twitter
    For Quick Alerts
    ALLOW NOTIFICATIONS  
    For Daily Alerts

    ಶೀಘ್ರದಲ್ಲೇ 'ಶಕ್ತಿಧಾಮ' ಆವರಣದಲ್ಲಿ ಶಾಲೆ ನಿರ್ಮಾಣ: ನನಸಾಗಲಿದೆ ಅಪ್ಪು ಕನಸು

    |

    ಡಾ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಬಡಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮವನ್ನು ಸ್ಥಾಪಿಸಿದ್ದರು. ಶಕ್ತಿಧಾಮ ಎನ್ನುವುದು ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ದಿ ಕೇಂದ್ರ. ಈ ಕೇಂದ್ರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ವಿದ್ಯಾಭ್ಯಾಸದ ಜೊತೆ ವಸತಿ, ಊಟವನ್ನೂ ನೀಡಲಾಗುತ್ತಿತ್ತು. ಸುಮಾರು 150 ಅಧಿಕ ಹೆಣ್ಣು ಮಕ್ಕಳು ಈ ಶಕ್ತಿಧಾಮದಲ್ಲಿ ಇದ್ದಾರೆ. ಅತೀ ಶೀಘ್ರದಲ್ಲಿ ಈ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣಗೊಳ್ಳಲಿದೆ.

    ಡಾ.ರಾಜ್‌ಕುಮಾರ್ ಕುಟುಂಬ ಕಳೆದ ಎರಡು ದಶಕಗಳಿಂದ ಶಕ್ತಿಧಾಮವನ್ನು ನಡೆಸುತ್ತಾ ಬಂದಿದೆ. ಪಾರ್ವತಮ್ಮ ರಾಜ್‌ಕುಮಾರ್ ನಿಧನದ ಬಳಿಕ ಆ ಜವಾಬ್ದಾರಿಯನ್ನು ಶಿವರಾಜ್‌ಕುಮಾರ್ ಪತ್ನಿ ಗೀತಾ ಅವರೇ ವಹಿಸಿಕೊಂಡು ಮುನ್ನೆಡೆಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಕೂಡ ಆರ್ಥಿಕ ಸಹಾಯವನ್ನು ನೀಡುತ್ತಿದ್ದರು. ಈ ಶಕ್ತಿಧಾಮದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯೊಂದು ನಿರ್ಮಾಣ ಆಗಬೇಕು ಎನ್ನುವುದು ಅಪ್ಪು ಕನಸಾಗಿತ್ತು. ಆ ಕನಸು ಈಗ ನನಸಾಗುತ್ತಿದೆ.

     ಫ್ಯಾನ್ಸ್‌ಗಾಗಿ 'ನಟಸಾರ್ವಭೌಮ' ಚಿತ್ರದ ಅಸಲಿ ಟೈಟಲ್ ಟ್ರ್ಯಾಕ್: ಸಾಂಗ್‌ನಲ್ಲಿ ಅಪ್ಪುವಿನ 42 ಸಿನಿಮಾ ಶೀರ್ಷಿಕೆ ಫ್ಯಾನ್ಸ್‌ಗಾಗಿ 'ನಟಸಾರ್ವಭೌಮ' ಚಿತ್ರದ ಅಸಲಿ ಟೈಟಲ್ ಟ್ರ್ಯಾಕ್: ಸಾಂಗ್‌ನಲ್ಲಿ ಅಪ್ಪುವಿನ 42 ಸಿನಿಮಾ ಶೀರ್ಷಿಕೆ

     'ಶಕ್ತಿಧಾಮ'ದಲ್ಲಿ ಶಾಲೆ ನಿರ್ಮಾಣ

    'ಶಕ್ತಿಧಾಮ'ದಲ್ಲಿ ಶಾಲೆ ನಿರ್ಮಾಣ

    ಮೈಸೂರಿನಲ್ಲಿರುವ ಶಕ್ತಿಧಾಮದಲ್ಲಿ ಒಂದು ಶಾಲೆ ನಿರ್ಮಾಣ ಆಗಬೇಕು ಅಂತ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬಯಸಿದ್ದರು. ಡಾ.ರಾಜ್‌ಕುಮಾರ್ ಕುಟುಂಬ ನೋಡಿಕೊಳ್ಳುತ್ತಿದ್ದ ಈ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣಗೊಳ್ಳಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಶಕ್ತಿಧಾಮದಲ್ಲಿ ಶಾಲೆ ನಿರ್ಮಿಸಲು ಹಣಹಾಸಿನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅತೀ ಶೀಘ್ರದಲ್ಲಿಯೇ ಅಪ್ಪು ಬಯಕೆಯಂತೆಯೇ 'ಶಕ್ತಿಧಾಮ'ದಲ್ಲಿ ಶಾಲೆಯೊಂದು ನಿರ್ಮಾಣಗೊಳ್ಳಿದೆ.

     ಸರ್ಕಾರದ ಬೆಂಬಲಕ್ಕೆ ಶಿವಣ್ಣ ಖುಷಿ

    ಸರ್ಕಾರದ ಬೆಂಬಲಕ್ಕೆ ಶಿವಣ್ಣ ಖುಷಿ

    ಅಪ್ಪು ನಿಧನದ ಬಳಿಕ ಶಿವರಾಜ್‌ಕುಮಾರ್ ಹಲವು ಬಾರಿ 'ಶಕ್ತಿಧಾಮ'ಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಆಟವಾಡಿದ್ದಾರೆ. ಶೂಟಿಂಗ್ ಸ್ಪಾಟ್‌ಗೆ ಕರೆದುಕೊಂಡು ಹೋಗಿದ್ದಾರೆ. "ಶಕ್ತಿಧಾಮದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲು ಸರ್ಕಾರ ಮುಂದೆ ಬಂದಿರುವುದಕ್ಕೆ ಖುಷಿಯಾಗಿದೆ. ಶಕ್ತಿಧಾಮದಲ್ಲಿ ಈಗಾಗಲೇ ಜಾಗವಿದೆ. ನಮ್ಮ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಈ ಜಾಗವನ್ನು ಖರೀದಿ ಮಾಡಿದ್ದರು. ಸರ್ಕಾರದ ಈ ನಿರ್ಧಾರ ನಮಗೆ ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಮತ್ತಷ್ಟು ಶಕ್ತಿ ಕೊಟ್ಟಿದೆ." ಎಂದು ಶಿವಣ್ಣ ಟೈಮ್ ಆಫ್ ಇಂಡಿಯಾಗೆ ಹೇಳಿಕೆ ನೀಡಿದ್ದಾರೆ.

     'ಶಕ್ತಿಧಾಮ'ಕ್ಕೆ 24 ವರ್ಷಗಳ ಇತಿಹಾಸ

    'ಶಕ್ತಿಧಾಮ'ಕ್ಕೆ 24 ವರ್ಷಗಳ ಇತಿಹಾಸ

    1998ರಲ್ಲಿ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಮೈಸೂರಿನಲ್ಲಿ 'ಶಕ್ತಿಧಾಮ'ವನ್ನು ಆರಂಭಿಸಿದ್ದರು. ಆದರೆ, 2000 ಇಸವಿಯಿಂದ ಈ 'ಶಕ್ತಿಧಾಮ' ಕಾರ್ಯೊನ್ಮುಖವಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುಮಾರು 4 ಸಾವಿರ ಮಕ್ಕಳು ಈ ಕೇಂದ್ರದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಶಕ್ತಿಧಾಮದಲ್ಲಿ ಪ್ರತಿವರ್ಷ 150 ಮಕ್ಕಳು ಉಚಿತ ಶಿಕ್ಷಣವನ್ನು ಪಡೆಯುತ್ತಾರೆ. ಇಲ್ಲಿ ಶಾಲೆಯೊಂದು ಕಟ್ಟಬೇಕು ಎನ್ನುವುದು ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ಕನಸಾಗಿತ್ತು.

     ಶಕ್ತಿಧಾಮಕ್ಕೆ ಅಪ್ಪು ಸಹಾಯ

    ಶಕ್ತಿಧಾಮಕ್ಕೆ ಅಪ್ಪು ಸಹಾಯ

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 'ಶಕ್ತಿಧಾಮ'ಕ್ಕೆ ಸಹಾಯಹಸ್ತ ಚಾಚಿದ್ದರು. ಕನ್ನಡದ ಕೋಟ್ಯಧಿಪತಿಯ ಮೊದಲ ಸರಣಿಯಲ್ಲಿ ಗೆದ್ದಿದ್ದ 18 ಲಕ್ಷ ಹಣವನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತಿವರ್ಷ ಶಕ್ತಿಧಾಮಕ್ಕೆ ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಇಂತಹ ಸಾಮಾಜಿಕ ಕೆಲಸಕ್ಕೆ ಮೀಸಲಿಡುತ್ತಿದ್ದರು. ಅಪ್ಪು ನಿಧನದ ಬಳಿಕ ಈಗ ಅವರು ಕಂಡ ಕನಸು ಈಗ ನನಸಾಗುತ್ತಿದೆ. ಶಾಲೆ ಕಟ್ಟಡ ಕಟ್ಟುವ ಕೆಲಸ ಅತೀ ಶೀಘ್ರದಲ್ಲಿಯೇ ಆರಂಭ ಆಗುವ ಸಾಧ್ಯತೆಯಿದೆ.

    English summary
    Shakthidhama in mysuru will soon have a school Puneeth Rajkumar dream becomes true. CM Basavaraj Bommai has promised financial assistance for school.
    Wednesday, March 9, 2022, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X