»   » ದುನಿಯಾ ಸೂರಿಯ ಸುಕ್ಕಾ 'ಕಡ್ಡಿಪುಡಿ' ಯಶಸ್ಸಿನ ಕಥೆ

ದುನಿಯಾ ಸೂರಿಯ ಸುಕ್ಕಾ 'ಕಡ್ಡಿಪುಡಿ' ಯಶಸ್ಸಿನ ಕಥೆ

Posted By:
Subscribe to Filmibeat Kannada

ಸೇಫ್ ಗೇಂ ಆಡೋಕೆ ನನಗೆ ಇಷ್ಟವಿಲ್ಲ, ನಾನು ಏನಿದ್ದರೂ ರಿಸ್ಕ್ ತೆಗೆದುಕೊಂಡೇ ಫಿಲಂ ಮಾಡೋದು. ಅದು ನನ್ನ ಮೊದಲ ದುನಿಯಾ ಚಿತ್ರವಿರಲಿ, ಕಡ್ಡಿಪುಡಿ ಚಿತ್ರವಿರಲಿ ಎನ್ನುತ್ತಾರೆ ನಿರ್ದೇಶಕ ದುನಿಯಾ ಸೂರಿ.

ಚಿತ್ರಕ್ಕೆ ಸ್ಕ್ರಿಪ್ಟ್, ಚಿತ್ರಕಥೆ ಬರೆದು ನಿರ್ಮಾಪಕರಿಗೆ ವಿವರಿಸುತ್ತಿದ್ದ ಸಮಯದಲ್ಲೇ ನಾನು ಇದೊಂದು ಡ್ರೈ format ಚಿತ್ರ. ಚಿತ್ರ ಗೆಲ್ಲುತ್ತೆ ಅನ್ನೋ ಗ್ಯಾರಂಟಿ ಕೊಡೋಕಾಗಲ್ಲಾ ಎಂದು ಮೊದಲೇ ನಿರ್ಮಾಪಕರಿಗೆ ತಿಳಿಸಿದ್ದೆ.

ಆದರೂ ನಿರ್ಮಾಪಕರಾದ ಚಂದ್ರು ಎಲ್ಲೂ ಕೊರತೆ ಬರದ ಹಾಗೆ ಚಿತ್ರಕ್ಕೆ ಹಣ ಒದಗಿಸಿದ್ದಾರೆ. ಕಥೆ, ಚಿತ್ರಕಥೆಯ ವಿಚಾರದಲ್ಲಿ ಎಲ್ಲೂ ಮೂಗು ತೂರಿಸಲು ಬಂದಿಲ್ಲ ಎಂದು ಸೂರಿ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ನಮ್ಮ ವರದಿಗಾರರು ನಡೆಸಿದ ಸಂದರ್ಶನದ ಸಮಯದಲ್ಲಿ ಕೂಡಾ ಸೂರಿ ಚಿತ್ರ ಗೆಲ್ಲುವ ಬಗ್ಗೆ confident ಆಗಿದ್ದರು. (ದುನಿಯಾ ಸೂರಿ ಸಂದರ್ಶನ)

ಶಿವರಾಜ್ ಕುಮಾರ್, ರಾಧಿಕಾ ಪಂಡಿತ್, ರಂಗಾಯಣ ರಘು ಪ್ರಮುಖ ಭೂಮಿಕೆಯಲ್ಲಿರುವ ಕಡ್ಡಿಪುಡಿ ಚಿತ್ರಕ್ಕೆ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಗುತ್ತಿದೆ. ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಭಾಗದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ಮೊದಲ ವಾರದ ಗಳಿಗೆ ಎಷ್ಟು ಮುಂದೆ ಓದಿ..

ಬಿಕೆಟಿ ಪ್ರಾಂತ್ಯದಲ್ಲಿ ಕಡ್ಡಿಪುಡಿ

ಕಲಾತ್ಮಕವಾಗಿ ಚಿತ್ರವನ್ನು ತೆಗೆದು ಅದಕ್ಕೆ ಕಮರ್ಶಿಯಲ್ ಟಚ್ ನೀಡಿದ ಸೂರಿ ನಿರ್ದೇಶನಕ್ಕೆ ಸಿನಿಪ್ರಿಯರು ಬೆನ್ನುತಟ್ಟಿದ್ದಾರೆ. ಕುಟುಂಬ ಸಮೇತವಾಗಿ ಚಿತ್ರ ವೀಕ್ಷಣೆಗೆ ಜನ ಬರುತ್ತಿದ್ದಾರೆ ಎನ್ನುತ್ತಾರೆ ಚಿತ್ರ ಪ್ರದರ್ಶನ ಮಾಡುತ್ತಿರುವ ಈಶ್ವರಿ ಚಿತ್ರಮಂದಿರದ ಸಿಬ್ಬಂದಿಗಳು.

ಕಡ್ಡಿಪುಡಿ ಮೊದಲ ವಾರದ ಗಳಿಕೆ

ಚಿತ್ರದ ರಾಜ್ಯಾದ್ಯಂತ ಹಂಚಿಕೆದಾರರಾಗಿರುವ ಮೋಹನ್ ಒನ್ ಇಂಡಿಯಾ ಕನ್ನಡಕ್ಕೆ ನೀಡಿರುವ ಗಲ್ಲಾಪೆಟ್ಟಿಗೆ ವರದಿ ಪ್ರಕಾರ ಬಿಡುಗಡೆಯಾದ ಮೊದಲ ವಾರಾಂತಕ್ಕೆ ಚಿತ್ರದ ಗಳಿಕೆ ಚೆನ್ನಾಗಿತ್ತು.

ಕಡ್ಡಿಪುಡಿ ಮೊದಲ ವಾರದ ಗಳಿಕೆ

ಮೊದಲ ವಾರದಲ್ಲಿ ಚಿತ್ರಕ್ಕೆ ಒಟ್ಟು ಐದು ಕೋಟಿ ಕಲೆಕ್ಷನ್ ಆಗಿದೆ. ಥಿಯೇಟರ್ ಶೇರ್ ಕಳೆದರೆ ನನ್ನ ಗಳಿಗೆ ಮೊದಲ ವಾರದಲ್ಲಿ ಮೂರು ಕೋಟಿ. ಬಿಕೆಟಿ ಪ್ರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ ಚೆನ್ನಾಗಿದೆ.

ಕಡ್ಡಿಪುಡಿ ಹಂಚಿಕೆದಾರರ ಅಭಿಪ್ರಾಯ

ಕರಾವಳಿ ಮತ್ತು ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಮುಂಗಾರು ವಿಪರೀತ ವಾಗಿರುವುದರಿಂದ ಕಲೆಕ್ಷನ್ ನಲ್ಲಿ ಸ್ವಲ್ಪ ಹಿನ್ನಡೆಯಾಗುತ್ತಿದೆ.

ಕಡ್ಡಿಪುಡಿ ಎರಡನೇ ವಾರ

ನಿಮ್ಮ ಅದ್ಭುತ ಪ್ರತಿಸ್ಪಂದನಕ್ಕೆ ನಾವು ಖುಣಿ. ಈ ಖುಣ ಹೀಗೆ ಇರಲಿ ಎಂದು ಚಿತ್ರ ತಂಡ ಜಾಹೀರಾತು ನೀಡಿದೆ. ರಾಧನಗಂಡ ಮತ್ತು ಮಹಾನದಿ ಚಿತ್ರ ಬಿಡುಗಡೆಯಾಗಿರುವುದರಿಂದ ಕೆಲ ಚಿತ್ರಮಂದಿರಗಳು ಆ ಚಿತ್ರಗಳನ್ನು ಪ್ರದರ್ಶಿಸುತ್ತಿವೆ.

ಕಡ್ಡಿಪುಡಿ

ಬಿಕೆಟಿ ಪ್ರಾಂತ್ಯದ 36 ಚಿತ್ರಮಂದಿರಗಳಲ್ಲಿ ಚಿತ್ರ ಎರಡನೇ ವಾರ ಮುಂದುವರಿದಿದೆ. ಒಟ್ಟು ರಾಜ್ಯಾದ್ಯಂತ 110 ಚಿತ್ರಮಂದಿರಗಳಲ್ಲಿ ಕಡ್ಡಿಪುಡಿ ಎರಡನೇ ವಾರ ಪ್ರದರ್ಶನ ಕಾಣುತ್ತಿದೆ.

English summary
Duniya Soori and Shivraj Kumar combination "Kaddipudi" box office report given by movie distributor.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada