For Quick Alerts
  ALLOW NOTIFICATIONS  
  For Daily Alerts

  Kranti: ದರ್ಶನ್ ಸಿನಿಮಾಗೆ ಶುಭಕೋರಿದ ಸೆಲೆಬ್ರೆಟಿಗಳು: "ಇಂದಿನಿಂದ ನಿಮ್ಮ 'ಕ್ರಾಂತಿ' ನಿಮ್ಮ ಹತ್ತಿರ" ಎಂದ ದರ್ಶನ್!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಇಂದು (ಜನವರಿ 26) ರಾಜ್ಯಾದ್ಯಂತ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷೆಯ ಸಿನಿಮಾ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭ ಆಗಿದೆ. ಮೊದಲ ಶೋನಿಂದಲೇ ದರ್ಶನ್ ಅಭಿಮಾನಿಗಳು ಕ್ಯೂ ನಿಂತು ಸಿನಿಮಾ ನೋಡುತ್ತಿದ್ದಾರೆ.

  ಥಿಯೇಟರ್ ಮುಂದೆ ಅಭಿಮಾನಿಗಳ 'ಕ್ರಾಂತಿ' ಆರಂಭ ಆಗಿದೆ. ಬಾಕ್ಸಾಫೀಸ್‌ನಲ್ಲಿ ದರ್ಶನ್ ಸಿನಿಮಾ ಹೇಗೆ 'ಕ್ರಾಂತಿ' ಮಾಡುತ್ತೆ ಅನ್ನೋ ಕುತೂಹಲವಿದೆ. ಥಿಯೇಟರ್ ಮುಂದೆ ಅಭಿಮಾನಿಗಳ ಕ್ರೇಜ್ ನೋಡುತ್ತಿದ್ದರೆ, ಫಸ್ಟ್ ಡೇ ಕಲೆಕ್ಷನ್ ದಾಖಲೆ ಮಾಡೋದು ಪಕ್ಕಾ.

  "ಆ ಗುಗ್ಗುಗಳು ಬೆಳೆದಿದ್ದೇ ನಮ್ಮ ಸಿನಿಮಾಗಳಿಂದ": ಗಾಂಧಿನಗರದ ಕೆಲವರಿಗೆ ದರ್ಶನ್ ಎಚ್ಚರಿಕೆ!

  ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ'ಗೆ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಶುಭ ಕೋರಿದ್ದಾರೆ. ಡಾಲಿ ಧನಂಜಯ್, ತರುಣ್ ಸುಧೀರ್, ವಂಶಿ ಕಾಕಾ ಸೇರಿದಂತೆ ಹಲವು ಮಂದಿ ಶುಭಕೋರಿದ್ದಾರೆ.

  'ಕ್ರಾಂತಿ' ಆಹ್ವಾನ ಕೊಟ್ಟ ದರ್ಶನ್

  'ಕ್ರಾಂತಿ' ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳಿಗೆ ಗಣರಾಜ್ಯೋತ್ಸವದ ಶುಭಕೋರಿದ್ದಾರೆ. ಹಾಗೇ ಅಭಿಮಾನಿಗಳನ್ನು ಚಿತ್ರಮಂದಿರಕ್ಕೆ ಕರೆದು ಟ್ವೀಟ್ ಮಾಡಿದ್ದಾರೆ. "ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಎಂದೆಂದೂ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ನಮ್ಮ ಕನ್ನಡಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.ಇಂದಿನಿಂದ ನಿಮ್ಮ 'ಕ್ರಾಂತಿ' ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ನೋಡಿ ಆಶೀರ್ವದಿಸಿ." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.

  'ಕ್ರಾಂತಿ'ಗೆ ಶುಭ ಕೋರಿದ ಡಾಲಿ

  'ಕ್ರಾಂತಿ'ಗೆ ಶುಭ ಕೋರಿದ ಡಾಲಿ

  ದರ್ಶನ್ 'ಕ್ರಾಂತಿ' ಸಿನಿಮಾಗೆ ಇಡೀ ಸ್ಯಾಂಡಲ್‌ವುಡ್‌ಗೆ ಕುತೂಹಲವಿದೆ. ಹಲವು ಸವಾಲುಗಳನ್ನು ಎದುರಿಸಿ ರಿಲೀಸ್ ಆಗಿರುವ ಸಿನಿಮಾಗೆ ನಟ ರಾಕ್ಷಸ ಡಾಲಿ ಧನಂಜಯ್ ಶುಭ ಕೋರಿದ್ದಾರೆ. " ಕ್ರಾಂತಿಗೆ ಶುಭವಾಗಲಿ.. ಕ್ರಾಂತಿಯಾಗಲಿ" ಎಂದು ಟ್ವೀಟ್ ಮೂಲಕ ಧನಂಜಯ್ ಶುಭ ಕೋರಿದ್ದಾರೆ.

  ತರುಣ್ ಸುಧೀರ್ ಶುಭಾಶಯ

  ತರುಣ್ ಸುಧೀರ್ ಶುಭಾಶಯ

  ದರ್ಶನ್ ಸಿನಿಮಾ 'ಕ್ರಾಂತಿ' 55ನೇ ಸಿನಿಮಾವಾಗಿ ರಿಲೀಸ್ ಆಗಿದೆ. ಈಗಾಗಲೇ ದಾಸನ 56ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ತರುಣ್ ಸುಧೀರ್ ಕೂಡ 'ಕ್ರಾಂತಿ' ರಿಲೀಸ್‌ಗೆ ಶುಭಕೋರಿದ್ದಾರೆ. "ಅದ್ಭುತ ಸಂದೇಶವನ್ನು ಒಳಗೊಂಡ ಚಿತ್ರ 'ಕ್ರಾಂತಿ' ಅತ್ಯದ್ಭುತ ಯಶಸ್ಸು ಪಡೆಯಲಿ. ಸೆಲೆಬ್ರೆಟಿಗಳ ಸೆಲೆಬ್ರೆಷನ್ ಜೋರಾಗಲಿ. 'ಕ್ರಾಂತಿ' ಚಿತ್ರ ಎಲ್ಲಾ ಜನರೇಷನ್‌ಗೂ ತಲುಪಲಿ." ಎಂದು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ.

  ರೂಪೇಶ್ ರಾಜಣ್ಣ ಶುಭಾಶಯ

  ರೂಪೇಶ್ ರಾಜಣ್ಣ ಶುಭಾಶಯ

  "ಸರ್ಕಾರಿ ಶಾಲೆಗಳ ಉಳಿವು, ಕನ್ನಡ ನಾಡು,ನುಡಿ ವಿಚಾರಗಳನ್ನು ಇಟ್ಟುಕೊಂಡು ಇಂದು ತೆರೆಯ ಮೇಲೆ ಬರುತ್ತಿರುವ ದರ್ಶನ್ ಅವರ ಕ್ರಾಂತಿ ಸಿನಿಮಾ ಯಶಸ್ವಿಯಾಗಲಿ. ನಮ್ಮ ಇಡೀ ಕನ್ನಡ ಚಿತ್ರರಂಗ ಸದಾ ಗೆಲ್ಲಲಿ." ರೂಪೇಶ್ ರಾಜಣ್ಣ ಶುಭ ಹಾರೈಸಿದ್ದಾರೆ.

  English summary
  Sandalwood Celebrities Wish Challenging Star Darshan Movie Kranti A Successful Release, Know More.
  Thursday, January 26, 2023, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X