For Quick Alerts
  ALLOW NOTIFICATIONS  
  For Daily Alerts

  ಸಮಂತಾ ಸ್ಯಾಂಡಲ್‌ವುಡ್ ಎಂಟ್ರಿಗೆ ಸಾಥ್ ಕೊಡಲು ಸಜ್ಜಾದ ರಕ್ಷಿತ್ ಶೆಟ್ಟಿ!

  |

  ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಿದ್ದ ಸಮಂತಾ ಯಾಕೆ ಸೈಲೆಂಟ್ ಆಗಿದ್ದಾರೆ ಅನ್ನೋದು ಗೊತ್ತಿಲ್ಲ. ಸಮಂತಾ ಸುಳಿವು ಇಲ್ಲದೆ ಹೋದರೂ ಅವರ ಸಿನಿಮಾ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ವಿಚ್ಛೇದನದ ಬಳಿಕ ಸಮಂತಾ ದೊಡ್ಡ ಪ್ರಾಜೆಕ್ಟ್‌ಗಳಿಗೆ ಸೈ ಎಂದಿದ್ದರು. ಅದರಲ್ಲೊಂದು ಪ್ಯಾನ್ ಇಂಡಿಯಾ ಸಿನಿಮಾ. ಅದುವೇ 'ಯಶೋದಾ'. ಸದ್ಯ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಆದರೂ ಸಮಂತಾ ಮಾತ್ರ ಸದ್ದು ಮಾಡುತ್ತಿಲ್ಲ. ಈ ಆತಂಕದ ನಡುವೆಯೇ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.

  ಸಮಂತಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಯಶೋದಾ' ರಿಲೀಸ್‌ಗೆ ರೆಡಿ!ಸಮಂತಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಯಶೋದಾ' ರಿಲೀಸ್‌ಗೆ ರೆಡಿ!

  ಸಮಂತಾಗೆ ರಕ್ಷಿತ್ ಶೆಟ್ಟಿ ಸಾಥ್

  ಸಮಂತಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಯಶೋದಾ'. ಒಂದು ತಿಂಗಳಿನಿಂದ ಈ ಸಿನಿಮಾದ ಪ್ರಚಾರ ನಡೆಯಬೇಕಿತ್ತು. ಆದರೆ, ಈ ಸಿನಿಮಾ ರಿಲೀಸ್‌ಗೆ ಹೆಚ್ಚು ಕಡಿಮೆ 15 ದಿನಗಳು ಬಾಕಿ ಉಳಿದಿವೆ. ಈಗ ಸಿನಿಮಾ ಪ್ರಚಾರವನ್ನು ಆರಂಭಿಸಿದೆ.

  'ಯಶೋದಾ' ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಇದು ಕನ್ನಡದಲ್ಲಿಯೂ ರಿಲೀಸ್‌ ಆಗುತ್ತಿರುವುದರಿಂದ ರಕ್ಷಿತ್ ಶೆಟ್ಟಿಯಿಂದ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿಸಲು ಚಿತ್ರತಂಡ ಮುಂದಾಗಿದೆ.

  2ನೇ ಸಲ ಲವ್ವಲ್ಲಿ ಬಿದ್ರಾ ಸಮಂತಾ ? ಮುಖ ತೋರಿಸದೇ ಚೈತುಗೆ ಟಾಂಗ್ ಕೊಟ್ರಾ? ಪೋಸ್ಟ್ ವೈರಲ್!2ನೇ ಸಲ ಲವ್ವಲ್ಲಿ ಬಿದ್ರಾ ಸಮಂತಾ ? ಮುಖ ತೋರಿಸದೇ ಚೈತುಗೆ ಟಾಂಗ್ ಕೊಟ್ರಾ? ಪೋಸ್ಟ್ ವೈರಲ್!

  ಐದು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್

  ಅಕ್ಟೋಬರ್ 27ರಂದು 'ಯಶೋದಾ' ಸಿನಿಮಾದ ಕನ್ನಡ ಟ್ರೈಲರ್ ಅನ್ನು ರಕ್ಷಿತ್ ಶೆಟ್ಟಿ ರಿಲೀಸ್ ಮಾಡಲಿದ್ದಾರೆ. ಸಂಜೆ 5.36ಕ್ಕೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಹಾಗಂತ ಕೇವಲ ಕನ್ನಡದಲ್ಲಷ್ಟೇ ಅಲ್ಲ. ಐದೂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

  ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ 'ಯಶೋದಾ' ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಬಿಡುಗಡೆಗೆ 15 ದಿನಗಳು ಇರುವಾಗ ಟ್ರೈಲರ್ ರಿಲೀಸ್ ಮಾಡಲಿದ್ದು, ಪ್ರಚಾರ ಆರಂಭ ಮಾಡುತ್ತಿದ್ದಾರೆ.

  "ಹಿಂಸೆ ಕೊಟ್ಟ ಚೈತು.. ಅದಕ್ಕೆ ಡಿವೋರ್ಸ್": ಅತ್ತೆ ಬಳಿ ನೋವು ತೋಡಿಕೊಂಡ ಸಮಂತಾ?

  'ಯಶೋದಾ' ರಿಲೀಸ್ ಯಾವಾಗ?

  ಸಮಂತಾ ಅಭಿನಯದ 'ಯಶೋದಾ' ಮುಂದಿನ ತಿಂಗಳು ನವೆಂಬರ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.

  Samantha Starrer Yashoda Movie Kannada Trailer Launch By Rakshit Shetty

  'ಯಶೋದಾ' ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಸಿನಿಮಾ. ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿದ್ದಾರೆ. ಹರಿ ಹಾಗೂ ಹರೀಶ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ವರಲಕ್ಷ್ಮೀ ಶರತ್‌ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

  English summary
  Samantha Starrer Yashoda Movie Kannada Trailer Launch By Rakshit Shetty, Know More.
  Tuesday, October 25, 2022, 23:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X