»   » ಏಪ್ರಿಲ್ 23 ರಿಂದ ಬ್ರಿಟನ್ ನಲ್ಲಿ 'ಹೆಬ್ಬುಲಿ' ಘರ್ಜನೆ

ಏಪ್ರಿಲ್ 23 ರಿಂದ ಬ್ರಿಟನ್ ನಲ್ಲಿ 'ಹೆಬ್ಬುಲಿ' ಘರ್ಜನೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಾಗಿದ್ದ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಉಡೀಸ್ ಮಾಡಿ ಹೊಸ ದಾಖಲೆ ಬರೆದ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ 47 ದಿನಗಳನ್ನು ಪೂರೈಸಿರುವ 'ಹೆಬ್ಬುಲಿ' ಚಿತ್ರ ಏಪ್ರಿಲ್ 23 ರಂದು ಬ್ರಿಟನ್ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]

Sudeep Starrer 'Hebbuli' to release in uk on 23rd april

'ಹೆಬ್ಬುಲಿ' ಚಿತ್ರವನ್ನು ಬ್ರಿಟನ್ ನಲ್ಲಿ KUK ಟಾಕೀಸ್ ರಿಲೀಸ್ ಮಾಡುತ್ತಿದ್ದು, ಏಪ್ರಿಲ್ 23 ರಂದು ಮೊದಲಿಗೆ ಸ್ಕಾಟ್ ಸಿನೆಮಾ ಬ್ರಿಸ್ಟೊಲ್ ನಲ್ಲಿ ಬೆಳಿಗ್ಗೆ 10.30 ಕ್ಕೆ ತೆರೆಕಾಣಲಿದೆ. ನಂತರ ಮಧ್ಯಾಹ್ನ 1.30 ಕ್ಕೆ ಲಂಡನ್ ಸಫಾರಿಯಲ್ಲಿ, ಮಧ್ಯಾಹ್ನ 3 ಗಂಟೆಗೆ Ipswich ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನವಾಗಲಿದೆ. 'ಹೆಬ್ಬುಲಿ' ಬಹುಬೇಡಿಕೆಯೊಂದಿಗೆ ಏಪ್ರಿಲ್ 7 ರಂದು ಕತಾರ್ ನಲ್ಲಿ ವಿಶೇಷ ಪ್ರದರ್ಶನಗೊಂಡಿತ್ತು.[ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!]

Sudeep Starrer 'Hebbuli' to release in uk on 23rd april

ನಿರ್ದೇಶಕ ಎಸ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದ 'ಹೆಬ್ಬುಲಿ' ಚಿತ್ರವನ್ನು ರಘುನಾಥ್ ಮತ್ತು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಎ.ಕರುಣಾಕರ್ ಛಾಯಾಗ್ರಹಣ ನಿರ್ವಹಣೆ ಮಾಡಿದ್ದರು. 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಅಮಲಾ ಪೌಲ್ ಜೊತೆಯಾಗಿದ್ದು, ವಿ.ರವಿಚಂದ್ರನ್ ಪಿ.ರವಿಶಂಕರ್, ಕಬೀರ್ ದುಹಾನ್ ಸಿಂಗ್, ರವಿಕಿಶನ್, ಚಿಕ್ಕಣ್ಣ, ಅವಿನಾಶ್ ಮತ್ತು ಇತರರು ಅಭಿನಯಿಸಿದ್ದಾರೆ.

English summary
After becoming a huge hit in the Middle East, Abhinaya Chakravarthy Sudeep Starrer 'Hebbuli' to release in uk on 23rd april.
Please Wait while comments are loading...