»   » ಕಾಶ್ಮೀರದಲ್ಲಿ ಶಿವಣ್ಣನ 'ಲೀಡರ್' ಚಿತ್ರೀಕರಣ

ಕಾಶ್ಮೀರದಲ್ಲಿ ಶಿವಣ್ಣನ 'ಲೀಡರ್' ಚಿತ್ರೀಕರಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಲೀಡರ್' ಚಿತ್ರದ ಟ್ರೈಲರ್ ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿತ್ತು. ಈಗ ಚಿತ್ರತಂಡ ಸಿನಿಮಾದ ಕೊನೆಯ ಹಂತ ಶೂಟಿಂಗ್ ಮಾಡಲು ಕಾಶ್ಮೀರದಲ್ಲಿ ಬೀಡುಬಿಟ್ಟಿದೆಯಂತೆ.[ಶಿವಣ್ಣ 'ಲೀಡರ್' ಅವತಾರ ತಾಳುವುದು ಯಾವಾಗ?]

ಶಿವಣ್ಣ ವಿಭಿನ್ನವಾದ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರೋ 'ಲೀಡರ್' ಚಿತ್ರಕ್ಕೆ ಕಾಶ್ಮೀರ ದ ಕಣಿವೆಯಲ್ಲಿ ಚಿತ್ರೀಕರೀಸುವ ದೃಶ್ಯಗಳು ಅತೀ ಮುಖ್ಯವಾಗಿದ್ದು, ಹದಿನೈದು ದಿನಗಳ ಕಾಲ ಚಿತ್ರತಂಡ ಕಾಶ್ಮೀರದಲ್ಲೇ ನಿರಂತರವಾಗಿ ಶೂಟಿಂಗ್ ಮಾಡಲಿದೆಯಂತೆ.

Shivarajkumar starrer 'Leader' Film Shooting at Kashmir

ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿರುವ ಶಿವಣ್ಣನ 'ಲೀಡರ್' ಚಿತ್ರಕ್ಕೆ ಒಂದು ಹಾಡು ಮತ್ತು ಫೈಟ್ ಸೀನ್‌ ಗಳನ್ನು ಕಾಶ್ಮೀರದಲ್ಲೇ ಚಿತ್ತೀಕರಿಸಲಾಗುತ್ತಿದೆಯಂತೆ. ಇಲ್ಲಿ ಸೆರೆಹಿಡಿಯಲಾದ ದೃಶ್ಯಗಳೇ ಸಿನಿಮಾ ದ ಹೆಚ್ಚು ಆಕರ್ಷಣೆ ಆಗಲಿದ್ದು, ಇನ್ನೆರಡು ಹಾಡುಗಳು ಮಾತ್ರ ಬಾಕಿ ಉಳಿದುಕೊಳ್ಳಲಿವೆಯಂತೆ.[ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್]

Shivarajkumar starrer 'Leader' Film Shooting at Kashmir

'ಲೀಡರ್ ಚಿತ್ರಕ್ಕೆ ವೀರಸಮರ್ಥ್ ಸಂಗೀತ ಸಂಯೋಜನೆ ಇದ್ದು, ಗುರುಪ್ರಶಾಂತ್ ರೈ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರ ಮಗಳು ಪರಿಣಿತಾ ಶಿವಣ್ಣನ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ವಿಜಯ ರಾಘವೇಂದ್ರ, ಪ್ರಣಿತಾ, ದೀಪಿಕಾ ಕಾಮಯ್ಯ, ಗುರು ಜಗ್ಗೇಶ್, ಆಶಿಕಾ, ಶರ್ಮಿಳಾ, ಮಾಂಡ್ರೆ ಮುಂತಾದ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

English summary
The makers of Shivarajkumar starrer Leader directed by Narasimha had to do a lot of recee at Kashmir and Manali before they finally settled to camp at Gulmarg in Kashmir for a 16 day long shoot,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada