»   » ಶ್ರೀನಗರ ಕಿಟ್ಟಿ ಮನೆಗೆ ಬಂದ ಹೊಸ ಐಷಾರಾಮಿ ಅತಿಥಿ

ಶ್ರೀನಗರ ಕಿಟ್ಟಿ ಮನೆಗೆ ಬಂದ ಹೊಸ ಐಷಾರಾಮಿ ಅತಿಥಿ

Posted By:
Subscribe to Filmibeat Kannada

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಈಗ ಹೆಮ್ಮೆಯ ಐಷಾರಾಮಿ ವೋಲ್ವೋ ಎಕ್ಸ್ ಸಿ60 ಕಾರಿನ ಮಾಲೀಕರಾಗಿದ್ದಾರೆ. ಬಹುಪರಾಕ್ ಚಿತ್ರದ ನಿರ್ಮಾಪಕರು ಈ ಕಾರನ್ನು ಉಡುಗೊರೆಯಾಗಿ ಕಿಟ್ಟಿಗೆ ನೀಡಿದ್ದಾರೆ.

ಈ ಕಾರಿನ ಬೆಲೆ ಸರಿ ಸುಮಾರು ರೂ 63 ಲಕ್ಷ! ಇದು ಹೈ ಎಂಡ್ luxury version ಡಿ5 ಆವೃತ್ತಿಯಾಗಿದ್ದು, ವಿಶ್ವದ ಅತ್ಯಾಧುನಿಕ ಡೀಸಲ್ ಎಂಜಿನ್ ಹೊಂದಿದೆ.

ಈ ವರ್ಷದ ಸೂಪರ್ ಹಿಟ್ 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿಟ್ಟಿ ಯಾವುದೇ ಸಂಭಾವನೆ ಪಡೆಯದೇ ಚಿತ್ರದಲ್ಲಿ ನಟಿಸಿದ್ದರು ಎನ್ನುವ ಸುದ್ದಿಯಿದೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಚಿತ್ರದ ಯರ್ರಾಬಿರ್ರಿ ಯಶಸ್ಸಿನ ನಂತರ ಚಿತ್ರದ ಸುನಿ ನಿರ್ಮಿಸುತ್ತಿರುವ ಮುಂದಿನ ಚಿತ್ರ 'ಬಹುಪರಾಕ್'. ಇದರಲ್ಲಿ ಶ್ರೀನಗರ ಕಿಟ್ಟಿ ನಾಯಕನಟ.

 Srinagara Kitty gets Luxury gift from Director Suni

ಬಹುಪರಾಕ್ ಚಿತ್ರದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ಚಿತ್ರದ ಇನ್ನೊಂದು ವಿಶೇಷವೇನಂದರೆ ಸಿಂಪಲ್ಲಾಗ್ ಚಿತ್ರದಲ್ಲಿನ ಹೀರೋ ರಕ್ಷಿತ್ ಶೆಟ್ಟಿ ಬಹುಪರಾಕ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ವಿಶಿಷ್ಟ ಟ್ರೈಲರ್ ಈಗಾಗಲೇ ಕುತೂಹಲ ಮೂಡಿಸಿದ್ದು ಡೈಲಾಗುಗಳೇ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ಭರತ್ ಬಿಜೆ ಅವರ ಸಂಗೀತ, ಮನೋಹರ್ ಜೋಷಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ತಾರಾ ದಂಪತಿಗಳಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮಗಳಾದ ಮೇಘನಾ ರಾಜ್ ಚಿತ್ರದ ನಾಯಕಿ.

ಚಿತ್ರದ ಸಂಭಾಷಣೆ ಹರಿ ಅವರದ್ದು. ಹೇಮಂತ್ ಹಾಗೂ ಸುರೇಶ್ ಭೈರಸಂದ್ರ ಚಿತ್ರದ ನಿರ್ಮಾಪಕರು. ಕಿಟ್ಟಿ ತನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ತ್ರಿವಳಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಸುನಿಯವರ ಪ್ರಕಾರ ಇದೊಂದು ಪರಿಪೂರ್ಣ ಸಂದೇಶವನ್ನು ನೀಡುವ ಚಿತ್ರ.

English summary
Srinagar Kitty gets luxury car Volvo XC60. Car has been gifted by producers of Bahuparak. 
Please Wait while comments are loading...