»   » ಸಿಂಪಲ್ಲಾಗಿ ಲವ್ ಸ್ಟೋರಿ: ನಾಯಕ ರಕ್ಷಿತ್ ಶೆಟ್ಟಿ ಸಂದರ್ಶನ

ಸಿಂಪಲ್ಲಾಗಿ ಲವ್ ಸ್ಟೋರಿ: ನಾಯಕ ರಕ್ಷಿತ್ ಶೆಟ್ಟಿ ಸಂದರ್ಶನ

Posted By:
Subscribe to Filmibeat Kannada

ಹೊಸಬರನ್ನು ಹಾಕಿಕೊಂಡು ಚಿತ್ರ ನಿರ್ಮಿಸುತ್ತಿರುವುದು ಕನ್ನಡದಲ್ಲಿ ಹೊಸತೇನಲ್ಲ. ಅದರಲ್ಲಿ ಗೆದ್ದ ಉದಾಹರಣೆಗಳು ಕಮ್ಮಿ. ಹಾಗಂತ ಪ್ರಯತ್ನ ನಿಂತಿಲ್ಲ, ನಿರಂತರ ಸಾಗುತ್ತಲೇ ಇದೆ, ಸಾಗುತ್ತಲೇ ಇರಲಿ. ಪ್ರಯತ್ನ ನಮ್ಮದು ಫಲಿತಾಂಶ ಅಭಿಮಾನಿ ದೇವರುಗಳದ್ದು ಎನ್ನುವ ಹಾಗೆ ಹೊಸ ಮುಖ, ಯುವ ಮುಖ, ಹೊಸ ಕಥೆಗಳು ಬರಲಿ, ಕನ್ನಡ ಚಿತ್ರರಂಗ ಬೆಳೆಯಲಿ.

ಸದ್ಯ ಕನ್ನಡ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಚಿತ್ರ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'. ಬಿಡುಗಡೆಗೆ ಮುನ್ನ ಅಷ್ಟೇನೂ ಹೈಪ್ ಇಲ್ಲದ ಈ ಚಿತ್ರ, ರಿಲೀಸ್ ಆದ ನಂತರ ಇಡೀ ಗಾಂಧಿನಗರ ಬೆಚ್ಚಿ ಬೀಳುವಂತೆ ಮಾಡಿದೆ. Good. ಕನ್ನಡ ಚಿತ್ರಗಳನ್ನು ಕಂಡರೆ ಒಂದು ಮೈಲಿಯಾಚೆ ಅನ್ನುತ್ತಿದ್ದ ಮಲ್ಟಿಪ್ಲೆಕ್ಷ್ ಗಳಿಗೆ ಈ ವರ್ಷ ಬಿಡುಗಡೆಗೊಂಡ ಕೆಲವು ಕನ್ನಡ ಚಿತ್ರಗಳು ಈಗಾಗಲೇ ಸೂಕ್ತ ಪಾಠ ಕಲಿಸಿವೆ. ಅದಕ್ಕೆ ಇನ್ನೊಂದು ಸೇರ್ಪಡೆ SOLS ( ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ). ಈ ಚಿತ್ರ ಯಾವ ಮಟ್ಟಿಗೆ ಕ್ರೇಜ್ ಹುಟ್ಟಿಸಿದೆ ಅಂದರೆ ಪಿವಿಆರ್ ಸಿನಿಮಾಸ್ country wide ರಿಲೀಸಿಗೆ ಮುಂದೆ ಬಂದಿದೆ.

ಒನ್ ಇಂಡಿಯಾ ಮತ್ತು ನಮ್ಮ ಓದುಗರ ಪರವಾಗಿ SOLS ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಸಂದರ್ಶನ ನಡೆಸಿದವರು ಬಾಲರಾಜ್ ತಂತ್ರಿ.

ಪ್ರ: ಚಿತ್ರ ಸೆಟ್ಟೇರುವ ಮುನ್ನ ಯಾವ ರೀತಿ ತಯಾರಿ ನಡೆದಿತ್ತು? ನಿರ್ದೇಶಕರ ಪರಿಚಯ ಇತ್ತೇ?
ರಕ್ಷಿತ್: ನಿರ್ದೇಶಕರ ಪರಿಚಯ ನನಗಿರಲಿಲ್ಲ. ತುಗ್ಲಕ್ ಚಿತ್ರದ ನಂತರ ಒಳ್ಳೆ ಸಬ್ಜೆಕ್ಟಿಗೆ ಕಾಯಿತ್ತಿದ್ದೆ. ಆ ಟೈಮಿನಲ್ಲಿ ಈ ಸ್ಟೋರಿ ಬಂತು. ತುಂಬಾ ಇಷ್ಟ ಪಟ್ಟು ಈ ಚಿತ್ರ ಮಾಡಿದ್ದೇನೆ.

ಪ್ರ: ಡೈಲಾಗಿನಲ್ಲಿ ಚಿತ್ರವನ್ನು ಗೆಲ್ಲಿಸುವುದು ಸುಲಭದ ಮಾತಲ್ಲ, ಅದರಲ್ಲಿ ಈ ವರೆಗೆ ಯಶಸ್ಸು ಕಂಡಿದ್ದು ಭಟ್ರು ಮತ್ತು ಗುರುಪ್ರಸಾದ್. ನಿಮ್ಮ ಚಿತ್ರ ಗೆದ್ದಿದೆ. ಈ ಬಗ್ಗೆ?
ರಕ್ಷಿತ್: ನಮ್ಮ ಚಿತ್ರದಲ್ಲಿ ಡೈಲಾಗ್ ಪ್ರಮುಖವಾಗಿದ್ದರೂ ಇದು ಡೈಲಾಗ್ ಓರಿಯಂಟೆಡ್ ಚಿತ್ರವಲ್ಲ. ಚಿತ್ರದಲ್ಲಿ ಸಂದೇಶವಿದೆ.

ರಕ್ಷಿತ್ ಡಬ್ಬಿಂಗ್ ಬಗ್ಗೆ, ಕರಾವಳಿ ಕರ್ನಾಟಕದ ಭಾಗದವರಿಗೆ ಹಿಂದಿ ವ್ಯಾಮೋಹದ ಬಗ್ಗೆ ಏನಂದರು. ಸ್ಲೈಡಿನಲ್ಲಿ

ರಕ್ಷಿತ್ ಸಂದರ್ಶನದ ಆಯ್ದ ಭಾಗ

ಪ್ರ: ಚಿತ್ರ ಬಿಡುಗಡೆಗೆ ಸಿದ್ದವಾದಾಗ ಚಿತ್ರ ಪ್ರದರ್ಶನಕ್ಕೆ ಚಿತ್ರರಂಗದ ಮಾಲೀಕರ ರಿಯಾಕ್ಷನ್ ಹೇಗಿತ್ತು? ಥಿಯೇಟರ್ ಪ್ರಾಬ್ಲಂ ಫೇಸ್ ಮಾಡ ಬೇಕಾಯಿತಾ?

ರಕ್ಷಿತ್: Obviously. ಮೈನ್ ಥಿಯೇಟರಿನಿಂದ ಹಿಡಿದು ಮಲ್ಟಿಪ್ಲೆಕ್ಷ್ ತನಕ ಎಲ್ಲಾ ಕಡೆ ಪ್ರಾಬ್ಲಂ ಫೇಸ್ ಮಾಡಿದ್ವಿ. ಈಗ ಎಲ್ಲರೂ ನಮ್ಮ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಿ ಅನ್ನುತ್ತಿದ್ದಾರೆ. ಆದರೆ ನಾವು ಸೌಂಡ್ ಕ್ವಾಲಿಟಿ ಚೆನ್ನಾಗಿರುವ ಥಿಯೇಟರುಗಳಲ್ಲಿ ಮಾತ್ರ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.

ರಕ್ಷಿತ್ ಸಂದರ್ಶನದ ಆಯ್ದ ಭಾಗ

ಪ್ರ: ನಿಮ್ಮ ಮುಂದಿನ ಪ್ರಾಜೆಕ್ಟ್?

ರಕ್ಷಿತ್: 'ಉಳಿದವರು ಕಂಡಂತೆ' ಇದು ನನ್ನ ಮುಂದಿನ ಚಿತ್ರ. ಚಿತ್ರದ ಹೀರೋ ಮತ್ತು ನಿರ್ದೇಶಕ ನಾನೇ..

ರಕ್ಷಿತ್ ಸಂದರ್ಶನದ ಆಯ್ದ ಭಾಗ

ಪ್ರ: ಕನ್ನಡ ಚಿತ್ರಗಳು ಕರಾವಳಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಓಡುವುದಿಲ್ಲ, ಕರಾವಳಿಯ ಜನರಿಗೆ ಹಿಂದಿ ಮೇಲೆ ವ್ಯಾಮೋಹ ಜಾಸ್ತಿ ಅನ್ನೋ ಒಟ್ಟಾರೆ ಅಭಿಪ್ರಾಯವಿದೆ. ನೀವು ಕರಾವಳಿ ಭಾಗದವರು ಈ ಬಗ್ಗೆ ಏನಂತೀರಾ?

ರಕ್ಷಿತ್: No, I will not agree with this. ನಮ್ಮಲ್ಲಿ ಬರುವ ಹೆಚ್ಚಿನ ಚಿತ್ರಗಳು ಬೆಂಗಳೂರು ಅಥವಾ ಮೈಸೂರು ನಗರದ ಬಗ್ಗೆ ಕೇಂದ್ರೀಕೃತವಾಗಿರುತ್ತದೆ. ಇದು ಮೊದಲು ಬದಲಾಗಬೇಕು. ಮಂಗಳೂರು ಕನ್ನಡವೆಂದರೆ ಹಾಸ್ಯ ಸನ್ನಿವೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕನ್ನಡವೆಂದರೆ ಬರೀ ಬೆಂಗಳೂರು, ಮೈಸೂರಲ್ಲ. ಕರಾವಳಿ ಭಾಗದ ಸನ್ನಿವೇಶಗಳನ್ನು ಬಳಸಿಕೊಂಡು ಚಿತ್ರ ನಿರ್ಮಾಣವಾಗಬೇಕು. ಬಹಳಷ್ಟು ಕನ್ನಡ ಚಿತ್ರಗಳು ಮಂಗಳೂರು ಮತ್ತು ಉಡುಪಿಯಲ್ಲಿ ಗೆದ್ದಿವೆ. ಸುಮ್ಮನೆ ನಮ್ಮ ಭಾಗದವರ ಮೇಲೆ ಈ ಆಪಾದನೆ ಸಲ್ಲದು.

ರಕ್ಷಿತ್ ಸಂದರ್ಶನದ ಆಯ್ದ ಭಾಗ

ಪ್ರ: ಡಬ್ಬಿಂಗ್ ಬಗ್ಗೆ ನಿಮ್ಮ ನಿಲುವೇನು?

ರಕ್ಷಿತ್: ಡಬ್ಬಿಂಗ್ ಬೇಕು, ಬೇಡ ಎನ್ನುವ ದ್ವಂದ್ವ ನಿಲುವಿನಲ್ಲಿದ್ದೇನೆ. ಉದಾಹರಣೆಗೆ ವಿಶ್ವರೂಪಂ ಚಿತ್ರ ರಾಜ್ಯದ ಐವತ್ತು ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಕನ್ನಡದಲ್ಲೂ ಬಿಡುಗಡೆಯಾಗಿದ್ದರೆ ನಮ್ಮವರೂ ಕನ್ನಡದಲ್ಲೇ ನೋಡಬಹುದಾಗಿತ್ತು ಎನ್ನುವುದು ಒಂದು ನಿಲುವಾದರೆ, ಇದರಿಂದ ನಮ್ಮ ಸಿನಿ ಕಾರ್ಮಿಕರಿಗೆ ತೊಂದರೆ ಆಗುತ್ತದೆ ಎನ್ನುವುದು ನನ್ನ ಇನ್ನೊಂದು ನಿಲುವು.

ರಕ್ಷಿತ್ ಸಂದರ್ಶನದ ಆಯ್ದ ಭಾಗ

ಪ್ರ: ಕನ್ನಡದವರಿಗೆ ಚಿತ್ರ ಪ್ರಚಾರ ಮಾಡೋಕೆ ಬರಲ್ವಾ?

ರಕ್ಷಿತ್: ಇದು ನಿರ್ಮಾಪಕರ ತಪ್ಪು. ಸರಿಯಾದ ಪ್ಲಾನ್ ಇಲ್ಲದೇ ಇದ್ದರೆ ಯಾವ ಚಿತ್ರಕ್ಕೂ ಪ್ರಚಾರ ನೀಡಲಾಗುವುದಿಲ್ಲ. ತಮಿಳು ಮತ್ತು ತೆಲುಗಿನವರಿಗೆ ಹೋಲಿಸಿದರೆ ನಾವು way... behind.

ರಕ್ಷಿತ್ ಸಂದರ್ಶನದ ಆಯ್ದ ಭಾಗ

ಪ್ರ:ಕನ್ನಡ ಚಿತ್ರಗಳು ರೀಸೆಂಟ್ ಡೇಸ್ ನಲ್ಲಿ ಒಂದು ಉತ್ತಮ ಪ್ರದರ್ಶನ ನೀಡುತ್ತಿವೆ. ಈ ಬಗ್ಗೆ?

ರಕ್ಷಿತ್: ಇದು ನಾವೆಲ್ಲಾ ಸಂತೋಷ ಪಡುವ ವಿಚಾರ. ಒಂದಂತೂ ಸತ್ಯ, ಒಳ್ಳೆ ಚಿತ್ರಗಳು ನಮ್ಮಲ್ಲಿ ಪ್ಲಾಫ್ ಆದರೆ ಉದಾಹರಣೆ ಕಮ್ಮಿ. ಹೊಸಬರು, ಹೊಸ ಕಥೆ, ಹೊಸತನ ಇದಕ್ಕೆ ಕಾರಣ.

English summary
Simple Aagond Love Story movie created good hype in Kannada Box office. Here is film hero Rakshit Shetty interview, interview taken by Balaraj Tantry
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada