»   » ರೋರಿಂಗ್ ಸ್ಟಾರ್ 'ಮಫ್ತಿ' ಚಿತ್ರೀಕರಣ ಮಂಗಳೂರಿನ ಬಂದರಿನಲ್ಲಿ..

ರೋರಿಂಗ್ ಸ್ಟಾರ್ 'ಮಫ್ತಿ' ಚಿತ್ರೀಕರಣ ಮಂಗಳೂರಿನ ಬಂದರಿನಲ್ಲಿ..

Posted By:
Subscribe to Filmibeat Kannada

'ಉಗ್ರಂ', 'ರಥಾವರ' ಚಿತ್ರಗಳ ಸೂಪರ್ ಸಕ್ಸಸ್ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ 'ಮಫ್ತಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದೇ ಮೊದಲ ಬಾರಿಗೆ ಕರುನಾಡು ಚಕ್ರವರ್ತಿ ಶಿವರಾಜ್‌ ಕುಮಾರ್, ಶ್ರೀಮುರುಳಿ ಅವರ ಜೊತೆಯಲ್ಲಿ ಸ್ಕ್ರೀನ್‌ ಶೇರ್ ಮಾಡುತ್ತಿರುವ ಚಿತ್ರದ ಶೂಟಿಂಗ್ ಬರದಿಂದ ಸಾಗಿದೆ.

ಅಂದಹಾಗೆ ಶ್ರೀಮುರುಳಿ ಅಭಿನಯದ 'ಮಫ್ತಿ ಚಿತ್ರತಂಡ ಮಂಗಳೂರಿನ ಬಂದರಿನಲ್ಲಿ ಬೀಡುಬಿಟ್ಟಿದ್ದು, ಚಿತ್ರೀಕರಣದ ಬಗೆಗಿನ ವಿಶೇಷ ಮಾಹಿತಿ ಇಲ್ಲಿದೆ ನೋಡಿ...[ಮತ್ತೊಂದು 'ಉಗ್ರಂ', 'ರಥಾವರ'ದ ಸೂಚನೆ ಕೊಟ್ಟ ಶ್ರೀಮುರುಳಿ 'ಮಫ್ತಿ'!]

ಮಂಗಳೂರಿನಲ್ಲಿ ಮಫ್ತಿ ಚಿತ್ರೀಕರಣ

ಸೆಂಚರಿ ಸ್ಟಾರ್- ರೋರಿಂಗ್ ಸ್ಟಾರ್ ಕಾಂಬಿನೇಷನ್‌ ನಲ್ಲಿ ರೆಡಿ ಆಗುತ್ತಿರುವ 'ಮಫ್ತಿ' ಚಿತ್ರತಂಡ ಸದ್ಯದಲ್ಲಿ ಮಂಗಳೂರಿನಲ್ಲಿ ಚಿತ್ರ ಶೂಟಿಂಗ್ ಮಾಡುತ್ತಿದೆ.[ಶ್ರೀಮುರಳಿ ಹುಟ್ಟುಹಬ್ಬಕ್ಕೆ 'ಮಫ್ತಿ' ಟೀಸರ್ ಉಡುಗೊರೆ]

ಮಂಗಳೂರಿನ ಬಗ್ಗೆ ಶ್ರೀಮುರಳಿ ಪ್ರಶಂಸೆ

ಕಳೆದ ಒಂದು ವಾರದಿಂದ ಮಂಗಳೂರಿನ ಬಂದರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ಶ್ರೀಮುರಳಿ 'ಇದುವರೆಗೂ ನಾನು ಚಿತ್ರೀಕರಣಕ್ಕಾಗಿ ಪಾಲ್ಗೊಂಡ ಅದ್ಭುತ ಸ್ಥಳಗಳಲ್ಲಿ ಮಂಗಳೂರು ಒಂದು. ಮಂಗಳೂರಿನಲ್ಲಿ ಪ್ರತಿ ಕ್ಷಣವನ್ನು ಸಂತಸದಿಂದ ಕಳೆಯುತ್ತಿದ್ದೇನೆ. ಮಫ್ತಿ ಚಿತ್ರತಂಡ ಅದ್ಭುತ' ಎಂದು ಟ್ವೀಟ್ ಮಾಡಿದ್ದಾರೆ.

ಹಾಡಿನ ಮೂಲಕ ಶ್ರೀಮುರುಳಿ ಪಾತ್ರ ಪರಿಚಯ

'ಮಫ್ತಿ' ಚಿತ್ರದಲ್ಲಿ ಶ್ರೀಮುರಳಿ ಪಾತ್ರವನ್ನು ಹಾಡಿನ ಮೂಲಕ ಪರಿಚಯಿಸಲಾಗುತ್ತದೆಯಂತೆ. ಈ ಹಾಡಿನ ಶೂಟಿಂಗ್ ಅನ್ನು ಮಂಗಳೂರಿನ ಬಂದರಿನಲ್ಲಿರುವ ದೊಡ್ಡ ಹಡಗಿನ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗುತ್ತಿದೆ.

ಮಫ್ತಿ ಲುಕ್‌ ನಲ್ಲಿ ಶ್ರೀಮುರಳಿ

ಮಫ್ತಿ ಚಿತ್ರ ಶೂಟಿಂಗ್ ವೇಳೆಯಲ್ಲಿನ ಶ್ರೀಮುರಳಿ ಸ್ಟಿಲ್‌ ಫೋಟೋ. ಈ ಫೋಟೋ ಜೊತೆಗೆ ತಾವು ಮಂಗಳೂರು ಬಂದರನ್ನು ಪತ್ರಿ ಕ್ಷಣವು ಇಷ್ಟಪಡುವುದಾಗಿ ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ.

ಶ್ರೀಮುರಳಿ ಪರಿಚಯಕ್ಕೆ ನಾಲ್ಕು ರೀತಿಯ ಹಿನ್ನೆಲೆ ದೃಶ್ಯಗಳು

ಮಫ್ತಿ ಚಿತ್ರದಲ್ಲಿ ಶ್ರೀಮುರಳಿ ಪರಿಚಯಕ್ಕೆ ನಾಲ್ಕು ರೀತಿಯ ಹಿನ್ನೆಲೆ ದೃಶ್ಯಗಳು ಅವಶ್ಯಕವಿದ್ದು, ಒಂದು ಹಿನ್ನೆಲೆಗೆ ಬಂದರನ್ನು ಆಯ್ಕೆ ಮಾಡಿಕೊಂಡಿದೆ. ಬಂದರಿನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಬಂದರಿನ ಅಧಿಕಾರಿಗಳು ಸಹಕರಿಸಿದರು ಎಂದು ಶ್ರೀಮುರಳಿ ಹೇಳಿದ್ದಾರೆ.

English summary
Sriimurali-starrer Mufti is being shot at Mangaluru port for the last one week and the actor wasted no time in appreciating the beauty of the coastal belt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada