twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನ ವಿಕೃತಕಾಮಿಗಳಿಗೆ ಸ್ಯಾಂಡಲ್‌ ವುಡ್‌ ನಿಂದ ‍ಛೀಮಾರಿ..

    By Suneel
    |

    ಬೆಂಗಳೂರಿನಲ್ಲಿ ಹೊಸ ವರ್ಷದ ಆರಂಭದಿಂದ ಆಗುತ್ತಿರುವ ಯುವತಿಯರ ಮೇಲಿನ ಸರಣಿ ದೌರ್ಜನ್ಯ ಘಟನೆಗಳು ಸಜ್ಜನರಿಗೆ ಭಯವನ್ನುಂಟು ಮಾಡುತ್ತಿದೆ. ಈ ಬಗ್ಗೆ ಮಹಿಳೆಯರು ಆಕ್ರೋಶಗೊಂಡಿದ್ದು, ಸ್ಯಾಂಡಲ್ ವುಡ್ ತಾರೆಯರು ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.[ಬೆಂಗಳೂರಿನ ಘಟನೆಗೆ ಬಾಲಿವುಡ್‌ ನವರು ಹೀಗೆಲ್ಲಾ ಹೇಳಿದರು..]

    ಬೆಂಗಳೂರಿನ ಕಮ್ಮನಹಳ್ಳಿ, ಕೆ.ಜಿ ಹಳ್ಳಿಯಲ್ಲಿ ಯುವತಿಯರ ಮೇಲೆ ಕಿಡಿಗೇಡಿಗಳು ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಕನ್ನಡ ಚಿತ್ರರಂಗದ ತಾರೆಯರು ವಿಕೃತಕಾಮಿಗಳಿಗೆ ಶಿಕ್ಷೆ ಆಗಬೇಕೆಂದು ಪ್ರತಿಭಟಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿರುವ ಕಿಡಿಗೇಡಿ ಕಾಮುಕರ ಬಗ್ಗೆ ಕನ್ನಡ ತಾರೆಯರು ಚಾಟಿ ಬೀಸಿದ್ದು, ಯಾರ್ಯಾರು ಏನು ಹೇಳಿದ್ದಾರೆ ಮಾಹಿತಿ ಇಲ್ಲಿದೆ ನೋಡಿ..[ಯುವತಿಯ ಟಿ ಶರ್ಟ್ ಹಿಡಿದು ಎಳೆದಾಡಿದ ಕಾಮುಕರು]

    ಐಶಾನಿ ಶೆಟ್ಟಿ, ನಟಿ

    ಐಶಾನಿ ಶೆಟ್ಟಿ, ನಟಿ

    "ಬೆಂಗಳೂರಿನಲ್ಲಿ ಹುಡುಗಿಯರು ಹೆಚ್ಚು ವೆಸ್ಟರ್ನ್‌ ಕಲ್ಚರ್ ಫಾಲೋ ಮಾಡ್ತಿದ್ದಾರೆ, ಅದಿಕ್ಕೆ ಹೀಗೆಲ್ಲಾ ಆಗುತ್ತಿದೆ ಅಂತ ಕೆಲವರು ಹೇಳುತ್ತಿದ್ದಾರೆ. ಆದ್ರೆ ಇಲ್ಲಿ ಸಂಸ್ಕೃತಿ ಬಗ್ಗೆ ಪ್ರಶ್ನೆಯೇ ಬರಬಾರದು. ಭಾರತ ಅಥವಾ ಯಾವುದೇ ದೇಶದ ಸಂಸ್ಕೃತಿಯೂ ಸಹ ಹೆಣ್ಣು ಮಕ್ಕಳ ಮೇಲೆ ಕೈ ಮಾಡಿ, ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಮಾಡಿ ಅಂತ ಹೇಳುವುದಿಲ್ಲ. ಮತ್ತೆ ಘಟನೆಯನ್ನು ಹೆಚ್ಚಾಗಿ ಸೆನ್ಸೇಷನ್ ಮಾಡಲಾಗುತ್ತಿದೆ ಹೊರತು, ಸಮಸ್ಯೆಗೆ ಪರಿಹಾರದ ಬಗ್ಗೆ ಚರ್ಚೆಗಳು ಆಗುತ್ತಿಲ್ಲ. ಕಿಡಿಗೇಡಿಗಳ ಬಗ್ಗೆ ತನಿಖೆ ಆಗಿ ಅವರಿಗೆ ಶಿಕ್ಷೆ ಆಗಬೇಕು. ಇನ್ನುಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕೆಲವರು ಶಿಕ್ಷೆ ಆದರೂ ಸಹ ಜೈಲಿನಿಂದ ಹೊರಗೆ ಬಂದು ಮತ್ತೇ ಅದೇ ಚಾಳಿ ಆರಂಭಿಸುತ್ತಾರೆ. ಸೋ ಬೇಸಿಕಲಿ ಮಾನವೀಯತೆ ಗುಣ ಎಂಬುದು ಗ್ರೌಂಡ್ ಲೆವೆಲ್‌ ನಲ್ಲಿ ಬದಲಾವಣೇ ಆಗಬೇಕು".[ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾದ ವಿಕೃತಕಾಮಿ]

     ಸಂಚಾರಿ ವಿಜಯ್‌, ನಟ

    ಸಂಚಾರಿ ವಿಜಯ್‌, ನಟ

    "ಬೆಂಗಳೂರಿನಲ್ಲಿ ಇದೊಂದು ಕೆಟ್ಟ ಬೆಳವಣಿಗೆ. ತಪ್ಪಾಗಿ ನಡೆದುಕೊಂಡವರಿಗೆ ಶಿಕ್ಷೆ ಆಗಲೇಬೇಕು. ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರನ್ನು ಬೇಗ ಹಿಡಿದ್ದಾರೆ. ಅಷ್ಟೇ ಬೇಗ ತನಿಖೆ ಆಗಿ ಅವರಿಗೆ ಶಿಕ್ಷೆ ಆಗಬೇಕು".

     ಸುಕೃತಾ ವಾಗ್ಲೆ, ನಟಿ

    ಸುಕೃತಾ ವಾಗ್ಲೆ, ನಟಿ

    ''ಇದು ಹೊಸತೇನಲ್ಲ. ನಾನು ನಟಿಯಾಗುವುದಕ್ಕೂ ಮುಂಚೆ ಕೂಡ ಇಂತಹ ಸಮಸ್ಯೆಗಳು ನನಗೂ ಎದುರಾಗಿದೆ. ಈಗ ಸಿಸಿಟಿವಿ ಹೆಚ್ಚಾಗಿರುವುದರಿಂದ ಬೆಳಕಿಗೆ ಬರ್ತಿದೆ. ಆದ್ರೆ, ಇದನ್ನ ವೈಯಕ್ತಿಕವಾಗಿ ಬದಲಾವಣೆ ತರಲು ಸಾಧ್ಯವಿಲ್ಲ. ನಮ್ಮ ಸರ್ಕಾರದಿಂದ ಅಥವಾ ಕಾನೂನಿನ ನಿಯಮಗಳಲ್ಲಿ ಏನಾದರೂ ಗಟ್ಟಿಯಾದ ನಿರ್ಭಯಗಳನ್ನ ಕೈಗೊಂಡ್ರೆ ಮಾತ್ರ ಇದನ್ನ ತಡೆಯುವುದಕ್ಕೆ ಸಾಧ್ಯ".

     ರೂಪ ಅಯ್ಯರ್, ನಟಿ

    ರೂಪ ಅಯ್ಯರ್, ನಟಿ

    ''ಇದುವರೆಗೂ ಯಾವುದೇ ಹೆಣ್ಣು ನನಗೆ ಸ್ವತಂತ್ರ ಬೇಕು ಎಂದು ಹೋರಾಟ ಮಾಡಿಲ್ಲ. ನಮ್ಮ ದೇಶದಲ್ಲಿ ಹೆಣ್ಣು ಯಾರಿಗೂ ಭಯ ಪಡುವುದಿಲ್ಲ. ಆದ್ರೆ, ಗಂಡಸಿಗೆ ಮಾತ್ರ ಭಯ ಪಡಬೇಕಾಗಿದೆ. ಒಬ್ಬಳೆ ಬಸ್ ನಿಲ್ದಾಣದಲ್ಲಿ ನಿಲ್ಲುವಾಗಿಲ್ಲ, ಬಸ್ ನಲ್ಲಿ ಹೋಗುವಾಗಿಲ್ಲ, ಬೈಕ್ ನಲ್ಲೂ ಹೋಗುತ್ತಿದ್ದರೂ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಹೆಣ್ಣು ಮಕ್ಕಳು ತೊಡುವ ಬಟ್ಟೆಯಲ್ಲಿ ಪ್ರಚೋದನೆ ಆಗುತ್ತಿದೆ ಎನ್ನುತ್ತಾರೆ. ಆದ್ರೆ, ಹಾವ-ಭಾವ, ನಾವು ತೊಡುವ ಬಟ್ಟೆಯಲ್ಲಿ ಪ್ರಚೋದನೆ ಆಗಲ್ಲ. ನೋಡುವ ದೃಷ್ಠಿ ಬದಲಾಗಬೇಕು. ಇದೆಲ್ಲಾ ಬದಲಾಗಬೇಕಾಗಿದೆ. ಪ್ರತಿಯೊಬ್ಬರು ತಾಯಿಯ ಹೊಟ್ಟೆಯಿಂದಲೇ ಹುಟ್ಟಿ ಬರುವುದು ಎನ್ನುವುದನ್ನು ಮರೆಯುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಸಂಸ್ಕೃತ, ಸಂಪ್ರದಾಯ ಮಾತ್ರವಲ್ಲ, ಹೆಣ್ಣನ್ನ ಗೌರವಿಸುವುದು ಕೂಡ ಕಲಿಸಬೇಕಾಗಿದೆ".

     ವೈಶಾಲಿ, ನಟಿ

    ವೈಶಾಲಿ, ನಟಿ

    ''ನನಗೆ ವಯಕ್ತಿಕವಾಗಿ ತುಂಬಾ ಬೇಜಾರಾಗಿದೆ. ಈ ಬೆಳವಣಿಗೆ ಒಳ್ಳೆಯದಲ್ಲ. ಇಂತಹ ಅಪರಾಧ ಮಾಡುವವರನ್ನ ಸುಮ್ಮನೆ ಬಿಡಬಾರದು. ಅಂದ್ರೆ, ಕೇವಲ ಅರೆಸ್ಟ್ ಮಾಡಿ ಅಥವಾ ಜೈಲಿಗೆ ಕಳುಹಿಸಿ ಸುಮ್ಮನೆ ಆಗೋದಲ್ಲ. ಮತ್ತೆ ಈ ರೀತಿ ಬೇರೆ ಯಾರು ಮಾಡದಂತೆ ಬೇರೆ ಏನಾದ್ರೂ ಶಿಕ್ಷೆ ಕೊಡಬೇಕು''.

     ಅಪೂರ್ವ, ನಟಿ

    ಅಪೂರ್ವ, ನಟಿ

    ''ಎಲ್ಲರೂ ಹೇಳ್ತಿದ್ದಾರೆ ತುಂಡೊಡಿಗೆ ತೊಟ್ಟರೇ ಈ ರೀತಿ ಪ್ರಚೋದನೆ ಆಗುತ್ತೆ ಅಂತ. ಮೊನ್ನೆ ನಡೆದ ಘಟನೆಯಲ್ಲಿ ಆ ಹುಡುಗಿ ಮೈ ತುಂಬಾ ಬಟ್ಟೆ ಹಾಕಿದ್ದಾರೆ. ಪ್ರಚೋದನೆ ಎಲ್ಲಿ ಆಯಿತು. ನಾವು ತೊಡುವ ಬಟ್ಟೆಯಲ್ಲಿ ಏನೂ ಇಲ್ಲ, ನೋಡುವ ದೃಷ್ಠಿ ಬದಲಾಗಬೇಕು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಬುದ್ದಿ ಹೇಳಿದ್ರೆ ಇದೆಲ್ಲ ಆಗಲ್ಲ''- ಅಪೂರ್ವ, ನಟಿ

     ಕೃಷಿ ತಾಪಂಡ, ನಟಿ

    ಕೃಷಿ ತಾಪಂಡ, ನಟಿ

    ''ಇದು ತುಂಬಾ ಬೇಸರದ ಸಂಗತಿ. ಹೊಸ ವರ್ಷದ ಸಂಭ್ರಮದಲ್ಲಿ ಆದ ಘಟನೆಗೆ ಸಂಬಂಧಿಸದಂತೆ, ಕೆಲವು ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಜನ ಹೆಚ್ಚು ಇರುವ ಕಡೆ ಇದು ಸಾಮಾನ್ಯ ಅಂತ. ಅದು ಖಂಡಿತಾ ತಪ್ಪು. ಈ ತರ ಹೇಳುವ ಬದಲು, ಇದನ್ನ ಹೇಗೆ ನಿಯಂತ್ರಣ ಮಾಡೋದು ಎಂದು ಯೋಚನೆ ಮಾಡಬೇಕಿದೆ. ತಪ್ಪು ಮಾಡಿದವರನ್ನ ಜೈಲಿಗೆ ಕಳುಹಿಸಬಹುದು. ಆದ್ರೆ, ಅವರ ದೃಷ್ಠಿಕೋನವನ್ನ ಹೇಗೆ ಬದಲಾಯಿಸುವುದು".

    English summary
    Aishani Shetty, Sanchari Vijay, Sukrutha Wagle, and other Sandalwood stars Slams on Bengaluru young woman and new year party molesters. Here you can know what they said.
    Saturday, January 7, 2017, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X