For Quick Alerts
  ALLOW NOTIFICATIONS  
  For Daily Alerts

  ರಮ್ಯಾ-ಪ್ರಜ್ವಲ್ ಅಭಿನಯದ 'ದಿಲ್ ಕಾ ರಾಜ' ಬಗ್ಗೆ ಹೊಸ ಅಪ್‌ಡೇಟ್ ಕೊಟ್ಟ ನಿರ್ದೇಶಕ: ಏನದು?

  |

  ಮೋಹಕತಾರೆ ರಮ್ಯಾ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ 'ದಿಲ್ ಕಾ ರಾಜ' ಸಿನಿಮಾ ಮತ್ತೆ ಆರಂಭ ಆಗುತ್ತಿರೋ ಬಗ್ಗೆ ಫಿಲ್ಮಿಬೀಟ್‌ನಲ್ಲಿ ವರದಿಯಾಗಿತ್ತು. ಎಂಟೊಂಬತ್ತು ವರ್ಷಗಳ ಹಿಂದೆ ನಿಂತು ಹೋಗಿದ್ದ ಸಿನಿಮಾ ಮತ್ತೆ ಟೇಕಾಫ್ ಆಗುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು. ಈಗ ಈ ಸಿನಿಮಾ ಬಗ್ಗೆ ನಿರ್ದೇಶಕರು ಹೊಸ ಅಪ್‌ಡೇಟ್ ಕೊಟ್ಟಿದ್ದಾರೆ.

  ಹೆಚ್ಚು ಕಡಿಮೆ 9 ವರ್ಷಗಳ ಹಿಂದೆ ಸೆಟ್ಟೇರಿದ್ದ 'ದಿಲ್ ಕಾ ರಾಜ' ಅಂದು ಕ್ರೇಜ್ ಹುಟ್ಟಾಕಿತ್ತು. ಇದಕ್ಕೆ ಕಾರಣ ರಮ್ಯಾ ಹಾಗೂ ಪ್ರಜ್ವಲ್ ದೇವರಾಜ್‌ ಕಾಂಬಿನೇಷನ್. ಆಗ ಸ್ಯಾಂಡಲ್‌ವುಡ್‌ಗೆ ಈ ಕಾಂಬಿನೇಷನ್ ಹೊಸದೇನಿಸಿತ್ತು. ಈ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಿನಿಪ್ರಿಯರು ಈ ಕಾಂಬಿನೇಷನ್‌ ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದು ನಿಜ. ಆದರೆ, ಅವರ ಆಸೆ ಮಾತ್ರ ಈಡೇರಿಲಿಲ್ಲ.

  ಈಗ 'ದಿಲ್ ಕಾ ರಾಜ' ಮತ್ತೆ ಆರಂಭ ಆಗುತ್ತಿದೆ. ಈಗಾಗಲೇ ಸಿನಿಮಾ ಟೇಕಾಫ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನೂ ನಿರ್ದೇಶಕ ಸೋಮನಾಥ್ ಪಾಟೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ-ಪ್ರಜ್ವಲ್ ಇರುತ್ತಾರಾ? ಇಲ್ಲಾ ಹೊಸ ಕಲಾವಿದರೊಂದಿಗೆ ಸಿನಿಮಾ ಮಾಡುತ್ತಾರಾ? ಅನ್ನೋ ಗೊಂದಲವಿದೆ. ಅದಕ್ಕೆ ನಿರ್ದೇಶಕ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  ರಮ್ಯಾ-ಪ್ರಜ್ವಲ್ ಈ ಸಿನಿಮಾದಲ್ಲಿ ಇರುತ್ತಾರಾ?

  ರಮ್ಯಾ-ಪ್ರಜ್ವಲ್ ಈ ಸಿನಿಮಾದಲ್ಲಿ ಇರುತ್ತಾರಾ?

  'ದಿಲ್ ಕಾ ರಾಜ' ಮತ್ತೆ ಆರಂಭ ಆಗುತ್ತಿದೆ ಅನ್ನೋ ಸುದ್ದಿ ಹೊರಬಿದ್ದಿದ್ದಾಗ ಒಂದಿಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ರಮ್ಯಾ ಹಾಗೂ ಪ್ರಜ್ವಲ್ ಇಬ್ಬರೂ ಬಿಟ್ಟು ಹೊಸದಾಗಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಅದಕ್ಕೆ ಮತ್ತೊಂದು ನಿರ್ದೇಶಕರು ಕ್ಲಾರಿಟಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಈಗಾಗಲೇ ಶೂಟ್ ಮಾಡಿದ ದೃಶ್ಯಗಳನ್ನು ಇಟ್ಟುಕೊಂಡೇ ಸಿನಿಮಾವನ್ನು ಮುಂದುವರೆಸುವುದಾಗಿ ಮಾಹಿತಿ ನೀಡಿದ್ದಾರೆ.

  Exclusive: ಅರ್ಧಕ್ಕೆ ನಿಂತ ಸಿನಿಮಾ ಮರೆತ ರಮ್ಯಾ, ಮೋಹಕ ತಾರೆ ಕೈ ಬಿಟ್ಟ ಸಿನಿಮಾ ಕಥೆಯೇನು?Exclusive: ಅರ್ಧಕ್ಕೆ ನಿಂತ ಸಿನಿಮಾ ಮರೆತ ರಮ್ಯಾ, ಮೋಹಕ ತಾರೆ ಕೈ ಬಿಟ್ಟ ಸಿನಿಮಾ ಕಥೆಯೇನು?

  'ದಿಲ್ ಕಾ ರಾಜ' ನಿರ್ದೇಶಕರು ಹೇಳಿದ್ದೇನು?

  'ದಿಲ್ ಕಾ ರಾಜ' ನಿರ್ದೇಶಕರು ಹೇಳಿದ್ದೇನು?

  " ಸಿನಿಮಾವನ್ನು ಮತ್ತೆ ಶುರು ಮಾಡುತ್ತಿದ್ದೇನೆ. ಈ ಸುದ್ದಿ ಹೊರಬಂದ ಕೂಡಲೇ ಎಲ್ಲರೂ ಹೊಸದಾಗಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದೀರಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಹೊಸದಾಗಿ ಶೂಟಿಂಗ್ ಮಾಡುತ್ತಿಲ್ಲ. ಈಗಾಗಲೇ ಸಿನಿಮಾದ ಶೇ.75ರಷ್ಟು ಶೂಟಿಂಗ್ ಮುಗಿದಿದೆ. ಬಾಕಿ ಉಳಿದ 25 ಭಾಗದ ಚಿತ್ರೀಕರಣಕ್ಕೆ ಬೇರೆ ಹೊಸ ಸ್ಕ್ರೀನ್ ಪ್ಲೇ ಮಾಡಿದ್ದೇನೆ. ಅದನ್ನು ಮಾತ್ರ ಶೂಟ್ ಮಾಡಿ ಸಿನಿಮಾ ಮುಗಿಸುತ್ತೇನೆ. ಈ ಸಿನಿಮಾದಲ್ಲಿ ರಮ್ಯಾ ಹಾಗೂ ಪ್ರಜ್ವಲ್ ಇಬ್ಬರೂ ಇರುತ್ತಾರೆ." ಅಂತ ಸ್ಪಷ್ಟತೆ ನೀಡಿದ್ದಾರೆ.

  'ಸಿನಿಮಾ ಪೂರ್ತಿ ರಮ್ಯಾ-ಪ್ರಜ್ವಲ್ ಇರ್ತಾರೆ'

  'ಸಿನಿಮಾ ಪೂರ್ತಿ ರಮ್ಯಾ-ಪ್ರಜ್ವಲ್ ಇರ್ತಾರೆ'

  " ದಿಲ್ ಕಾ ರಾಜ ಸಿನಿಮಾದ ಪ್ರಿ ಕ್ಲೈಮ್ಯಾಕ್ಸ್‌ವರೆಗೂ ರಮ್ಯಾ ಹಾಗೂ ಪ್ರಜ್ವಲ್ ಇರುತ್ತಾರೆ. ಇಂಟರ್‌ವಲ್ ಬ್ಲಾಕ್‌ನಲ್ಲೂ ರಮ್ಯಾ ಪ್ರಜ್ವಲ್ ಇರುತ್ತಾರೆ. ಆದರೆ, ಮಧ್ಯೆದಲ್ಲಿ ಕೊನೆಯ ಭಾಗದಲ್ಲಿ ಕೆಲವು ಸೀನ್‌ಗಳ ಶೂಟಿಂಗ್ ಬಾಕಿ ಇತ್ತು. ಅದನ್ನು ಶೂಟ್ ಮಾಡಬೇಕು ಅನ್ನುವಷ್ಟರಲ್ಲಿ ಸಿನಿಮಾ ನಿಂತು ಹೋಗಿತ್ತು. ಆ ಜಾಗಕ್ಕೆ ಹೊಸದಾಗಿ ಸ್ಕ್ರೀನ್ ಪ್ಲೇ ಮಾಡಿ ಸಿನಿಮಾ ಕಂಪ್ಲೀಟ್ ಮಾಡುತ್ತೇನೆ. ಸದ್ಯಕ್ಕೆ ಎಲ್ಲಾ ಸಿದ್ಧತೆಗಳು ಮುಗಿದಿವೆ. ಶೀಘ್ರವೇ ಮಾಹಿತಿ ನೀಡುತ್ತಿದೆ. ಆದರೆ, ಹೊಸದಾಗಿ ಮತ್ತೆ ಶೂಟ್ ಮಾಡುತ್ತಿಲ್ಲ.

  'ರಮ್ಯಾ-ಪ್ರಜ್ವಲ್ ಇಬ್ಬರೂ ಬದಲಾಗಿದ್ದಾರೆ'

  'ರಮ್ಯಾ-ಪ್ರಜ್ವಲ್ ಇಬ್ಬರೂ ಬದಲಾಗಿದ್ದಾರೆ'

  " ಎಂಟು ವರ್ಷಗಳ ಹಿಂದೆ ರಮ್ಯಾ ಹಾಗೂ ಪ್ರಜ್ವಲ್ ಇದ್ದಿದ್ದಕ್ಕೂ, ಈಗ ಇರುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಹಾಗಾಗಿ ಈಗ ಶೂಟ್ ಮಾಡಲು ಹೊರಟಿರುವ ದೃಶ್ಯಗಳಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಹಾಗಾಗಿ ಬೇರೆಯೇನೋ ಪ್ಲ್ಯಾನ್ ಮಾಡಿ ಶೂಟಿಂಗ್ ಮಾಡಲು ಹೊರಟಿದ್ದೇನೆ. ಇಡೀ ಸಿನಿಮಾದಲ್ಲಿ ರಮ್ಯಾ ಹಾಗೂ ಪ್ರಜ್ವಲ್ ಇಬ್ಬರೂ ಅತೀ ಸುಂದರವಾಗಿ ಕಾಣುತ್ತಾರೆ. ಅಲ್ಲದೆ ಸಿನಿಮಾದಲ್ಲಿ 5 ಹಾಡುಗಳಿದ್ದು, ಚಿತ್ರೀಕರಣ ಮಾಡಲಾಗುತ್ತೆ." ಎನ್ನುತ್ತಾರೆ

  English summary
  Somanth Patil Updated About Ramya Prajwal Starrer Dil Ka Raja Movie, Know More.
  Sunday, October 16, 2022, 17:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X