಲ್ಲ

  " ಗೊತ್ತಿಲ್ಲ ಅವರ ಬಗ್ಗೆ ಮಾತಾಡಬೇಕಾದರೂ ಅಷ್ಟೇ. ಲಾಸ್ಟ್ ಟೈಮ್ ಕೂಡ ಅಷ್ಟೇ. ಬಂದೆ ಒಂದು ಕಾರ್ಯಕ್ರಮದಲ್ಲಿ. ಗೊತ್ತಾಗಿಲ್ಲ ನನಗೆ ಏನು ಮಾತಾಡಬೇಕು ಅಂತ. ಲೈಫ್‌ನಲ್ಲಿ ಕೆಲವರಿಗೆ ಒಂದು ಅನುಭವಗಳು ಆಗುತ್ತೆ ಅಂತಾರಲ್ಲ, ನನ್ನ ಜೀವನದಲ್ಲಿ ಅಪ್ಪು ಸರ್ ಘಟನೆ ಇದೆಯಲ್ಲ ಅದು ದೊಡ್ಡ ಪರಿಣಾಮ ಬೀರಿದೆ. ಜೀವನ ಅಂದರೆ ಏನು ಅನ್ನೋ ಪ್ರಶ್ನೆ ಹುಟ್ಟಿಬಿಡ್ತು ನಮಗೆ. ಒಂದು ಕಡೆ ಓಡುತ್ತಿರುತ್ತೇವೆ ಏನೋ ಸಾಧಿಸಬೇಕು ಅಂತ. ಏನೋ ಮಾಡಬೇಕು. ಈ ಗುರಿ, ಈ ಸಾಧನೆ, ಅದರ ಮೇಲೆ ಬದುಕು. ಬದುಕಿಗೆ ಹೋಪ್ ಇಲ್ಲಾ ಅಂದರೆ, ಬದುಕೋಕೆ ಆಗಲ್ಲ ಅಂತಾರೆ. ಏನ್ ಹೋಪ್ ಇಟ್ಕೊಂಡು ಬದುಕು ಎರಡು ಸೆಕೆಂಡ್‌ನಲ್ಲಿ ಇಲ್ಲಾ ಅಂದಾಗ, ಅದನ್ನು ಹೇಗೆ ಅರಗಿಸಿಕೊಳ್ಳಬೇಕು ಅನ್ನೋದು ಗೊತ್ತಾಗಿಲ್ಲ."

  ಅಪ್ಪು ಸರ್ ಕರ್ನಾಟಕದ ಮಗ

  ಅಪ್ಪು ಸರ್ ಕರ್ನಾಟಕದ ಮಗ

  " ಅಭಿಮಾನಿಗಳು ತೋರಿಸುವ ಪ್ರೀತಿ. ನೀವು ಸಲ್ಲಿಸುತ್ತಿರುವ ಗೌರವ. ಅಂತಹವರಿಗೆ ಜೀವಕೊಡುತ್ತೆ. ಅಣ್ಣಾವ್ರು ಪೀಕ್‌ನಲ್ಲಿ ಇರುವಾಗ ಹುಟ್ಟಿದ್ದಾರೆ. ಶಿವಣ್ಣ ಇರಬಹುದು. ಅವರ ಅಕ್ಕಂದಿರ ಜೊತೆ ಪುಟ್ಟ ಹುಡುಗನಾಗಿ ಹುಟ್ಟಿದ್ದಾರೆ. ಅವರಿಗೆ ಎಷ್ಟು ಪ್ರೀತಿ ಸಿಕ್ಕಿರಬಹುದು. ನನ್ನ ತಂದೆ-ತಾಯಿಗೂ ನನ್ನ ಮಗ ಅನ್ನೋ ಫೀಲಿಂಗ್. ಅದೇ ರೀತಿ ಇಡೀ ಕರ್ನಾಟಕಕ್ಕೆ ಕರ್ನಾಟಕದ ಮಗ ಅನ್ನೋ ಫೀಲಿಂಗ್. ಅಪ್ಪು ಅವರಿಗೆ ಮಾತ್ರ ಸಿಗೋದು. "

  English summary
  Rocking Star Yash About Puneeth Rajkumar In Gandhada Gudi Pre-Release Event,
  Friday, October 21, 2022, 23:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X