»   » 'ರಣವಿಕ್ರಮ'ನಿಗೆ ಸವಾಲಾದ ಸನ್ ಆಫ್ ಸತ್ಯಮೂರ್ತಿ

'ರಣವಿಕ್ರಮ'ನಿಗೆ ಸವಾಲಾದ ಸನ್ ಆಫ್ ಸತ್ಯಮೂರ್ತಿ

Posted By:
Subscribe to Filmibeat Kannada

ಫಾಸ್ಟ್ ಎಂಡ್ ಫ್ಯೂರಿಯಸ್ ಚಿತ್ರ ಬಿಡುಗಡೆಯಾದಾಗ ಚೆನ್ನಾಗಿ ಓಡುತ್ತಿದ್ದ 'ಕೃಷ್ಣಲೀಲಾ' ಚಿತ್ರವನ್ನು ಥಿಯೇಟರ್ ನಿಂದ ಎತ್ತಂಗಡಿ ಮಾಡಿದರು ಎಂದು ನಿರ್ದೇಶಕ ಶಶಾಂಕ್ ಮತ್ತು ನಿರ್ಮಾಪಕ ಅಜೇಯ್ ರಾವ್ ಆಕ್ರೋಶ ವ್ಯಕ್ತ ಪಡಿಸಿದ್ದರು.

ನಮ್ಮ ಚಿತ್ರಗಳಿಗೆ ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಪರಭಾಷಾ ಚಿತ್ರಗಳು ಬಿಡುಗಡೆ ಇಲ್ಲದೇ ಇದ್ದಾಗಲೂ ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಶತ್ರುವಾದ ಉದಾಹಾರಣೆಗಳು ನಮ್ಮ ಮುಂದಿವೆ. (ರಣವಿಕ್ರಮ ಚಿತ್ರದ ರಿಲೀಸ್ ಡೇಟ್ ನಿಗದಿ)

ಬಹಳಷ್ಟು ಬಾರಿ ನಾವು ಗಮನಿಸಿದಂತೆ ಸಮಸ್ಯೆ ಇರೋದು ನಮ್ಮಲ್ಲೇ, ಹೆಚ್ಚಿನ ಪರಭಾಷಾ ಚಿತ್ರಗಳಿಗೆ ಕನ್ನಡದ ನಿರ್ಮಾಪಕರು, ವಾಣಿಜ್ಯ ಮಂಡಳಿಯ ಸದಸ್ಯರಾಗಿದ್ದವರೇ ರಾಜ್ಯ ಡಿಸ್ಟ್ರಿಬ್ಯೂಷನ್ ಹಕ್ಕನ್ನು ಪಡೆದಿರುವುದು ಇದಕ್ಕೆ ಮೂಲ ಕಾರಣ. ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂಗೆ..

ತಾವು ಹೂಡಿದ ಬಂಡವಾಳ ಸೇಫ್ ಆಗ್ಬೇಕು ಅನ್ನೋ ಕಾರಣಕ್ಕಾಗಿ, ಬಿಡುಗಡೆಯಾಗುವ ಪರಭಾಷಾ ಚಿತ್ರದ ನಾಯಕರನ್ನು ಬೆಂಗಳೂರಿಗೆ ಕರೆಸಿ ಒತ್ತಾಯ ಪೂರ್ವಕವಾಗಿ ಅವರಿಂದ ಕನ್ನಡದಲ್ಲಿ ಒಂದೆರಡು ಮಾತನ್ನು ಉದುರಿಸುತ್ತಾರೆ.

ಆಗ ಇವರಿಗೆ ಕನ್ನಡ ಸಿನಿಮಾ, ಪರಭಾಷಾ ಸಿನಿಮಾ ಎನ್ನುವ ಭೇದಬಾವ ಇರುವುದಿಲ್ಲ. ಅದೇ ಇವರದೇ ನಿರ್ಮಾಣದ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿ ಪರಭಾಷಾ ಚಿತ್ರಗಳಿಂದ ಥಿಯೇಟರ್ ಸಿಕ್ಕಿಲ್ಲಾ ಅನ್ಕೊಳ್ಳಿ ಆಗ ಅವರಿಗೆ ಕನ್ನಡ ಪ್ರೇಮ ಮೈಯೆಲ್ಲಾ ಆವರಿಸಿಕೊಂಡು ಬಿಡುತ್ತೆ. ಮುಂದೆ ಓದಿ..

ವಿಚಾರಕ್ಕೆ ಬರುವುದಾದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ವರ್ಷದ ಬಹು ನಿರೀಕ್ಷಿತ 'ರಣವಿಕ್ರಮ' ಚಿತ್ರ ಇದೇ ಶುಕ್ರವಾರ (ಏ 10) ಹತ್ತಕ್ಕೆ ಬಿಡುಗಡೆಯಾಗುತ್ತಿದೆ.

ನಿರ್ಮಾಪಕರು ಜಯಣ್ಣ

ರಣವಿಕ್ರಮ ಚಿತ್ರಕ್ಕೆ ಬಂಡವಾಳ ಹೂಡಿ, ಹಂಚಿಕೆದಾರರಾಗಿರುವುದು ಕನ್ನಡ ಚಿತ್ರೋದ್ಯಮದ ವೃತ್ತಿಪರ ನಿರ್ಮಾಪಕಾಗಿರುವ ಜಯಣ್ಣ ಮತ್ತು ಭೋಗೇಂದ್ರ. ರಾಜ್ಯದ ಹೊರಭಾಗದಲ್ಲೂ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಜಯಣ್ಣ ಸಜ್ಜಾಗಿದ್ದಾರೆ.

ಸನ್ ಆಫ್ ಸತ್ಯಮೂರ್ತಿ

ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿರುವ ಸನ್ ಆಫ್ ಸತ್ಯಮೂರ್ತಿ ಚಿತ್ರ ಗುರುವಾರ (ಏ 9) ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಭೂಮಿಕೆಯಲ್ಲಿರುವುದು ಗಮನಿಸಬೇಕಾದ ಅಂಶ. ಇನ್ನು ರಣವಿಕ್ರಮ ಮತ್ತು ಸತ್ಯಮೂರ್ತಿ ಎರಡೂ ಚಿತ್ರಕ್ಕೆ ನಾಯಕಿ ಆದಾ ಶರ್ಮಾ.

ಕಮಲ್ ಅಭಿನಯದ ಉತ್ತಮ ವಿಲನ್

ಉತ್ತಮ ವಿಲನ್ ಚಿತ್ರದ ತೆಲುಗು ಕಾಪಿ ಇದೇ ಏಪ್ರಿಲ್ ಹತ್ತಕ್ಕೆ ಬಿಡುಗಡೆಯಾಗ ಬೇಕಿತ್ತು. ಆದರೆ ಅದು ಕಾರಣಾಂತರದಿಂದ ಮೇ ಒಂದಕ್ಕೆ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.

ಎರಡು ಹಿಂದಿ ಚಿತ್ರಗಳು

ಪರೇಶ್ ರಾವಲ್, ನಾಸಿರುದ್ದೀನ್ ಶಾ ಪ್ರಮುಖ ಭೂಮಿಕೆಯಲ್ಲಿರುವ ಧರಮ್ ಸಂಕಟ್ ಮತ್ತು ಸನ್ನಿ ಲಿಯೋನ್, ಜಯ್ ಭಾನುಶಾಲಿ, ರಜನೀಶ್ ದುಗ್ಗಲ್ ಅಭಿನಯದ ಏಕ್ ಪೆಹ್ಲಿ ಲೀಲಾ ಚಿತ್ರ ಕೂಡಾ ಇದೇ ವಾರ ಬಿಡುಗಡೆಯಾಗುತ್ತಿದೆ.

ದಾಖಲೆ ಚಿತ್ರಮಂದಿರದಲ್ಲಿ

ಇದುವರೆಗೆ ರಣವಿಕ್ರಮ ಚಿತ್ರಕ್ಕೆ ಅಂತಿಮವಾಗಿರುವ ಚಿತ್ರಗಳ ಸಂಖ್ಯೆ ರಾಜ್ಯದಲ್ಲಿ, ಮಲ್ಟಿಪ್ಲೆಕ್ಷ್ ಗಳೂ ಸೇರಿ 185+. ಇನ್ನು ಹೊರರಾಜ್ಯದ ದೆಹಲಿ, ಮುಂಬೈ, ಪುಣೆ, ಮೀರಜ್, ಹೈದರಾಬಾದ್, ಚೆನ್ನೈ, ಎರ್ನಾಕುಲಂ ಸೇರಿದಂತೆ 20+ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೂ, ತೆಲುಗು ಚಿತ್ರ ಬಿಡುಗಡೆ ಇಲ್ಲದಿದ್ದರೆ ಚಿತ್ರಮಂದಿರಗಳ ಸಂಖ್ಯೆಯಲ್ಲಿ ರಣವಿಕ್ರಮ ದಾಖಲೆ ಬರೆಯುತ್ತಿತ್ತು.

English summary
Stiff competition for Kannada movie Puneeth Rajkumar starer Rana Vikrama from Telugu Movie Son of Sathyamurthy
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada