»   » ಬೆಳ್ಳಿತೆರೆಯ ಬಿಗ್ ಸ್ಟಾರ್ ಗಳಿಂದ 'ಸಿಲಿಕಾನ್ ಸಿಟಿ' ಆಡಿಯೋ ರಿಲೀಸ್

ಬೆಳ್ಳಿತೆರೆಯ ಬಿಗ್ ಸ್ಟಾರ್ ಗಳಿಂದ 'ಸಿಲಿಕಾನ್ ಸಿಟಿ' ಆಡಿಯೋ ರಿಲೀಸ್

Posted By:
Subscribe to Filmibeat Kannada

'ಬಹುಪರಾಕ್' ಚಿತ್ರದ ನಂತರ ಕೇವಲ ಗೆಸ್ಟ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಗರ ಕಿಟ್ಟಿ ಈಗ 'ಸಿಲಿಕಾನ್ ಸಿಟಿ'ಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಮೂರು ವರ್ಷಗಳ ನಂತರ ನಾಯಕನ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸಿರುವ 'ಸಿಲಿಕಾನ್ ಸಿಟಿ' ಚಿತ್ರ ಇತ್ತೀಚೆಗೆ ತಾನೆ ಚಿತ್ರೀಕರಣ ಮಗಿಸಿತ್ತು. ಇಂದು(ಮಾರ್ಚ್ 10) ಚಿತ್ರತಂಡ ಈ ಸಿನಿಮಾ ಆಡಿಯೋ ರಿಲೀಸ್ ಬಿಡುಗಡೆ ಮಾಡಲಿದೆ.['ಸಿಲಿಕಾನ್ ಸಿಟಿ'ಯಲ್ಲಿ ಕ್ರೈಮ್ ಮಾಡುತ್ತಿದ್ದಾರೆ ಶ್ರೀನಗರ ಕಿಟ್ಟಿ]

Sudeep, Ambareesh will release Srinagara Kitty Starrer 'Silicon City' Movie Audio

'ಸಿಲಿಕಾನ್ ಸಿಟಿ' ಚಿತ್ರತಂಡ ಇಂದು ಸಂಜೆ 7 ಗಂಟೆಗೆ ಧನಿಸುರುಳಿ ಬಿಡುಗಡೆ ಮಾಡುತ್ತಿದ್ದು, ವಿಶೇಷ ಅಂದ್ರೆ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಚಿತ್ರದ ಆಡಿಯೋ ರಿಲೀಸ್ ಮಾಡಲಿದ್ದಾರೆ. ಈ ಚಿತ್ರಕ್ಕೆ ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶ್ರೀನಗರ ಕಿಟ್ಟಿ ನಾಯಕನಾಗಿ ಅಭಿನಯಿಸಿರುವ 'ಸಿಲಿಕಾನ್ ಸಿಟಿ' ತಮಿಳಿನ 'ಮೆಟ್ರೋ' ಸಿನಿಮಾದ ರಿಮೇಕ್ ಚಿತ್ರವಾಗಿದ್ದು, ಇದನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆ ಬರೆದು ಮುರಳಿ ಗುರಪ್ಪ ಎಂಬುವವರು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮಂಜುಳ ಸೋಮಶೇಖರ್, ಎಂ ರವಿ, ಸಿ.ಆರ್.ಸುರೇಶ್, ಶ್ರೀನಗರ ಕಿಟ್ಟಿ ಬಂಡವಾಳ ಹೂಡಿದ್ದಾರೆ.[ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ]

Sudeep, Ambareesh will release Srinagara Kitty Starrer 'Silicon City' Movie Audio

ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಆಗಿರುವ 'ಸಿಲಿಕಾನ್ ಸಿಟಿ' ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ 'ಇಷ್ಟಕಾಮ್ಯ' ಚಿತ್ರದ ಖ್ಯಾತಿಯ ನಟಿ ಕಾವ್ಯ ಶೆಟ್ಟಿ ಜೋಡಿಯಾಗಿದ್ದಾರೆ. 'ಮದುವೆಯ ಮಮತೆಯ ಕರೆಯೋಲೆ' ಖ್ಯಾತಿಯ ನಟ ಸೂರಜ್ ಗೌಡ ಮತ್ತು ಚಿಕ್ಕಣ್ಣ ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Kiccha Sudeep, Rebel Star Ambareesh will release Srinagara Kitty Starrer 'Silicon City' Movie Audio today(March 10) at 7 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada