For Quick Alerts
  ALLOW NOTIFICATIONS  
  For Daily Alerts

  ಗಂಗರಾಜು ಕೈಗೆ ಲವ್ಲಿ ಸ್ಟಾರ್ ಪ್ರೇಮ 'ಚಂದ್ರ'

  By Rajendra
  |

  ರೂಪಾ ಅಯ್ಯರ್ ನಿರ್ದೇಶನದ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಶ್ರೀಯಾ ಸರನ್ ಮುಖ್ಯಭೂಮಿಕೆಯಲ್ಲಿರುವ ಚಂದ್ರ ಚಿತ್ರ ಇದೇ ಜೂನ್ 27ರಂದು ತೆರೆಗೆ ಅಪ್ಪಳಿಸುತ್ತಿದೆ. ಕರ್ನಾಟಕದ ವಿತರಣೆ ಹಕ್ಕು ಎಚ್ ಡಿ ಗಂಗರಾಜು ಅವರ ಪಾಲಾಗಿದೆ.

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ ಚಿತ್ರಗಳ ವಿತರಣೆ ಹಕ್ಕುಗಳನ್ನು ಪಡೆದು ಹೆಸರಾದ ಗಂಗಾರಾಜು ಈ ಬಾರಿ 'ಚಂದ್ರ' ಚಿತ್ರದ ವಿತರಕರಾಗಿರುವುದು ವಿಶೇಷ. ಈ ಚಿತ್ರವನ್ನು ಎಂಬತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಗಂಗರಾಜು ತಿಳಿಸಿದ್ದಾರೆ.

  ಮಂಡ್ಯ ಮೂಲದ ಕನ್ನಡ ಕುವರಿ ರೂಪಾ ಅಯ್ಯರ್ ಅವರು ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಈ ಚಿತ್ರದ ವಿತರಣೆ ಹಕ್ಕುಗಳನ್ನು ತಾನು ಪಡೆದಿರುವುದಾಗಿ ಗಂಗರಾಜು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  ಇತ್ತೀಚೆಗೆ 'ಚಂದ್ರ' ಚಿತ್ರದ ಪತ್ರಿಕಾಗೋಷ್ಠಿಗೆ ಪ್ರೇಮ್ ಬರದೆ ಇದ್ದ ಕಾರಣ ಚಿತ್ರ ವಿವಾದ ಗುರಿಯಾಗಿತ್ತು. ರೂಪಾ ಹಾಗೂ ಪ್ರೇಮ್ ನಡುವಿನ ಭಿನ್ನಾಭಿಪ್ರಾಯ ಪತ್ರಿಕಾಗೋಷ್ಠಿ ದಿನ ಸ್ಫೋಟಗೊಂಡಿತ್ತು. ಅದರ ಸಂಪೂರ್ಣ ವರದಿ ಇಲ್ಲಿದೆ ಓದಿ.

  ಈ ಚಿತ್ರದಲ್ಲಿ ಶ್ರೀಯಾ ಸರನ್ ಅವರು ರಾಜಕುಮಾರಿ ಚಂದ್ರಾವತಿಯಾಗಿ ಹಾಗೂ ಚಂದ್ರಹಾಸನಾಗಿ ಪ್ರೇಮ್ ಅವರು ಸಾಮಾನ್ಯ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ರಾಯಲ್ ಲವ್ ಸ್ಟೋರಿಯೇ ಚಿತ್ರದ ಕಥಾವಸ್ತು. (ಒನ್ಇಂಡಿಯಾ ಕನ್ನಡ)

  English summary
  Lovely Star Prem and Shriya Saran lead Kannada film 'Chandra', directed by Roopa Iyer distribution rights goes to HD Gangaraju. He is releasing the movie over 80 theatres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X