»   » ಪತಿ ಗಣೇಶ್ ಹುಟ್ಟುಹಬ್ಬಕ್ಕಾಗಿ ಪತ್ನಿ ಶಿಲ್ಪಾ ಮಾಡಿರುವ ಕೆಲಸ ಇದು.!

ಪತಿ ಗಣೇಶ್ ಹುಟ್ಟುಹಬ್ಬಕ್ಕಾಗಿ ಪತ್ನಿ ಶಿಲ್ಪಾ ಮಾಡಿರುವ ಕೆಲಸ ಇದು.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗಿಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ ನಟ ಗಣೇಶ್.

ಪತಿಯ ಹುಟ್ಟುಹಬ್ಬದ ಸಡಗರದಲ್ಲಿ ಇರುವ ಪತ್ನಿ ಶಿಲ್ಪಾ ಗಣೇಶ್ ತಮ್ಮ ಟ್ವಿಟ್ಟರ್ ಅಕೌಂಟ್ ನ ಪ್ರೋಫೈಲ್ ಪಿಕ್ಚರ್ ನ ಬದಲಾಯಿಸಿಕೊಂಡಿದ್ದಾರೆ.

Shilpa Ganesh's New profile pic in Twitter for Ganesh's Birthday

'ಹ್ಯಾಪಿ ಬರ್ತಡೇ ಗೋಲ್ಡನ್ ಸ್ಟಾರ್' ಎಂಬ ಸಂದೇಶ ಹೊತ್ತಿರುವ 'ಮುಗುಳು ನಗೆ' ಚಿತ್ರದಲ್ಲಿ ಗಣೇಶ್ ತಾಳಿರುವ ಮೂರು ವಿಭಿನ್ನ ಅವತಾರಗಳಿರುವ ಫೋಟೋವೊಂದನ್ನ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರೋಫೈಲ್ ಪಿಕ್ಚರ್ ಆಗಿಸಿಕೊಂಡಿದ್ದಾರೆ ಶಿಲ್ಪಾ ಗಣೇಶ್.

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಬಗ್ಗೆ ಕೇಳಿಬಂದ 'ರಾಜಕೀಯ' ಸಮಾಚಾರ

ಆ ಮೂಲಕ ಪತಿ ಗಣೇಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಪತ್ನಿ ಶಿಲ್ಪಾ ಗಣೇಶ್.

ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಮುಗುಳು ನಗೆ' ಚಿತ್ರದ 'ಜಿ.ಎಸ್.ಟಿ' ಹಾಡು ಬಿಡುಗಡೆ ಆಗಿದೆ. ಜೊತೆಗೆ 'ಆರೇಂಜ್' ಚಿತ್ರದ ಟೈಟಲ್ ಟೀಸರ್ ಹಾಗೂ 'ಚಮಕ್' ಟೀಸರ್ ರಿಲೀಸ್ ಅಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಗಣೇಶ'ನ ಜೀವನ ಚರಿತ್ರೆ ಅನಾವರಣ ಆಗುತ್ತಿದೆ. ಗೋಲ್ಡನ್ ಸ್ಟಾರ್ ಅಪ್ಪಟ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಮತ್ತೇನಿದೆ.?

English summary
Check out Shilpa Ganesh's #NewProfilePic in Twitter for Golden Star Ganesh's Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada