»   » 'ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?

'ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?

Posted By:
Subscribe to Filmibeat Kannada

ನಿರ್ದೇಶಕ 'ಜೋಗಿ' ಪ್ರೇಮ್ ಡೈರೆಕ್ಷನ್ ನಲ್ಲಿ ಮೂಡಿ ಬರುತ್ತಿರುವ 'ದಿ ವಿಲನ್' ಫಸ್ಟ್ ಲುಕ್ ಯಾವಾಗ ಬಿಡುಗಡೆ ಆಗುತ್ತೋ ಎಂಬ ಕುತೂಹಲ ದಿಂದ ಸ್ಯಾಂಡಲ್ ವುಡ್ ಸಿನಿ ಪ್ರಿಯರು ಕಾದು ಕುಳಿತಿದ್ದರು. ಪ್ರೇಮ್ ಸಹ ತಮ್ಮ ಮೆಗಾ ಕಮರ್ಷಿಯಲ್ ಚಿತ್ರದ ಫಸ್ಟ್ ಲುಕ್ ಅನ್ನು ಆಗ ರಿಲೀಸ್ ಮಾಡ್ತೀನಿ, ಈಗ ರಿಲೀಸ್ ಮಾಡ್ತೀನಿ ಅಂತ ಹೇಳಿ ಸತತವಾಗಿ ಒಂದು ತಿಂಗಳಿನಿಂದ ಅಭಿಮಾನಿಗಳನ್ನು ಕಾಯಿಸಿದ್ದರು. ಈಗ ಕೊನೆಗೂ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.[ಶಿವಣ್ಣ-ಸುದೀಪ್ ಜೊತೆ 'ದಿ ವಿಲನ್' ಚಿತ್ರದಲ್ಲಿ ಟಾಲಿವುಡ್ ಸ್ಟಾರ್.! ಯಾರವರು.?]

ಹೌದು, ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳ 'ದಿ ವಿಲನ್' ಫಸ್ಟ್ ಲುಕ್ ಅನ್ನು ನಿರ್ದೇಶಕ ಪ್ರೇಮ್ ಟೀಮ್ ಗಾಂದಿನಗರದ ಅಣ್ಣಮ್ಮನ ಸನ್ನಿಧಿಯಲ್ಲಿ ರಿಲೀಸ್ ಮಾಡಿದೆ. ಫಸ್ಟ್ ಲುಕ್ ನಲ್ಲೇ ಹೊಸ ಟ್ರೆಂಡ್ ಹುಟ್ಟು ಹಾಕಿರುವ 'ದಿ ವಿಲನ್' ಪೋಸ್ಟರ್ ಹೇಗಿದೆ ಅಂತ ನೀವೇ ನೋಡಿ..

ಬಿಗ್ ಸ್ಟಾರ್ ಗಳ 'ದಿ ವಿಲನ್' ಮುಖವಾಡ ಬಯಲು

ಸ್ಯಾಂಡಲ್ ವುಡ್ ನಲ್ಲಿ ಹಲವು ದಿನಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ 'ದಿ ವಿಲನ್' ಪೋಸ್ಟರ್ ರಿಲೀಸ್ ಆಗಿದೆ. 'ದಿ ವಿಲನ್' ಫಸ್ಟ್ ಲುಕ್ ಅನ್ನು ಗಾಂದಿನಗರದ ಅಣ್ಣಮ್ಮನ ದೇವಸ್ಥಾನದಲ್ಲಿ ನಿರ್ದೇಶಕ 'ಜೋಗಿ' ಪ್ರೇಮ್ 'ರೋಗ್' ಚಿತ್ರದ ನಾಯಕ ನಟ ಇಶಾನ್ ಸಾಥ್ ನೊಂದಿಗೆ ಬಿಡುಗಡೆ ಮಾಡಿದ್ದಾರೆ.

'ದಿ ವಿಲನ್' ಫಸ್ಟ್ ಲುಕ್

ಕನ್ನಡ ಚಿತ್ರರಂಗದಲ್ಲಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಆಗಿರುವ 'ದಿ ವಿಲನ್' ಫಸ್ಟ್ ಲುಕ್ ಇದೇ ನೋಡಿ. ಶಿವಣ್ಣನ ಮುಖಕ್ಕೆ ಎದುರಾಗಿ ಸುದೀಪ್ ಮುಖ ಮತ್ತು ಸುದೀಪ್ ಮುಖಕ್ಕೆ ಎದುರಾಗಿ ಶಿವಣ್ಣ ಮುಖ ಇರುವ ಹಾಗೆ ಪೋಸ್ಟರ್ ಅನ್ನು 'ಜೋಗಿ' ಪ್ರೇಮ್ ಡಿಸೈನ್ ಮಾಡಿದ್ದಾರೆ.['ದಿ ವಿಲನ್' ಗೆ ರೆಡಿಯಾದ ಸುದೀಪ್: 'ಹೆಬ್ಬುಲಿ' ನಂತರ ಹೇರ್ ಸ್ಟೈಲ್ ಹೇಗಿದೆ ಗೊತ್ತಾ?]

ಮಾಸ್ ಲುಕ್ ನಲ್ಲಿ ರಾರಾಜಿಸಿದ ಹ್ಯಾಟ್ರಿಕ್ ಹೀರೋ

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ 'ದಿ ವಿಲನ್' ನಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಜಡೆ ಕಟ್ಟಿ ಹೊಸ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಜಗ ಜಟ್ಟಿಯಂತೆ ಮಿಂಚಿದ್ದಾರೆ.

'ದಿ ವಿಲನ್'ಗಾಗಿ ಸುದೀಪ್ ವಿಭಿನ್ನ ಹೇರ್ ಸ್ಟೈಲ್

'ದಿ ವಿಲನ್' ಗಾಗಿ ಸುದೀಪ್ ಈ ಹಿಂದೆ ಎಂದು ಕಂಡಿರದ ವಿಭಿನ್ನ ಹೇರ್ ಸ್ಟೈಲ್ ಮಾಡಿಸಿ ಸಖತ್ ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಹೇರ್ ಸ್ಟೈಲ್, ಕಿವಿಯ ಮೇಲೆ ಎಕ್ಸ್ ಮಾರ್ಕ್, ಕಿವಿಗೊಂದು ಓಲೆ ಧರಿಸಿರುವ ನೋಟ ಸಿನಿ ಪ್ರೇಮಿಗಳು ರೋಮಾಂಚನಗೊಳ್ಳುವಂತೆ ಮಾಡಿದೆ.[ಸಲ್ಮಾನ್ ಖಾನ್ ಚಿತ್ರದಲ್ಲಿ ಸುದೀಪ್ ವಿಲನ್! ಸಾಕ್ಷಿ ಇಲ್ಲಿದೆ]

ಗಂಭೀರ ಲುಕ್- ಆಕರ್ಷಕ ಕಣ್ಣುಗಳು

'ದಿ ವಿಲನ್' ಫಸ್ಟ್ ಲುಕ್ ನಲ್ಲಿ ಶಿವಣ್ಣ ಮತ್ತು ಸುದೀಪ್ ಇಬ್ಬರ ಲುಕ್ ಸಹ ಗಂಭೀರವಾಗಿದ್ದು, ಇಬ್ಬರ ನೀಲಿ ಕಣ್ಣುಗಳು ನೋಡಿದ ತಕ್ಷಣ ಸೆಳೆಯುತ್ತವೆ. ಮುಖಭಾವದಲ್ಲಿ ಬಿರುಸಾದ ನೋಟಗಳು ಖಡಕ್ ವೈರಿಗಳು ಎನ್ನುವ ಫೀಲ್ ಅನ್ನು ಹುಟ್ಟುಹಾಕಿವೆ.

ಯಾರು ರಾಮ? ಯಾರು ರಾವಣ?

ಹಲವು ದಿನಗಳಿಂದ ಚಿತ್ರ ಪ್ರೇಮಿಗಳನ್ನು ಕಾಯಿಸಿ 'ದಿ ವಿಲನ್' ಫಸ್ಟ್ ಲುಕ್ ರಿಲೀಸ್ ಮಾಡಿರುವ ನಿರ್ದೇಶಕ ಪ್ರೇಮ್ ಒಂದು ಸಸ್ಪೆನ್ಸ್ ಅನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಅದೇನಂದ್ರೆ ಚಿತ್ರದಲ್ಲಿ ಯಾರು ವಿಲನ್ ಎಂಬುದು. ಯಾರು ರಾಮ? ಯಾರು ರಾವಣ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಶುರುವಾಗಿದೆ ಆಗಲೇ 'ದಿ ವಿಲನ್' ಟ್ರೆಂಡ್

'ದಿ ವಿಲನ್' ಫಸ್ಟ್ ಲುಕ್ ಬಿಡುಗಡೆ ಆಗುತ್ತಿದ್ದಂತೆಯೇ ಚಿತ್ರದ ಟ್ರೆಂಡ್ ಶುರುವಾಗಿದ್ದು, ನಿರ್ದೇಶಕ ಪ್ರೇಮ್ ಅಭಿಮಾನಿ ಒಬ್ಬರು ಆಗಲೇ ಮೈಮೇಲೆ 'ದಿ ವಿಲನ್' ಎಂದು ಬರೆಸಿಕೊಂಡಿದ್ದಾರೆ.

ಹೇರ್ ಸ್ಟೈಲ್ ಟ್ರೆಂಡ್

ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಸ್ಟೈಲಿಶ್ ಹೇರ್ ಸ್ಟೈಲ್ ನೋಡಿದ ಅಭಿಮಾನಿಗಳಂತು ಅವರ ಅಟ್ರ್ಯಾಕ್ಟಿವ್ ಮತ್ತು ಟ್ರೆಂಡಿ ಹೇರ್ ಸ್ಟೈಲ್ ಫಾಲೋ ಮಾಡುವುದರಲ್ಲಿ ಸಂಶಯವೇ ಇಲ್ಲ.

ಅರ್ಜುನ್ ಜನ್ಯ ಸಂಗೀತ

ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಗಿರೀಶ್ ಗೌಡ ಛಾಯಾಗ್ರಹಣ, ಮಳವಳ್ಳಿ ಶಾಯಿ ಕೃಷ್ಣ ಸಂಭಾಷಣೆ ಇದೆ.

ತನ್ವಿ ಫಿಲಂಸ್ ಅಡಿಯಲ್ಲಿ 'ದಿ ವಿಲನ್' ನಿರ್ಮಾಣ

ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳಿಬ್ಬರು ನಟಿಸುತ್ತಿರುವ 'ದಿ ವಿಲನ್' ಚಿತ್ರವನ್ನು ತನ್ವಿ ಫಿಲ್ಮ್ಸ್ ಅಡಿಯಲಿ ಸಿ.ಆರ್ ಮನೋಹರ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

English summary
Kannada Actor Shiva Rajkumar and Sudeep starrer 'The Villain' first look released yesterday(April 1st).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada