For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡೋದು ಕೆಆರ್‌ಜಿ ಸ್ಟುಡಿಯೋ!

  |

  ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಕನ್ನಡ ಸಿನಿಮಾದಲ್ಲಿ ಯಾಕೆ ನಟಿಸಬಾರದು? ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಕನ್ನಡಿಗರ ಬಹುದಿನದ ಈ ಆಸೆಯನ್ನು ಸಾಯಿ ಪಲ್ಲವಿ ಈಡೇರಿಸಲು ಮುಂದಾಗಿದ್ದಾರೆ.

  ಕನ್ನಡ ಸಿನಿಮಾದಲ್ಲಿ ನೇರವಾಗಿ ನಟಿಸದೇ ಹೋದರೂ ಕನ್ನಡಕ್ಕೆ ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಹೌದು, ಸಾಯಿ ಪಲ್ಲವಿಯ ತಮಿಳು ಸಿನಿಮಾ 'ಗಾರ್ಗಿ' ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕೆಲವು ದಿನಗಳ ಹಿಂದೆ ಸಾಯಿ ಪಲ್ಲವಿನೇ ಡಬ್ ಮಾಡಿ ಹೋಗಿದ್ದಾರೆ.

  'ಗಾರ್ಗಿ' ಸಿನಿಮಾವನ್ನು ಕರ್ನಾಟಕದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದು ರಿಲೀಸ್ ಮಾಡಲು ಮುಂದಾಗಿದೆ. ಅದುವೇ ಕೆಆರ್‌ಜಿ ಸ್ಟುಡಿಯೋ. ಸಾಯಿ ಪಲ್ಲವಿಯನ್ನು ಕನ್ನಡ ಸಿನಿಮಾ ನೋಡಬೇಕು ಅನ್ನುವ ಸಿನಿಪ್ರಿಯರ ಆಸೆ ಈಡೇರುತ್ತಿದೆ.

  ಕೆಆರ್‌ಜಿ ಸ್ಟುಡಿಯೋದಿಂದ 'ಗಾರ್ಗಿ' ಸಿನಿಮಾ

  'ಗಾರ್ಗಿ' ಸಿನಿಮಾದ ಝಲಕ್ ಈಗಾಗಲೇ ಗಮನ ಸೆಳೆದಿದೆ. ಸಾಯಿ ಪಲ್ಲವಿಯನ್ನು 'ಗಾರ್ಗಿ' ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಲೇ ಇದ್ದಾರೆ. ಇದಕ್ಕೆ ಸರಿಯಾಗಿ ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. " ಈ ಸಿನಿಮಾ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಖುಷಿಯಾಗುತ್ತಿದೆ." ಎಂದು ಕೆಆರ್‌ಜಿ ಸ್ಟುಡಿಯೋ ಟ್ವೀಟ್ ಮಾಡಿದೆ.

  'ಗಾರ್ಗಿ' ಜುಲೈ 1ಕ್ಕೆ ರಿಲೀಸ್

  'ಗಾರ್ಗಿ' ಜುಲೈ 1ಕ್ಕೆ ರಿಲೀಸ್

  ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಗಾರ್ಗಿ' ಸಿನಿಮಾ ಇದೇ ಜುಲೈ 15ಕ್ಕೆ ಬಿಡುಗಡೆಯಾಗುತ್ತಿದೆ. ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರ್ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಲಿದೆ. ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾಗೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು ಸಾಥ್ ಕೊಟ್ಟಿದ್ದಾರೆ.

  ಸಾಯಿ ಪಲ್ಲವಿ ಕನ್ನಡದಲ್ಲಿ ಪ್ರಚಾರ ಮಾಡ್ತಾರಾ?

  ಸಾಯಿ ಪಲ್ಲವಿ ಕನ್ನಡದಲ್ಲಿ ಪ್ರಚಾರ ಮಾಡ್ತಾರಾ?

  'ಗಾರ್ಗಿ' ಸಿನಿಮಾಗಾಗಿ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಗೌತಮ್ ರಾಮಚಂದ್ರನ್ ನಿರ್ದೇಶಿಸಿದ್ದು, ಕನ್ನಡದಲ್ಲಿ ಸಾಯಿ ಪಲ್ಲವಿ ಆಸಕ್ತಿವಹಿಸಿ ಡಬ್ ಮಾಡಿದ್ದರು. ಈ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಹೀಗಿರುವಾಗ ಕನ್ನಡದಲ್ಲಿ ಪ್ರಚಾರ ಮಾಡುವುದಕ್ಕೆ ಸಾಯಿ ಪಲ್ಲವಿ ಬರುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

  ಸಾಯಿ ಪಲ್ಲವಿ ಬಗ್ಗೆ ರೂಮರ್

  ಸಾಯಿ ಪಲ್ಲವಿ ಬಗ್ಗೆ ರೂಮರ್

  ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ಸಿನಿಮಾ ರಂಗದಿಂದಲೇ ಉಳಿಯುತ್ತಾರೆ ಎಂದು ಗುಲ್ಲೆದ್ದಿತ್ತು. 'ಗಾರ್ಗಿ' ಸಿನಿಮಾದ ಫಸ್ಟ್ ಲುಕ್ ರಿಲೀಸ್‌ಗೂ ಮುನ್ನ ಸಾಯಿ ಪಲ್ಲವಿ ಸಿನಿಮಾ ಗುಡ್‌ ಬೈ ಹೇಳುತ್ತಾರೆ ಎಂದೇ ಸದ್ದಿ ಹಬ್ಬಿತ್ತು. ಕೊನೆಗೂ ಆ ಎಲ್ಲಾ ಸುದ್ದಿಗಳಿಗೆ ಸಾಯಿ ಪಲ್ಲವಿ 'ಗಾರ್ಗಿ' ಮೂಲಕ ಉತ್ತರ ನೀಡಿದ್ದರು.

  English summary
  Sai Pallavi Starrer Gargi Movie Will Be Releasing KRG Studio In Karnataka, Know More.
  Sunday, July 3, 2022, 19:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X