»   » ಕನ್ನಡ ಬೆಳ್ಳಿತೆರೆ ಮೇಲೆ ಶೀಘ್ರದಲ್ಲೇ ಜಯಲಲಿತ

ಕನ್ನಡ ಬೆಳ್ಳಿತೆರೆ ಮೇಲೆ ಶೀಘ್ರದಲ್ಲೇ ಜಯಲಲಿತ

Posted By:
Subscribe to Filmibeat Kannada

ಇದೇನಪ್ಪಾ ಸುದ್ದಿಯಿದು, ಕಾವೇರಿ ವಿಚಾರದಲ್ಲಿ ಸದಾ ರಾಜ್ಯದ ತಂಟೆಗೆ ಬರುವ ಜಯಲಲಿತಾ ಕನ್ನಡ ಚಿತ್ರದಲ್ಲಿ ನಟಿಸುವುದೇ? ಬೆಂಗಳೂರು, ಮೈಸೂರು, ಮಂಡ್ಯದ ಕಡೆ ಕುಡಿಯೋಕೆ ನೀರಿಲ್ಲ ಈ ಸಮಯದಲ್ಲಿ ಜಯಲಲಿತಾ ನಟಿಸಿದ ಚಿತ್ರ ಬಿಡುಗಡೆಗೆ ಅವಕಾಶ ಸಿಗುವುದೇ ಎಂದು ಹುಬ್ಬೇರಿಸಬೇಡಿ. ಇದು ವ್ಯಾರೆದಾ ಸ್ಟೋರಿ.

ಈ ಲೇಖನಕ್ಕೂ ತಮಿಳುನಾಡು ಮುಖ್ಯಮಂತ್ರಿ ಸೆಲ್ವಿ ಜೆ ಜಯಲಲಿತಾಗೂ ಸಂಬಂಧನೇ ಇಲ್ಲ. ವಿಷಯ ಏನಪ್ಪಾಂದ್ರೆ "ಶ್ರೀಮತಿ ಜಯಲಲಿತ" ಎನ್ನುವ ಹೆಸರಿನಲ್ಲಿ ಕನ್ನಡ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ.

ಪಿ ಇಂದಿರಾ - ಅರುಣ್ ಕುಮಾರ್ - ಮಂಜುಳಾ ಶಂಕರ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಇಂದಿರಾ ಪ್ರೊಡಕ್ಷನ್ ಬ್ಯಾನರಿನಲ್ಲಿ ಮೂಡಿಬರಲಿದೆ. ಚಿತ್ರದ ನಿರ್ದೇಶಕರು ವಿಷ್ಣುವರ್ಧನ್, ಚಾರುಲತ ಚಿತ್ರ ಖ್ಯಾತಿಯ ಪಿ ಕುಮಾರ್ ಮತ್ತು ಸಂಗೀತ ನೀಡಿದವರು ಸಂಭ್ರಮ ವಿ ಶ್ರೀಧರ್.

 Sharan and Ravishankar in new film Jayalalitha

ಐ ಯಾಮ್ ಮಿ.ವಿಠಲ್ ರಾವ್, ಸರ್ಜರಿ ಎಂಡ್ ಭರ್ಜರಿ ಎಂದು ಸಿಲ್ಲಿಲಲ್ಲಿ ಧಾರವಾಹಿ ಮೂಲಕ ಜನಪ್ರಿಯಗೊಂಡಿದ್ದ ಪಯಣ ರವಿಶಂಕರ್ ಗೌಡ ಚಿತ್ರದ ಹೀರೋ.

ಚಿತ್ರದಲ್ಲಿ ವಿಷಯ ಅದಲ್ಲಾ.. ಮೇಲಿನ ಇಮೇಜನ್ನು ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಯಾರಪ್ಪಾ ಇದು ಬ್ಯೂಟಿಫುಲ್ ಯುವತಿ, ಇಷ್ಟು ದಿನ ನೋಡೇ ಇಲ್ವೇ ಎಂದು ಒಂದು ಕ್ಷಣ ನೀವು ಅವಕ್ಕಾಗದಿದ್ದರೆ ಕೇಳಿ. ಒಂದು ಕೋನದಲ್ಲಿ ಸದ್ಯ ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಶೃತಿ ಇರಬಹುದೇನೋ ಎಂದು ಅನಿಸಿದರೂ ಅನಿಸಬಹುದು.

ನೋ, ಇದು ಶೃತಿಯಲ್ಲ. But, ಆಕೆಯ ಪ್ರತಿಭಾನ್ವಿತ ಸಹೋದರ ಶರಣ್. ಹೌದು, ಶ್ರೀಮತಿ ಜಯಲಲಿತ ಚಿತ್ರಕ್ಕಾಗಿ ಶರಣ್ ಅವರ ಹೊಸ ಅವತಾರವಿದು. ಇದು ಪಕ್ಕಾ ಶರಣ್ ಶೈಲಿಯ ಹಾಸ್ಯಮಯ ಚಿತ್ರ. ರವಿಶಂಕರ್ ಚಿತ್ರದ ಹೀರೊ ಅದರೆ ಶರಣ್ ಪಾತ್ರವೇನು ಚಿತ್ರದಲ್ಲಿ ನಾಯಕಿಯೇ? ಸಹಕಲಾವಿದನೇ? ಸದ್ಯಕ್ಕೆ ಈ ಬಗ್ಗೆ ಮಾಹಿತಿಯಿಲ್ಲ.

ಅದೇನೆ ಇರಲಿ ಶರಣ್ ಅವರನ್ನು ಈ ರೇಂಜಿಗೆ ಮೇಕಪ್ ಮಾಡಿದ ಕಲಾವಿದರಿಗೆ ನಮ್ಮ ಕಡೆಯಿಂದ ಅಭಿನಂದನೆಗಳು. 

English summary
Rambo fame Sharan and Ravishankar acting together in new film. Film title is Jayalalita. 
Please Wait while comments are loading...