»   » ಸದ್ದಿಲ್ಲದೇ ವಿದೇಶಕ್ಕೆ ಹಾರುತ್ತಿದೆ ಕನ್ನಡದ 'ಶುದ್ಧಿ'

ಸದ್ದಿಲ್ಲದೇ ವಿದೇಶಕ್ಕೆ ಹಾರುತ್ತಿದೆ ಕನ್ನಡದ 'ಶುದ್ಧಿ'

Posted By:
Subscribe to Filmibeat Kannada

ಶೋಷಿತ ಸಮಾಜವನ್ನು ಶುದ್ಧೀಕರಿಸುವ ಹಿನ್ನೆಲೆಯಲ್ಲಿ 2016 ರಿಂದ ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತೆರೆಕಂಡಿವೆ. ಉತ್ತಮ ನಿರೂಪಣೆ, ಚಿತ್ರಕಥೆಯಲ್ಲಿ ಗಟ್ಟಿತನ ಇದ್ದರೇ ಯಾರು ಬೇಕಾದರೂ ಸಿನಿಮಾ ಮಾಡಿ ಗೆಲ್ಲಬಹುದು ಎಂಬುದನ್ನು ಹಲವು ಇತ್ತೀಚಿನ ಕನ್ನಡ ಸಿನಿಮಾಗಳು ಸಾಭೀತುಪಡಿಸಿವೆ. ಅಂತಹ ಸಿನಿಮಾಗಳ ಸಾಲಿನಲ್ಲಿ ಪ್ರೇಕ್ಷಕರ ಮನಗೆದ್ದ ಇತ್ತೀಚಿನ ಚಿತ್ರಗಳಲ್ಲಿ 'ಶುದ್ಧಿ' ಸಹ ಒಂದು.[ವಿಮರ್ಶೆ: ಶೋಷಿತ ಸಮಾಜವನ್ನು 'ಶುದ್ಧಿ'ಕರಿಸುವ ಮಹಿಳೆಯ ನಿಗೂಢ ಪಯಣ]

ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಆದರ್ಶ್ ಎಚ್.ಈಶ್ವರಪ್ಪ ನಿರ್ದೇಶನದಲ್ಲಿ ಮೂಡಿಬಂದ 'ಶುದ್ಧಿ' ಚಿತ್ರವು ಅತ್ಯುತ್ತಮ ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರವು ಚೊಚ್ಚಲ ನಿರ್ದೇಶಕ ಆದರ್ಶ್ ಅವರಿಗೆ ಹೆಸರು ಗಳಿಕೆ ಜೊತೆಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಯಶಸ್ವಿ ನೀಡಿದೆ. ಇದೇ ಚಿತ್ರವೀಗ ಅಮೆರಿಕದಲ್ಲಿ ತೆರೆಕಾಣಲು ಸಜ್ಜಾಗಿದೆ.

'Shuddhi' movie to be screened in 40 locations across the US

ಅಮೆರಿಕ ಮೂಲದ ಲಾರೆನ್ ಸ್ಟಾರ್ಟನೊ ಮುಖ್ಯ ಭೂಮಿಕೆಯಲ್ಲಿನ ಅಭಿನಯ, ಹಾಲಿವುಡ್ ಮೂಲದ ಆಂಡ್ರೂ ಆಯಿಲೋ ಛಾಯಾಗ್ರಹಣ ಮತ್ತು ಜೆಸ್ಸಿ ಕ್ಲಿಂಟನ್ ಅವರ ಸಂಗೀತ ನಿರ್ದೇಶನ ಇರುವ 'ಶುದ್ಧಿ' ಬಹುತೇಕ ಹಾಲಿವುಡ್ ಶೈಲಿಯಲ್ಲಿಯೇ ಮೂಡಿಬಂದಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಹಾಗಾಗಿ ಈಗ ಅಮೆರಿಕದಲ್ಲಿ ಸಿನಿಮಾ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚಿದ್ದು, ಅಲ್ಲಿನ ಖಾಸಗಿ ಸಂಸ್ಥೆಯೊಂದು ಚಿತ್ರ ಪ್ರದರ್ಶನ ಮಾಡಲು ಮುಂದಾಗಿದೆಯಂತೆ. ಆದ್ದರಿಂದ ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ ಏಪ್ರಿಲ್ 20 ರ ನಂತರ ಅಮೆರಿಕದ 40 ಪ್ರಮುಖ ಪ್ರದೇಶಗಳಲ್ಲಿ ಚಿತ್ರ ಪ್ರದರ್ಶನ ಮಾಡಲಿದ್ದು, ಯೂರೋಪ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಕೆಲವು ಕಡೆ ಸ್ಕ್ರೀನಿಂಗ್ ಮಾಡುವ ಯೋಜನೆ ಹೊಂದಿದ್ದಾರಂತೆ.[ಶುದ್ಧ ಸಮಾಜಕ್ಕಾಗಿ ಸಂದೇಶ ನೀಡಿದ 'ಶುದ್ಧಿ'ಗೆ ಬೆನ್ನುತಟ್ಟಿದ ವಿಮರ್ಶಕರು]

'Shuddhi' movie to be screened in 40 locations across the US

ನಿವೇದಿತಾ, ಲಾರೆನ್ ಸ್ಟಾರ್ಟನೊ, ಅಮೃತಾ ಕರಗದ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಸಿನಿಮಾವನ್ನು ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದರು. ಮಾರ್ಚ್ 17 ರಂದು ತೆರೆಕಂಡಿರುವ ಈ ಚಿತ್ರನೋಡಿ ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

English summary
Adarsh H Eshwarappa Directorial 'Shuddhi' to be screened in 40 locations across the US.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada