»   » ಶ್ರೀನಗರ ಕಿಟ್ಟಿ 'ಸಿಲಿಕಾನ್ ಸಿಟಿ' ತೆರೆಗೆ ಬರಲು ರೆಡಿ: ರಿಲೀಸ್ ಯಾವಾಗ?

ಶ್ರೀನಗರ ಕಿಟ್ಟಿ 'ಸಿಲಿಕಾನ್ ಸಿಟಿ' ತೆರೆಗೆ ಬರಲು ರೆಡಿ: ರಿಲೀಸ್ ಯಾವಾಗ?

Posted By:
Subscribe to Filmibeat Kannada

ಮೂರು ವರ್ಷಗಳ ನಂತರ ಮತ್ತೆ ನಾಯಕ ನಟನಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿರುವ 'ಸಿಲಿಕಾನ್ ಸಿಟಿ' ಚಿತ್ರತಂಡ ಇತ್ತೀಚಿಗೆ ಆಡಿಯೋ ಬಿಡುಗಡೆ ಮಾಡಿ ಸಿಲಿಕಾನ್ ಸಿಟಿಯಲ್ಲಿ ಸದ್ದು ಮಾಡಿತ್ತು. ಈಗ ಚಿತ್ರ ತೆರೆಬರಲು ಸಿದ್ದವಾಗಿದೆ.[ಬೆಳ್ಳಿತೆರೆಯ ಬಿಗ್ ಸ್ಟಾರ್ ಗಳಿಂದ 'ಸಿಲಿಕಾನ್ ಸಿಟಿ' ಆಡಿಯೋ ರಿಲೀಸ್]

'ಸಿಲಿಕಾನ್ ಸಿಟಿ' ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿದ್ದು, ಜೂನ್ 16 ರಂದು ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅಂದಹಾಗೆ ಈ ಸಿನಿಮಾ ತಮಿಳಿನ 'ಮೆಟ್ರೋ' ಸಿನಿಮಾದ ರಿಮೇಕ್ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆ ಬರೆದು ಮುರಳಿ ಗುರಪ್ಪ ಎಂಬುವವರು ನಿರ್ದೇಶನ ಮಾಡಿದ್ದಾರೆ.

Srinagar Kitty starrer 'Silicon City' movie releasing on june 16th

ಶ್ರೀನಗರ ಕಿಟ್ಟಿ ಅಭಿನಯದ 'ಸಿಲಿಕಾನ್ ಸಿಟಿ' ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಚಿತ್ರವಾಗಿದ್ದು, 'ಇಷ್ಟಕಾಮ್ಯ' ಮತ್ತು 'ಸ್ಮೈಲ್ ಪ್ಲೀಸ್' ಖ್ಯಾತಿಯ ನಟಿ ಕಾವ್ಯ ಶೆಟ್ಟಿ ರವರು ಶ್ರೀನಗರ ಕಿಟ್ಟಿಗೆ ಜೊತೆಯಾಗಿ ನಟಿಸಿದ್ದಾರೆ. ಅಲ್ಲದೇ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಖ್ಯಾತಿಯ ನಟ ಸೂರಜ್ ಗೌಡ ಮತ್ತು ಚಿಕ್ಕಣ್ಣ ಸೇರಿದಂತೆ ಹಲವರ ತಾರಾಬಳಗ ಚಿತ್ರದಲ್ಲಿದೆ.['ಸಿಲಿಕಾನ್ ಸಿಟಿ'ಯಲ್ಲಿ ಕ್ರೈಮ್ ಮಾಡುತ್ತಿದ್ದಾರೆ ಶ್ರೀನಗರ ಕಿಟ್ಟಿ]

ಮುರಳಿ ಗುರಪ್ಪ ನಿರ್ದೇಶನದ ಈ ಚಿತ್ರವನ್ನು ಮಂಜುಳ ಸೋಮಶೇಖರ್, ಎಂ ರವಿ, ಸಿ.ಆರ್.ಸುರೇಶ್, ಶ್ರೀನಗರ ಕಿಟ್ಟಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.

English summary
Kannada Actor Srinagar Kitty starrer 'Silicon City' movie all set to release on june 16th. The Movie is directed by Murali Gurappa, features Suraj Gowda and Chikkanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada