»   » ಮಣ್ಣಿನ ಗಣೇಶ ಮಾಡುವುದನ್ನು ಹೇಳಿ ಕೊಟ್ಟ ಗಣೇಶ್ ಪತ್ನಿ ಶಿಲ್ಪಾ

ಮಣ್ಣಿನ ಗಣೇಶ ಮಾಡುವುದನ್ನು ಹೇಳಿ ಕೊಟ್ಟ ಗಣೇಶ್ ಪತ್ನಿ ಶಿಲ್ಪಾ

Posted By:
Subscribe to Filmibeat Kannada

ಇನ್ನೇನು ಗೌರಿ ಗಣೇಶ ಹಬ್ಬ ಹತ್ತಿರದಲ್ಲಿಯೇ ಇದೆ. ಪ್ರತಿ ವರ್ಷ ಗಣೇಶ ಹಬ್ಬ ಬಂದಾಗಲೂ ಪರಿಸರ ಸ್ನೇಹಿ ಗಣೇಶನನ್ನು ಬಳಸಿ ಅಂತ ಎಲ್ಲರೂ ಹೇಳುತ್ತಲೇ ಇರುತ್ತಾರೆ. ಆದ್ರೀಗ ಈ ಕೆಲಸವನ್ನ ಸ್ವತಃ ಶಿಲ್ಪಾ ಗಣೇಶ್ ರವರೇ ಮಾಡಿ ತೋರಿಸಿದ್ದಾರೆ.

ಲೇವಡಿ ಮಾಡಿದ ರಮ್ಯಾ ವಿರುದ್ಧ ಉರಿದುಬಿದ್ದ ಶಿಲ್ಪಾ ಗಣೇಶ್.!

ತಮ್ಮ ಗೋಲ್ಡನ್ ಫೌಂಡೇಶನ್ ನಲ್ಲಿ ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಶಿಲ್ಪಾ ಗಣೇಶ್ ಸದ್ಯ ಪರಿಸರದ ಬಗ್ಗೆ ಅರಿವು ಮೂಡಿಸಲು ಮನಸ್ಸು ಮಾಡಿದ್ದಾರೆ.

Shilpa Ganesh makes awareness about eco friendly ganesha

ಪಿ.ಓ.ಪಿ ಗಣೇಶ ಮೂರ್ತಿಯನ್ನು ಖರೀದಿಸುವ ಬದಲು ಇತ್ತೀಚಿಗಷ್ಟೆ ನಡೆದ ಒಂದು ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಮಕ್ಕಳಿಗೆ ಮಣ್ಣಿನ ಗಣೇಶ ಮಾಡುವುದನ್ನು ಹೇಳಿ ಕೊಟ್ಟಿದ್ದಾರೆ ಶಿಲ್ಪಾ ಗಣೇಶ್.

Shilpa Ganesh makes awareness about eco friendly ganesha

ಇಂದಿನ ಮಕ್ಕಳಿಗೆ ಮಣ್ಣಿನ ಸಂಪರ್ಕ ಇರುವುದೇ ಇಲ್ಲ ಹಾಗೂ ಮಕ್ಕಳಿಗೆ ಪರಿಸರ ಸ್ನೇಹಿ ಗಣೇಶನ ಬಗ್ಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗಿತ್ತು.

ಅಂದಹಾಗೆ, ಈ ಕಾರ್ಯಕ್ರಮದಲ್ಲಿ ಮಕ್ಕಳು ತಾವು ತಯಾರಿಸಿದ ಗಣೇಶನ ಮೂರ್ತಿಯನ್ನೇ ಹಬ್ಬದ ದಿನ ಅವರ ಮನೆಯಲ್ಲಿ ಇಟ್ಟು ಪೂಜೆ ಮಾಡಲಾಗುತ್ತದೆಯಂತೆ.

English summary
Kannada Actor Ganesh wife Shilpa Ganesh makes awareness about eco friendly ganesha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada