»   » ಸುದೀಪ್ 'ವಿಲನ್' ಹೇರ್ ಸ್ಟೈಲ್ ಕಾಪಿ ಮಾಡಿದ್ರಾ ಬಾಲಿವುಡ್ ನಟ?

ಸುದೀಪ್ 'ವಿಲನ್' ಹೇರ್ ಸ್ಟೈಲ್ ಕಾಪಿ ಮಾಡಿದ್ರಾ ಬಾಲಿವುಡ್ ನಟ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರ ಭರದಿಂದ ಶೂಟಿಂಗ್ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಇಬ್ಬರ ಸೂಪರ್ ಸ್ಟಾರ್ ನಟರು ಒಟ್ಟಾಗಿರುವ ಈ ಚಿತ್ರ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟುಹಾಕುತ್ತಿದೆ.

ಅದರಲ್ಲು, 'ದಿ ವಿಲನ್' ಚಿತ್ರಕ್ಕಾಗಿ ಶಿವಣ್ಣ ಮತ್ತು ಸುದೀಪ್ ಮಾಡಿಕೊಂಡಿರುವ ಹೇರ್ ಸ್ಟೈಲ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರ ಸ್ಟಾರ್ ನಟರ ಅಭಿಮಾನಿಗಳು ತಮ್ಮ ಹೀರೋಗಳಂತೆ ಕೇಶವಿನ್ಯಾಸ ಮಾಡಿಕೊಂಡು ಖುಷಿ ಪಟ್ಟಿದ್ದರು.['ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!]

ಈಗ ಲೇಟೆಸ್ಟ್ ಏನಪ್ಪಾ ಅಂದ್ರೆ, ಬಾಲಿವುಡ್ ನ ಸೂಪರ್ ಸ್ಟಾರ್ ನಟನೊಬ್ಬ 'ದಿ ವಿಲನ್' ಚಿತ್ರದಲ್ಲಿರುವ ಸುದೀಪ್ ಹೇರ್ ಸ್ಟೈಲ್ ನಂತೆ ತಾವು ಮಾಡಿಕೊಂಡಿದ್ದಾರೆ. ಯಾರದು? ಮುಂದೆ ಓದಿ....

'ವಿಲನ್' ಸ್ಟೈಲ್ ಗೆ ಖಳನಾಯಕ್ ಬೋಲ್ಡ್!

'ವಿಲನ್' ಚಿತ್ರದಲ್ಲಿ ಸುದೀಪ್ ಮಾಡಿಕೊಂಡಿರುವ ಹೇರ್ ಸ್ಟೈಲ್ ಹೋಲುವಂತೆ, ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಕೂಡ ಮಾಡಿಕೊಂಡಿದ್ದಾರೆ.['ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?]

ಹೊಸ ಚಿತ್ರದ ಫಸ್ಟ್ ಲುಕ್!

ಅಂದ್ಹಾಗೆ, ಸಂಜಯ್ ದತ್ ಈ ಹೊಸ ಲುಕ್ ಮಾಡಿಕೊಂಡಿರುವುದು ತಮ್ಮ ಹೊಸ ಚಿತ್ರಕ್ಕಾಗಿ. ''ಸಾಹೇಬ್ ಬಿವಿ ಹೌರ್ ಗ್ಯಾಂಗ್ ಸ್ಟರ್‌-3'' ಚಿತ್ರಕ್ಕಾಗಿ ದತ್ ಈ ಸ್ಟೈಲಿಶ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ.[ಮತ್ತೆ ಒಂದಾದ 90ರ ದಶಕದ 'ಗೋಲ್ಡನ್ ಜೋಡಿ' ]

'ವಿಲನ್' ಸ್ಪೂರ್ತಿನಾ!

ಸಂಜಯ್ ದತ್ ಅವರ ಹೇರ್ ಸ್ಟೈಲ್ ಮತ್ತು 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಅವರ ಹೇರ್ ಸ್ಟೈಲ್ ಬಹುತೇಕ ಹೋಲಿಕೆಯಾಗುತ್ತಿದೆ. ಇದನ್ನ ನೋಡಿದ ಅಭಿಮಾನಿಗಳು, ಕಿಚ್ಚನ ಹೇರ್ ಸ್ಟೈಲ್ ನ್ನ ಸಂಜಯ್ ದತ್ ಕಾಪಿ ಮಾಡಿದ್ರಾ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.[ಶೂಟಿಂಗ್ ಗೆ 'ವಿಲನ್' ಎಂಟ್ರಿ: ಇಷ್ಟವಿಲ್ಲದಿದ್ರೂ ಸೆಲ್ಫಿ ಪೋಸ್ಟ್ ಮಾಡಿದ ಸುದೀಪ್]

ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಸಂಜು

ಅಂದ್ಹಾಗೆ, 'ಸಾಹೇಬ್ ಬಿವಿ ಹೌರ್ ಗ್ಯಾಂಗ್ ಸ್ಟರ್‌-3' ಚಿತ್ರದಲ್ಲಿ ಸಂಜಯ್ ದತ್ ಗ್ಯಾಂಗ್ ಸ್ಟರ್ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನ ತಿಗ್ಮಾನ್ಷು ದುಲಿಯಾ ನಿರ್ದೇಶನ ಮಾಡುತ್ತಿದ್ದಾರೆ.

ಗ್ಯಾಂಗ್ ಸ್ಟರ್ ಮೂರನೇ ಭಾಗ!

2011 ರಲ್ಲಿ 'ಸಾಹೇಬ್ ಬಿವಿ ಹೌರ್ ಗ್ಯಾಂಗ್ ಸ್ಟರ್‌' ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಣ್ದೀಪ್ ಹೂಡ ಮುಖ್ಯ ಪಾತ್ರವನ್ನ ನಿರ್ವಹಿಸಿದ್ದರು. 2013 ರಲ್ಲಿ 'ಸಾಹೇಬ್ ಬಿವಿ ಹೌರ್ ಗ್ಯಾಂಗ್ ಸ್ಟರ್‌ ರಿಟರ್ನ್ಸ್' ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಇರ್ಫಾನ್ ಖಾನ್ ನಾಯಕರಾಗಿದ್ದರು. ಈಗ ಮೂರನೇ ಭಾಗ ಸಿದ್ದವಾಗುತ್ತಿದ್ದು, ಈ ಚಿತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ.

English summary
Sanjay Dutt’s First Look From Saheb Biwi Aur Gangster 3 Is Out Now. the Movie Directed By Tigmanshu dhulia.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada