»   » ಶುದ್ಧ ಸಮಾಜಕ್ಕಾಗಿ ಸಂದೇಶ ನೀಡಿದ 'ಶುದ್ಧಿ'ಗೆ ಬೆನ್ನುತಟ್ಟಿದ ವಿಮರ್ಶಕರು

ಶುದ್ಧ ಸಮಾಜಕ್ಕಾಗಿ ಸಂದೇಶ ನೀಡಿದ 'ಶುದ್ಧಿ'ಗೆ ಬೆನ್ನುತಟ್ಟಿದ ವಿಮರ್ಶಕರು

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಗರಗಳ ಪ್ರಸ್ತುತ ಅಪರಾಧ ಘಟನೆಗಳಿಗೆ ಸ್ಪಂದಿಸಿ, ಎಲ್ಲರಲ್ಲೂ ಒಂದು ಸಮಾಜ ಕಾಳಜಿ ಬಗ್ಗೆ ಒಂದು ಪ್ರಶ್ನೆಯನ್ನು ಹುಟ್ಟಿಹಾಕುತ್ತದೆ 'ಶುದ್ಧಿ'. 'ಜ್ಯುವೆನೈಲ್ ಜಸ್ಟಿಸ್ ಆಕ್ಟ್' ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮಾಡುವಂತಹ ಸನ್ನಿವೇಶಗಳನ್ನು ಜಾಗರೂಕತೆಯಿಂದ ಸೂಕ್ಷ್ಮವಾಗಿ ಬಿಂಬಿಸಿರುವ ಈ ಚಿತ್ರದಲ್ಲಿ ಮೂವರು ನಾಯಕಿಯರು ಕೆಚ್ಚೆದೆಯಿಂದ ಅಭಿನಯಿಸಿದ್ದಾರೆ.

  ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ ತಮ್ಮ ಮೊದಲ ಸಿನಿಮಾದಲ್ಲಿಯೇ ಎಲ್ಲರೂ ಬೆರಳು ಬಾಯ ಮೇಲೆ ಇಟ್ಟು, ಮಹಿಳಾ ಶೋ‍ಷಣೆ ಬಗ್ಗೆ ಚಿಂತಿಸುವ ಹಾಗೆ ಸಂದೇಶಗಳನ್ನು ರವಾನಿಸಿದ್ದಾರೆ. ಚಿತ್ರದ ಸಂದೇಶ ಮತ್ತು ಡೈರೆಕ್ಟರ್ ಜಾಣ್ಮೆಗೆ ಪ್ರೇಕ್ಷಕ ಪ್ರಭುಗಳು ಫುಲ್ ಮಾರ್ಕ್ ಕೊಟ್ಟಿದ್ದು, ಬೇಸ್ ಎಂದಿದ್ದಾರೆ. ಹಾಗಿದ್ರೆ ವಿಮರ್ಶಕರು ಏನಂದ್ರು?..[ವಿಮರ್ಶೆ: ಶೋಷಿತ ಸಮಾಜವನ್ನು 'ಶುದ್ಧಿ'ಕರಿಸುವ ಮಹಿಳೆಯ ನಿಗೂಢ ಪಯಣ]

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಶುದ್ಧಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ...

  ನಗರದ ಬದುಕಿಗೆ ಪಾತಾಳಗರಡಿ- ಪ್ರಜಾವಾಣಿ

  ದೆಹಲಿಯಲ್ಲಿ ನಡೆದ 'ನಿರ್ಭಯಾ ಅತ್ಯಾಚಾರ ಪ್ರಕರಣ, ಬೆಂಗಳೂರಿನಲ್ಲಿ ಎಟಿಎಂನಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ, ಕರಾವಳಿ ಭಾಗದಲ್ಲಿನ ನೈತಿಕ ಪೊಲೀಸ್ ಗಿರಿ - ಹೀಗೆ ಅನೇಕ ಗಂಭೀರ ಘಟನೆಗಳನ್ನು ಕಥೆಯ ಎಳೆಯಲ್ಲಿ ಜೋಡಿಸುವ ಪ್ರಯತ್ನದಲ್ಲಿ ನಿರ್ದೇಶಕರು ಬಹುಮಟ್ಟಿಗೆ ಸಫಲರಾಗಿದ್ದಾರೆ. ಸಂಕಲನಕಾರ ರಾಮಿಸೆಟ್ಟಿ ಪವನ್ ಚಳಕ ಎದ್ದು ಕಾಣುತ್ತದೆ. ಅಂತಿಮವಾಗಿ ಈ ತಂತ್ರವೂ ನಿರ್ದೇಶಕರ ಬುದ್ಧಿವಂತಿಕೆಯ ಪ್ರದರ್ಶನವಾಗಿ ಕಾಣುತ್ತದೆಯೇ ಹೊರತು, ಸಿನಿಮಾದ ಕಥನಕ್ಕೆ ಹೆಚ್ಚಿನದೇನನ್ನೂ ನೀಡುವುದಿಲ್ಲ. ಆಂಡ್ರು ಆಯಿಲೊ ಕ್ಯಾಮೆರಾ ಕೈಚಳಕ ಕೆಲವು ದೃಶ್ಯಗಳಲ್ಲಿ ತಲ್ಲಣಗೊಳಿಸುವಷ್ಟು ಶಕ್ತವಾಗಿದೆ. ಜೆಸ್ಸಿ ಕ್ಲಿಂಟನ್ ಸಂಗೀತ ಗಮನ ಸೆಳೆಯುವಂತಿದೆ. ಚಿತ್ರಕ್ಕೆ ಹೊಸಬರು ಮತ್ತು ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿರುವುದಕ್ಕೆ ನಿರ್ದೇಶಕರನ್ನು ಮೆಚ್ಚಬೇಕು. ಚಿತ್ರಕಥೆಯ ಭಾಗವಾಗಿ ಹೇರಳ ಇಂಗ್ಲಿಷ್ ಸಂಭಾಷಣೆ ಬಳಸಲಾಗಿದ್ದರೂ, ಕನ್ನಡದ ಸಬ್ ಟೈಟಲ್ ಕೊಡುವಷ್ಟು ಔದಾರ್ಯವನ್ನು ನಿರ್ದೇಶಕರು ತೋರಿಸಿಲ್ಲ.

  ಶುದ್ಧ ಸಮಾಜಕ್ಕೊಂದು ಶುದ್ಧಿ- ವಿಜಯ ಕರ್ನಾಟಕ

  ಚಿತ್ರದ ಸ್ಟೋರಿ ಉತ್ತಮವಾಗಿದೆ. ಅಲ್ಲದೆ 'ಜ್ಯುವೆನೈಲ್ ಜಸ್ಟಿಸ್ ಆಕ್ಟ್' ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮಾಡುವಂತಹ ಸನ್ನಿವೇಶ ಜಾಣ್ಮೆಯಿಂದಲೂ ಕೂಡಿದೆ. ಕ್ಲೈಮ್ಯಾಕ್ಸ್ ನಲ್ಲಿ ನೋಡುಗನನ್ನು ಸೀಟಿನ ತುದಿಗೆ ಕೂರಿಸುವಂತಹ ಪ್ರಯತ್ನದಲ್ಲಿ ಸಮರ್ಥವಾಗಿ ಗೆದ್ದಿದ್ದಾರೆ ನಿರ್ದೇಶಕ. ಗೆಳತಿಗಾದ ಶೋಷಣೆ ವಿರುದ್ಧ ಸೇಡು ತೀರಿಸಿಕೊಳ್ಳಲು ಸಾಗುವ ಎರಡು ವಿಭಿನ್ನ ಕಲಾಘಟ್ಟದ ಕಥೆ ಪ್ರೇಕ್ಷಕರನ್ನು ಕೊನೆವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಶಶಾಂಕ್ ಮತ್ತು ತಂಡದ ಅಭಿನಯ ಸಹ ಚೆನ್ನಾಗಿದೆ. ಹಿನ್ನೆಲೆ ಸಂಗೀತ ಮತ್ತು ಸಿನಿಮಾಟೋಗ್ರಾಫಿ ಇಡೀ ಸಿನಿಮಾವನ್ನು ಬೇರೆಯದೇ ಮೂಡ್ ಗೆ ಕರೆದೊಯ್ಯುತ್ತದೆ. ಸಿನಿಮಾ ತುಸು ದೀರ್ಘ ಎನಿಸಿದರು ಆ ಕತೆಯ ನಿಲುವು ಎಲ್ಲವೂ ಮೆಚ್ಚುವಂತಹದಾದ್ದರಿಂದ ಜನ ನೋಡಲೇಬೇಕಾದ ಸಿನಿಮಾವಾಗಿ ಶುದ್ಧಿ ಕಾಣುತ್ತದೆ.

  ವ್ಯವಸ್ಥೆಯ-ರಾಜಕೀಯ 'ಶುದ್ಧಿ'ಗಾಗಿ ಪ್ರತೀಕಾರದ ಪಯಣ- ಕನ್ನಡಪ್ರಭ

  ಸಿನೆಮಾ ವರ್ತಮಾನದ ಸಮಸ್ಯೆಗಳಿಗೆ ಕನ್ನಡಿ ಹಿಡಿದಿದ್ದು, ನಮ್ಮೆಲ್ಲರಿಗೂ ಪ್ರಶ್ನೆಗಳನ್ನು ಕೇಳುವಂತೆ-ಚರ್ಚಿಸುವಂತೆ ಚಿತಾವಣೆ ಮಾಡುತ್ತದೆ ಎಂಬುದಕ್ಕಾದರು, ನೋಡಿ ಬೆನ್ನುತಟ್ಟುವ ಅವಶ್ಯಕತೆ ಇದೆ. ಕಳೆದ ಐದಾರು ವರ್ಷಗಳಲ್ಲಿ ನಮ್ಮ ಕಣ್ಮುಂದೆ ಸರಿದು ಹೋದ ನಿಜ ಅಪರಾಧಗಳನ್ನು ಪೋಣಿಸುತ್ತಾ ಕಾಲ್ಪನಿಕ ರಾಜಕೀಯ-ಕ್ರೈಮ್ ಥ್ರಿಲ್ಲರ್ ಕಥೆ ಹೆಣೆದಿರುವ ನಿರ್ದೇಶಕ ಕೊನೆಯವರೆಗೂ ಪ್ರೇಕ್ಷಕನ ಕುತೂಹಲವನ್ನು ಕಾಯ್ದುಕೊಳ್ಳುತ್ತಾರೆ. ತಾಂತ್ರಿಕವಾಗಿ ಹೊಸ ತಂಡ ಹಲವು ಅಚ್ಚರಿಗಳನ್ನು ಮೂಡಿಸುತ್ತದೆ. ಶಬ್ದ ವಿನ್ಯಾಸ ಅದ್ಭುತವಾಗಿ ಮೂಡಿಬಂದಿದ್ದು, ಇಡೀ ಸಿನೆಮಾದ ಟೋನ್ ಅನ್ನು ಗಟ್ಟಿಯಾಗಿ ಹಿಡಿದಿಡುತ್ತದೆ. ಆದರೆ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಗಳನ್ನು ಜಾಣ್ಮೆಯಿಂದ ಒಗ್ಗೂಡಿಸಿರುವ ನಿರ್ದೇಶಕರು, ಕೊನೆಗೆ ನೀಡುವ ತೀರ್ಮಾನದಿಂದ ತುಸು ಗೊಂದಲವನ್ನು ನಿರ್ಮಿಸಿ ಉತ್ತರ ನೀಡುವುದು ಸೊಗಸಾಗಿ ಮೂಡಿಬಂದಿದೆ. ಎಲ್ಲರ ಪಾತ್ರಗಳು ಅಚ್ಚುಕಟ್ಟಾಗಿವೆ.

  ಹಲವು ಬಿಡಿಗಳ ಪರಿಶುದ್ಧ ಕಿಡಿ- ವಿಜಯವಾಣಿ

  ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ ಚಿತ್ರಿಸಿರುವುದು ನಿಜ ಜೀವನದಲ್ಲಿ ನಡೆದ ಹಲವು ಘಟನೆಗಳ ಕಾಲ್ಪನಿಕ ಪ್ರತಿಬಿಂಬ. ನೊಂದ ಹೆಣ್ಣಿನ ಕಣ್ಣೀರಿನ ಕಥೆಯನ್ನು ಎಲ್ಲಿಯೂ ವೈಭವೀಕರಿಸದೆ ಸೂಕ್ಷ್ಮವಾಗಿ ಸಂವೇದಿಸುವ ಗುಣದಿಂದಾಗಿ 'ಶುದ್ಧಿ' ಬೇರೆಲ್ಲ ಚಿತ್ರಗಳಿಗಿಂತಲೂ ವಿಭಿನ್ನ. ದೃಶ್ಯಗಳಲ್ಲಿ ಪ್ರೇಕ್ಷಕರಿಗೆ ಕೆಲವು ಕಡೆ ಗೊಂದಲ ಮೂಡಿಸುವ ನಿರ್ದೇಶಕರು, ಕ್ಲೈಮ್ಯಾಕ್ಸ್ ನಲ್ಲಿ ಉತ್ತರಿಸುತ್ತಾರೆ. ಮೇಕಿಂಗ್ ಯಾವುದೋ ಹಾಲಿವುಡ್ ಚಿತ್ರ ನೋಡಿದಂತೆ ಭಾಷವಾಗುತ್ತದೆ. ಎಲ್ಲರ ನಟನೆ ಸಹಜ ಮತ್ತು ಸುಂದರ. ಕ್ಲೈಮ್ಯಾಕ್ಸ್ ನ ಕೆಲವು ಶಾಟ್ ಗಳು ಕೊಂಚ ನಾಟಕೀಯ ಎನಿಸಿದರೂ ಅವು ಅಭಾಸವೇನಲ್ಲ. ಒಂದು ಕ್ಷಣವು ಬೇಸರ ಮೂಡಿಸದಂತೆ ಚಿತ್ರ ನೋಡಿಸಿಕೊಳ್ಳುತ್ತದೆ. ಶೀರ್ಷಿಕೆಗೆ ತಕ್ಕಂತೆಯೇ ನೋಡುಗನ ಮನಸ್ಥಿತಿಯನ್ನು ಶುದ್ಧಗೊಳಿಸುವ ಪ್ರಯತ್ನ ಚಿತ್ರದಲ್ಲಿದೆ.

  Shuddhi Movie Review- The Times Of India

  Shuddhi, made by debutant Adarsh H Eshwarappa, is a film that deals with a lot of sensitive issues affecting women. It could have easily become about over-the-top jingoism, but the makers have kept the drama and thriller aspects intact, ensuring one is left impacted by the message, without taking away the movie-watching experience. One would have wished the first half could have had a quicker pace, especially since the second half ensures you're more glued to the screen.There are some scenes that seem more for a theatre stage than a feature film. And maybe Kannada subtitles for the English conversations would help it reach the wider audience, especially since the film has presented as a Kannada feature film.

  'Shuddhi' Review: The effort is earnest but unconvincing - Indian Express

  Debutant Adarsh H Eshwarappa has done what few men dare to do, to slip out of their skin and into a woman's. Debutant Adarsh H Eshwarappa has done what few men dare to do, to slip out of their skin and into a woman's. The film's strength lies in the casting with artistes, Technically too. Shuddhi is a good attempt with Adarsh trying a cinematic treatment to real issues plaguing women. It is worth one watch but the revenge drama leaves a lot to desired.

  English summary
  Adarsh H Eshwarappa Directorial, Actress Niveditha Starrer Kannada Movie 'Shuddhi' has hit the screens Yesterday(March 17th). Here is the Critics review of 'Shuddhi' movie.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more