»   » ಕಾಲೇಜ್ ಕ್ಯಾಂಪಸ್ ಗಳಲ್ಲಿ 'ಸ್ಟೂಡೆಂಟ್ಸ್' ಚಿತ್ರದ ಕಲರವ

ಕಾಲೇಜ್ ಕ್ಯಾಂಪಸ್ ಗಳಲ್ಲಿ 'ಸ್ಟೂಡೆಂಟ್ಸ್' ಚಿತ್ರದ ಕಲರವ

Posted By:
Subscribe to Filmibeat Kannada

'ಸ್ಟೂಡೆಂಟ್ಸ್' ಅಂತ ಚಿತ್ರದ ಟೈಟಲ್ ಇಟ್ಟ ಮೇಲೆ ಇದು ಸ್ಟೂಡೆಂಟ್ಸ್ ಗಳಿಗಾಗಿ ಮಾಡಿರುವ ಸಿನಿಮಾ ಎಂಬುದು ಪಕ್ಕಾ. ಹೀಗಾಗಿ, ಈ ಚಿತ್ರದ ಮುಖ್ಯ ಪ್ರೇಕ್ಷಕರೇ ವಿದ್ಯಾರ್ಥಿಗಳು. ಇನ್ನು ಇಂದಿನ ಸ್ಟೂಡೆಂಟ್ಸ್ ಗಳು ಒಂದು ಸಿನಿಮಾ ನೋಡ್ಬೇಕು ಅಂದ್ರೆ, ಅದರಲ್ಲಿ ಏನಾದರೂ ಸ್ಪೆಷಲ್ ಇದೆಯಾ ಎಂದು ಹುಡುಕ್ತಾರೆ. ಹಾಗಿದ್ದರೇ ಮಾತ್ರ ಆ ಚಿತ್ರಕ್ಕೆ ಹೋಗ್ತಾರೆ.

ಹೀಗೆ, ಕಾಲೇಜ್ ಸ್ಟೂಡೆಂಟ್ಸ್ ನಿರೀಕ್ಷೆ ಮಾಡುವಂತಹ ಸ್ಪೆಷಾಲಿಟಿಗಳನ್ನ ಹೊತ್ತು ಬರುತ್ತಿರುವ ಚಿತ್ರವೇ 'ಸ್ಟೂಡೆಂಟ್ಸ್'. ಸದ್ಯ ಬಿಡುಗಡೆಗೆ ಸಿದ್ದವಾಗಿರುವ 'ಸ್ಟೂಡೆಂಟ್ಸ್' ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದಕ್ಕಾಗಿ ಹೊಸ ರೀತಿಯ ಕ್ಯಾಂಪೈನ್ ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ ಕಾಲೇಜ್ ಗಳಿಗೆ ಭೇಟಿ ಕೊಟ್ಟು, ಚಿತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.[ಗಾಂಧಿನಗರಕ್ಕೆ ಬರ್ತಿದ್ದಾರೆ ಭರವಸೆಯ 'ಸ್ಟೂಡೆಂಟ್ಸ್']

Students Movie Team Visited To Colleges

ಅಷ್ಟೇ ಅಲ್ಲದೇ, ಕಾಲೇಜ್ ಫೆಸ್ಟ್ ಗಳಲ್ಲಿ ಮನರಂಜನೆ ಕಾರ್ಯಕ್ರಮಗಳನ್ನ 'ಸ್ಟೂಡೆಂಟ್ಸ್' ಚಿತ್ರತಂಡ ನೀಡುತ್ತಿದೆ. ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ಕೂಡ ನಡೆಸುತ್ತಿದ್ದಾರೆ.

Students Movie Team Visited To Colleges

ಕಳೆದ ಕೆಲ ದಿನಗಳ ಹಿಂದೆಯಷ್ಟೇ ವೃದ್ಧಾಶ್ರಮ ಹಾಗೂ ಸ್ಲಂ ನಗರಗಳಿಗೆ ಭೇಟಿ ಕೊಟ್ಟು ಜಾಗೃತಿ ಮೂಡಿಸಿದ್ದ 'ಸ್ಟೂಡೆಂಟ್ಸ್' ಚಿತ್ರತಂಡ, ಈಗ ಮತ್ತೊಂದು ಹಂತವನ್ನ ತಲುಪಿದ್ದು, ಈಗ ಕಾಲೇಜ್ ವಿದ್ಯಾರ್ಥಿಗಳನ್ನ ಸೆಳೆಯುತ್ತಿದ್ದಾರೆ.[ಸಮಾಜಕ್ಕೆ ಮಾದರಿಯಾದ 'ಸ್ಟೂಡೆಂಟ್ಸ್' ಚಿತ್ರತಂಡ]

Students Movie Team Visited To Colleges

ವಿವಿಧ ಬಗೆಯ ಕಾರ್ಯಕ್ರಮಗಳನ್ನ ಮಾಡುವ ಮೂಲಕ 'ಸ್ಟೂಡೆಂಟ್ಸ್' ಚಿತ್ರದ ಬಗ್ಗೆ ಆಸಕ್ತಿ, ಕುತೂಹಲವನ್ನ ಹುಟ್ಟುಹಾಕುತ್ತಿರುವ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಅವರು ಚಿತ್ರದ ಬಗ್ಗೆ ಭರವಸೆಯನ್ನ ವ್ಯಕ್ತಪಡಿಸುತ್ತಾರೆ. 'ಒಂದೊಳ್ಳೆ ಸಿನಿಮಾ ಮಾಡಿದಾಗ, ಅದಕ್ಕೆ ಬೇಕಾಗುವ ಪ್ರೇಕ್ಷಕ ವರ್ಗವನ್ನ ಸಿದ್ದ ಮಾಡಬೇಕು, ಆ ವರ್ಗಕ್ಕೆ ಸಿನಿಮಾನ ತಲುಪಿಸಬೇಕು, ಸ್ಟೂಡೆಂಟ್ಸ್, ವಿದ್ಯಾರ್ಥಿಗಳಿಗಾಗಿಯೇ ಮಾಡಿರುವ ಚಿತ್ರ, ಕೇವಲ ಮನರಂಜನೆ ಮಾತ್ರವಲ್ಲ, ಒಂದೊಳ್ಳೆ ಮೆಸೆಜ್ ಕೂಡ ಚಿತ್ರದಲ್ಲಿದೆ'' ಎನ್ನುತ್ತಾರೆ.

Students Movie Team Visited To Colleges

ಅಂದ್ಹಾಗೆ, 'ಸ್ಟೂಡೆಂಟ್ಸ್' ಚಿತ್ರ ಜೂನ್ ತಿಂಗಳಲ್ಲಿ ತೆರೆಕಾಣುತ್ತಿದೆ. ಚಿತ್ರದಲ್ಲಿ ಸಚಿನ್ ಪುರೋಹಿತ್, ಸಚಿನ್ ಜಿ, ಮತ್ತು ಕಿರಣ್ ರಾಯಬಾಗಿ ಮೂವರು ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇವರಿಗೆ ಭವ್ಯ ಕೃಷ್ಣ, ಅಂಕಿತ, ಮತ್ತು ಸುವರ್ಣ ಶೆಟ್ಟಿ ಜೋಡಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣ ಮಾಡಿದ್ದಾರೆ ಸಂತೋಷ್ ಕುಮಾರ್.

English summary
Kannada Movie Students Team Visited To Atria College At Hebbal For Film Promotion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada