For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿ

  |

  ಖ್ಯಾತ ನಟ ಸಕಲಕಲಾವಲ್ಲಭ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದ್ರೆ ಸಿನಿಮಾ ವಿಷಯಕ್ಕೆ ಅಲ್ಲ, ಮದುವೆ ವಿಚಾರವಾಗಿ. ಶ್ರುತಿ ಸಿನಿಮಾ ರಿಲೀಸ್ ಆಗದೆ ಸುಮಾರು ಮೂರು ವರ್ಷಗಳು ಆಗಿವೆ. 'ಕಾಟಮರಾಯಡು' ಚಿತ್ರದ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದ ಶ್ರುತಿ ಆ ನಂತರ ಯಾವ ಸಿನಿಮಾಗಳು ತೆರೆಗೆ ಬಂದಿಲ್ಲ.

  ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದನ್ನು ನೋಡಿ ಶ್ರುತಿ ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಅಲ್ಲದೆ ಶ್ರುತಿ ಕೆಲವು ವರ್ಷಗಳಿಂದ ಇಟಲಿ ಮೂಲದ ಮೈಖೇಲ್ ಕೊರ್ಸೇಲ್ ಜೊತೆ ಲವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಇಬ್ಬರು ಸಧ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.

  ಮೈಖೇಲ್ ಗೋಸ್ಕರ ಕಮಲ್ ಪುತ್ರಿ ಆಗಾಗ ಇಟಲಿಗೂ ಹೋಗಿ ಬರುತ್ತಿದ್ದರು. ಇಬ್ಬರ ಸ್ನೇಹ ನೋಡಿ ಅನೇಕರು ಈ ವರ್ಷವೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಇಬ್ಬರ ಪ್ರೀತಿ ಮುರಿದು ಬಿದ್ದಿದೆ ಎನ್ನುವ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಬಗ್ಗೆ ಸ್ವತಃ ಮೈಖೇಲ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಮದುವೆ, ಡೇಟಿಂಗ್ ಬಗ್ಗೆ ಶ್ರುತಿ ಹಾಸನ್ ಅಚ್ಚರಿ ಹೇಳಿಕೆ ಮದುವೆ, ಡೇಟಿಂಗ್ ಬಗ್ಗೆ ಶ್ರುತಿ ಹಾಸನ್ ಅಚ್ಚರಿ ಹೇಳಿಕೆ

  "ಜೀವನವು ನಮ್ಮನ್ನ ವಿರುದ್ಧ ಮಾರ್ಗದಲ್ಲಿ ತಂದು ನಿಲ್ಲಿಸಿದೆ. ದುರದೃಷ್ಟವಶಾತ್ ನಾವು ಒಂಟಿ ಮಾರ್ಗದಲ್ಲಿ ನಡೆಯಬೇಕಾಗಿದೆ. ಆದ್ರೆ ಶ್ರುತಿ ಯಾವಾಗಲು ನನ್ನ ಉತ್ತಮ ಸ್ನೇಹಿತೆಯಾಗಿ ಇರುತ್ತಾರೆ. ಯಾವಾಗಲು ಕೃತಜ್ಞನಾಗಿರುತ್ತೇನೆ" ಎಂದು ಬರೆದುಕೊಂಡು ಇಬ್ಬರ ಫೋಟೋವನ್ನು ಶೇರ್ ಮಾಡಿದ್ದಾರೆ ಮೈಖೇಲ್.

  ಈ ಹಿಂದೆ ಸಂದರ್ಶನ ಒಂದರಲ್ಲಿ ಶ್ರುತಿ ಮದುವೆ ಬಗ್ಗೆ ಹೇಳಿಕೊಂಡಿದ್ದರು. "ನಾನು ಮದುವೆ ಆಗುವುದಿಲ್ಲ. ಮದುವೆ ಆಗಬೇಕು ಅಂತ ಯಾವಾಗಲು ಅನಿಸಿಲ್ಲ. ಮದುವೆ ಆಗಬೇಕು ಅಂತ ಅನಿಸಿದಾಗ ಆಗುತ್ತೇನೆ" ಎಂದು ಹೇಳುವ ಮೂಲಕ ಮೈಖೇಲ್ ಜೊತೆಗಿನ ಸಂಬಂಧ ಮುರಿದು ಬಿದ್ದ ಸೂಚನೆಯನ್ನು ಈ ಹಿಂದೆಯೆ ನೀಡಿದ್ದರು ಶ್ರುತಿ.

  ಸದ್ಯ ಶ್ರುತಿ ವಿಜಯ್ ಸೇತುಪತಿ ಜೊತೆ ಅಭಿನಯಿಸುತ್ತಿದ್ದಾರೆ. ಜೊತೆಗೆ ಹಿಂದಿ ಸಿನಿಮಾದಲ್ಲು ಬ್ಯುಸಿಯಾಗಿದ್ದಾರೆ. ಸುಮಾರು ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಕಮಲ್ ಪುತ್ರಿಯನ್ನು ನೋಡಲು ಚಿತ್ರಪ್ರಿಯರು ಕಾತುರರಾಗಿದ್ದಾರೆ.

  English summary
  Tamil actress Shruti Haasan and Michael Corsale announce break-up in official post. Michael Corsale said We have to walk solo paths.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X