For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ ಹರಿಹರನ್ ಕನಸು ನನಸಾಯಿತು!

  By Suneel
  |

  ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಗಮನ ಸೆಳೆಯುವುದು ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ನಟಿಯರು. ವಿಶೇಷ ಮತ್ತು ವಿಭಿನ್ನವಾದ ಉಡುಗೆ-ತೊಡಗೆಯಿಂದ ಯಾವುದೇ ಫಿಲ್ಮ್ ಫೇರ್ ನಲ್ಲಿ ನಟಿಯರು ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ.[ಹೊಸ ಚಾಲೆಂಜ್ ಗೆ ಸಿದ್ದವಾದ ಶ್ರುತಿ ಹರಿಹರನ್.!]

  ಅಂದಹಾಗೆ ಚಂದನವನದ ಗ್ಲಾಮರ್ ಗೊಂಬೆ ನಟಿ ರಾಗಿಣಿ ದ್ವಿವೇದಿ ದಕ್ಷಿಣ ಭಾರತದ 64ನೇ ಚಲನಚಿತ್ರೋತ್ಸವದಲ್ಲಿ ತಾವು ಧರಿಸಿದ್ದ ಡ್ರೆಸ್ ನಿಂದ ಅಭಿಮಾನಿಗಳ ಹೃದಯ ಕದ್ದಿದ್ದರು. ಅಲ್ಲದೇ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ಅವರ ಆ ಫೋಟೋಗಳಿಗೆ ಹಲವರು ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ರೀತಿ ಈಗ 'ಲೂಸಿಯ' ಬೆಡಗಿ ನಟಿ ಶ್ರುತಿ ಹರಿಹರನ್ ಫೋಟೋಗೆ ಅಭಿಮಾನಿಗಳು ಮನಸೋತು ಇನ್‌ಸ್ಟಗ್ರಾಂ ನಲ್ಲಿ ವಿಶ್ ಮಾಡಿದ್ದಾರೆ.

  ನಟಿ ಶ್ರುತಿ ಹರಿಹರನ್ 64 ನೇ ಜಿಯೋ ಫಿಲ್ಮ್ ಫೇರ್ ನಲ್ಲಿ ಕನ್ನಡ ವಿಭಾಗದಿಂದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಅಭಿನಯಕ್ಕೆ 'ಅತ್ಯುತ್ತಮ ನಟಿ' ವಿಮರ್ಶಕರ ಪ್ರಶಸ್ತಿ ಪಡೆದಿದ್ದಾರೆ. ಫಿಲ್ಮ್ ಫೇರ್ ನಲ್ಲಿ 'ಬ್ಯೂಟಿಫುಲ್ ಮನಸ್ಸುಗಳು' ನಟಿ ಧರಿಸಿದ್ದ ಡ್ರೆಸ್ ನಲ್ಲಿನ ಫೋಟೋವನ್ನು ಇನ್‌ಸ್ಟಗ್ರಾಂ ನಲ್ಲಿ ಅಪ್‌ ಲೋಡ್ ಮಾಡಿದ್ದರು. ಅಲ್ಲದೇ 'ಬಹುಕಾಂತೀಯವಾಗಿ ಹೊಳೆಯುತ್ತಿದ್ದ ವೈನ್ ಬಣ್ಣದ ಸಿಲ್ಕ್‌ ಗೌನ್ ಧರಿಸಿ 2017 ರ ಸೌತ್ ಫಿಲ್ಮ್ ಫೇರ್ ನ ರೆಡ್ ಕಾರ್ಪೆಟ್ ಮೇಲೆ ನಡೆದಾಡುವುದು ಒಂದು ರೀತಿಯ ಕನಸಾಗಿತ್ತು. ಅದು ನಿಜವಾಗಿದೆ' ಎಂದು ಬರೆದಿದ್ದಾರೆ. ಈ ಫೋಟೋ ನೋಡಿದ ಹಲವರು ಶ್ರುತಿ ಹರಿಹರನ್ ಗೆ ತುಂಬಾ ಸುಂದರವಾಗಿ ಕಾಣುತ್ತೀದ್ದೀರಿ, ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.[ಬುಲೆಟ್ ಏರಿ ಬಂದ ಮೂಗುತಿ ಸುಂದರಿ ಶ್ರುತಿ ಹರಿಹರನ್]

  ಇನ್ನೂ ಹಲವರು ಶ್ರುತಿ ಹರಿಹರನ್ ರೆಡ್ ವೈನ್ ಬಣ್ಣದ ಸಿಲ್ಕ್ ಗೌನ್ ಡ್ರೆಸ್ ಫೋಟೋ ನೋಡಿ, ನೀವು ಹಾಲಿವುಡ್ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿನ ಬೆಲ್ಲೆ ಪಾತ್ರಧಾರಿಯ ರೀತಿ ಕಾಣುತ್ತಿದ್ದೀರಿ, ಸರಳವಾಗಿದ್ದರೂ ಅತೀ ಸುಂದರವಾಗಿ ಕಾಣುತ್ತೀದ್ದೀರಿ, ಅದ್ಭುತವಾದ ಗ್ಲಾಮರ್ ಎಂದಿದ್ದಾರೆ.

  ಶ್ರುತಿ ಹರಿಹರನ್ ಜಿಯೋ ಫಿಲ್ಮ್ ಫೇರ್ ನಲ್ಲಿ ಧರಿಸಿದ್ದ ಡ್ರೆಸ್ ಅನ್ನು ಚೈತನ್ಯ ರಾವ್ ಎಂಬುವವರು ವಿನ್ಯಾಸ ಗೊಳಿಸಿದ್ದರು. ಆ ಡ್ರೆಸ್ ಧರಿಸಿದ್ದ ದಿನ ನಟಿಗೆ ಶಿವು ಗೌಡ ಎಂಬುವವರು ಮೇಕಪ್ ಮಾಡಿದ್ದರು. ಈ ಡ್ರೆಸ್ ನಲ್ಲಿ ಅವಾರ್ಡ್ ಸ್ವೀಕರಿಸುವುದು ಒಂದು ರೀತಿಯ ಕನಸಾಗಿತ್ತು. ಅದು ನನಸಾಗಿದೆ. ಅವರ ತಾಳ್ಮೆ, ಸಹಕಾರಕ್ಕೆ ಶ್ರುತಿ ಹರಿಹರನ್ ಧನ್ಯವಾದಗಳನ್ನು ತಿಳಿಸಿದ್ದಾರೆ.

  English summary
  Kannada Actress Sruthi hariharan has taken her instagram account to praise to her dress Designers, which she wore at 64th jio South Film Fare awards Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X